ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿಗಳ ಕೈಯಿಂದ ಸಿಗರೇಟ್ ಕಿತ್ತುಕೊಂಡ ಸರ್ಕಾರ

By Mahesh
|
Google Oneindia Kannada News

ಬೆಂಗಳೂರು, ನ.03: ಬೆಂಗಳೂರಿನಲ್ಲಿರುವ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಬಯೋ ಟೆಕ್ನಾಲಜಿ ಕೇಂದ್ರಗಳ ಕ್ಯಾಂಪಸ್ ಗಳಲ್ಲಿ ಧೂಮಪಾನ ನಿಷೇಧಿಸುವಂತೆ ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು ಜಾರಿಯಲ್ಲಿದ್ದು, ಈ ನಿಯಮ ಐಟಿ- ಬಿಟಿ ಕಂಪನಿಗಳಿಗೂ ಆನ್ವಯವಾಗಲಿದೆ.

ಐಟಿ, ಬಿಟಿ, ಐಟಿಯೇತರ ಸಂಸ್ಥೆಗಳಲ್ಲಿ ಸ್ಮೋಕಿಂಗ್ ಜೋನ್ ಎಂದು ಪ್ರತ್ಯೇಕ ಸ್ಥಳ ಕಾಯ್ದಿರಿಸಿ, ಟೆಕ್ಕಿಗಳು ಸಮಯ ಸಿಕ್ಕಾಗಲೆಲ್ಲಾ ಸಿಗರೇಟ್ ಸೇದಲು ಸಂಸ್ಥೆಗಳು ನೆರವಾಗುತ್ತಿವೆ. ಧೂಮಪಾನ ವಿಷಯದಲ್ಲಿ ಪುರುಷ ಹಾಗೂ ಮಹಿಳಾ ಉದ್ಯೋಗಿಗಳು ಸಮಾನತೆ ಸಾಧಿಸಿದ್ದು, ಐಟಿ ಬಿಟಿ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ ಈ ನಿಯಮ ಕಟ್ಟುನಿಟ್ಟಾಗಿ ಪಾಲಿಸುವುದು ಅನಿವಾರ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆದೇಶಿಸಿದೆ.[ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]

Karnataka government orders Bengaluru IT BT companies to ban smoking on campus

ಐಟಿ ಸಂಸ್ಥೆಗಳಿಗೆ ಈ ಕುರಿತಂತೆ ಸುತ್ತೋಲೆ ಕಳಿಸಲಾಗಿದೆ ಎಂದು ಐಟಿ, ಬಿಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ ಮಂಜುಳಾ ಅವರು ಹೇಳಿದ್ದಾರೆ. ಇಂಡಿಯಾ ಎಲೆಕ್ಟ್ರಾನಿಕ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್, ಅನಿಮೇಷನ್, ವಿಷುಯಲ್ ಎಫೆಕ್ಟ್, ಗೇಮ್ಸ್ ಅಂಡ್ ಕಾಮಿಕ್, ನಾಸ್ಕಾಂ ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.[ಹೊಗೆ ಬಿಟ್ಟರೆ 20 ಸಾವಿರ ರೂಪಾಯಿ ದಂಡ!]

Cigarettes and Other Tobacco Products Act 2003 (COTPA) ಕಾಯ್ದೆಯ ಸೆಕ್ಷನ್ 4 ರ ಅನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಶಿಕ್ಷಾರ್ಹ ಅಪರಾಧವಾಗುತ್ತದೆ.[ಧೂಮಪಾನ ಮಾಡುವುದು ಬಿಡುವುದು ನಿಮ್ಮಿಷ್ಟ!]

ಸುತ್ತೋಲೆ ಪ್ರಕಾರ : COTPA ಅನ್ವಯ ಎಲ್ಲಾ ನಿಯಮಗಳನ್ನು ಜಾರಿಗೊಳಿಸಬೇಕು. ಸಂಸ್ಥೆಯ ಪ್ರತಿ ಮಹಡಿ, ಮೆಟ್ಟಿಲು, ಲಿಫ್ಟ್ ದ್ವಾರದ ಮುಂದೆ ಧೂಮಪಾನ ನಿಷೇಧದ ಬೋರ್ಡ್ ಹಾಕಿರಬೇಕು.ತಂಬಾಕು ಸೇವನೆ ಬಗ್ಗೆ ಉದ್ಯೋಗಿಗಳಿಗೆ ತಿಳಿ ಹೇಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಸ್ವಸಹಾಯ ಸಂಘಗಳನ್ನು ಬಳಸಬಹುದು.ಲಕ್ಷಾಂತರ ಮಂದಿ ಉದ್ಯೋಗಿಗಳು ಈ ಸುತ್ತೋಲೆಯನ್ನು ಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.

English summary
Karnataka government ordered IT and BT companies to ban smoking in their campus to comply with the law prohibiting smoking in public spaces.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X