• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

10.8 ಕೋಟಿ ಚಂದಾದಾರರನ್ನು ಹೊಂದಿದ ಜಿಯೋ

By Mahesh
|

ನವದೆಹಲಿ, ಏಪ್ರಿಲ್ 25: "ಮಾರ್ಚ್ 31, 2017ರ ತನಕದ ಅಂಕಿ ಅಂಶದ ಪ್ರಕಾರ, ಜಿಯೋ ತನ್ನ ಕ್ಷಿಪ್ರಗತಿಯನ್ನು ಮುಂದುವರಿಸಿದ್ದು, ನೆಟ್‌ವರ್ಕ್‌ನಲ್ಲಿ 10.89 ಕೋಟಿ ಚಂದಾದಾರಿದ್ದರು," ಎಂದು ರಿಲಯನ್ಸ್ ಜಿಯೋ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತಿ ತಿಂಗಳಿಗೆ 110 ಕೋಟಿ ಗಿಗಾಬೈಟ್ ಗಿಂತ ಹೆಚ್ಚು ಡಾಟಾ ಟ್ರಾಫಿಕ್ ಮತ್ತು ದಿನಕ್ಕೆ 220 ಕೋಟಿ ಧ್ವನಿ ಮತ್ತು ವೀಡಿಯೋ ನಿಮಿಷಗಳೊಂದಿಗೆ ಜಿಯೋ ಡಾಟಾ ಪಡೆಯುವಿಕೆಯ ನಿಟ್ಟಿನಲ್ಲಿ "ಜಾಗತಿಕವಾಗಿ ಅತ್ಯಂತ ದೊಡ್ಡ ಜಾಲ"ವಾಗಿದೆ ಮತ್ತು ಮೊಬೈಲ್ ಡಾಟಾ ಬಳಕೆಯಲ್ಲಿ ಭಾರತವನ್ನು ಮುಂಚೂಣಿಗೆ ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದೆ. [4ಜಿ ಸ್ಪೀಡ್ : ಏರ್ ಟೆಲ್ ಹಿಂದಿಕ್ಕಿದ ರಿಲಯನ್ಸ್ ಜಿಯೋ]

"ಜಿಯೋ ಬಳಕೆದಾರರು ಇಂದು ಸುಮಾರು ಅಮೆರಿಕದಲ್ಲಿನ ಎಲ್ಲಾ ಮೊಬೈಲ್ ನೆಟ್‌ವರ್ಕ್‌ಗಳಷ್ಟು ಮತ್ತು ಚೀನಾದ ಮೊಬೈಲ್ ನೆಟ್‌ವರ್ಕ್‌ಗಳ ಶೇ.50ರಷ್ಟು ಡಾಟಾ ಬಳಸುತ್ತಿದ್ದಾರೆ. ಭಾರತ ಡಿಜಿಟಲೀಕರಣವನ್ನು ಅಳವಡಿಸಿಕೊಳ್ಳಲಿದೆ ಮತ್ತು ಡಿಜಿಟಲ್ ಜೀವನ ವಿಶ್ವದ ಬೇರೆಡೆಗಿಂತ ವೇಗವಾಗಿರಲಿದೆ ಎಂಬುದರ ಸ್ಪಷ್ಟ ಸೂಚನೆ ಇದಾಗಿದೆ," ಎಂದು ಹೇಳಿಕೆಯಲ್ಲಿ ಹೇಳಿದೆ.

5ಜಿ ಅನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಭವಿಷ್ಯ ಸಿದ್ಧ ನೆಟ್‌ವರ್ಕ್ ಅನ್ನು ತಾನು ನಿರ್ಮಿಸಿದ್ದೇನೆ ಎಂದು ಮುಖೇಶ್ ಅಂಬಾನಿ ಒಡೆತನದ ಈ ಟೆಲಿಕಾಂ ಸಂಸ್ಥೆ ಹೇಳಿಕೊಂಡಿದೆ.[ಧನ್ ಧನಾ ಧನ್ ವಿರುದ್ಧ ಏರ್ ಟೆಲ್ ತ್ರಿಬ್ಬಲ್ ಆಫರ್]

"ಟ್ರಾಯ್ ಮೈಸ್ಪೀಡ್ ಪೋರ್ಟನ್ ಪ್ರಕಾರ, ಜಿಯೋದ ಸರಾಸರಿ ಡೌನ್‌ಲೋಡ್ ಸ್ಪೀಡ್ ಮಾರ್ಚ್ 2017ರಲ್ಲಿ, 15 ಎಂಬಿಪಿಎಸ್ ಇತ್ತು, ಇದು ಇತರೆ ಆಪರೇಟರ್‌ಗಳಿಗಿಂತ ಎರಡು ಪಟ್ಟಾಗಿದೆ. ಜಿಯೋ ವಿಶ್ವದ ಅತಿದೊಡ್ಡ ಗ್ರೀನ್‌ಫೀಲ್ಡ್ 4ಜಿ ಎಲ್‌ಟಿಇ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಆಗಿದ್ದು, 1,00,000ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಹೊಂದಿದೆ. ಮುಂದಿನ ತಿಂಗಳುಗಳಲ್ಲಿ ಇನ್ನೂ 1,00,000 ಟವರ್‌ಗಳನ್ನು ಇದು ಸೇರ್ಪಡೆಗೊಳಿಸಲಿದೆ" ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇದಲ್ಲದೆ, ಜಿಯೋ ತನ್ನ ಫೈಬರ್ - ಟು- ಹೋಮ್ (ಎಫ್‌ಟಿಟಿಎಚ್) ಉದ್ಯಮವನ್ನು ವಿಸ್ತರಿಸುತ್ತಿದ್ದು, ಕೆಲವು ಸ್ಥಳಗಳಲ್ಲಿ ಬೀಟಾ ಟ್ರಯಲ್ ಅನ್ನು ನೀಡುತ್ತಿದೆ. "ಮುಂದಿನ ತಿಂಗಳುಗಳಲ್ಲಿ ಬೀಟಾ ಟ್ರಯಲ್‌ಗಳನ್ನು ವಿಸ್ತರಿಸಲಾಗುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಂಪನಿಯು ಸೆಪ್ಟೆಂಬರ್ 5, 2016ರಂದು ಉಚಿತವಾಗಿ 4ಜಿ ಸೇವೆಯನ್ನು ವಾಣಿಜ್ಯಿಕ ಬಿಡುಗಡೆಗೊಳಿಸಿತು ಮತ್ತು ಪ್ರತಿದಿನಕ್ಕೆ ಸರಾಸರಿ 6 ಲಕ್ಷ ಚಂದಾದಾರರ ದರದಲ್ಲಿ ಕೇವಲ 83 ದಿನಗಳಲ್ಲಿ 5 ಕೋಟಿ, ಮತ್ತು 170 ದಿನಗಳಲ್ಲಿ 10 ಕೋಟಿ ಚಂದಾದಾರರ ಸಂಖ್ಯೆಯನ್ನು ದಾಟಿತ್ತು.

ಏಪ್ರಿಲ್ 1ರಿಂದ ಮೊಬೈಲ್ ಸೇವೆಗಳಿಗೆ ಕಂಪನಿಯು ಶುಲ್ಕ ವಿಧಿಸಲು ಆರಂಭಿಸಿತು.ಇದೀಗ ಜಿಯೋ ಪ್ರೈಮ್ ಎಂಬ ಸ್ಕೀಮ್ ಅನ್ನೂ ನೀಡುತ್ತಿದೆ.

ಜಿಯೋ ಪ್ರೈಮ್ ಅನ್ನು ಆಯ್ಕೆ ಮಾಡಿಕೊಳ್ಳುವ ಜಿಯೋ ಚಂದಾದಾರರು 99 ರೂ.ಗಳ ಒಂದು ಬಾರಿಯ ಶುಲ್ಕ ಪಾವತಿಸಬೇಕಾಗುತ್ತದೆ ಮತ್ತು 303 ನಿಂದ ಆರಂಭಗೊಳ್ಳುವ ಮಾಸಿಕ ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕು. ಜಿಯೋ ಪ್ರೈಮ್ ಸದಸ್ಯರಿಗೆ 309 ರೂ.ನಿಂದ ಆರಂಭಗೊಳ್ಳುವ ಇನ್ನೊಂದು ಮಾಸಿಕ ಯೋಜನೆಯನ್ನೂ ಪರಿಚಯಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New telecom operator Reliance Jio plans to double its network size by adding 1 lakh additional mobile sites in coming months.Jio continues its rapid ramp-up of subscriber base and as of March 31, 2017, there were 108.9 million subscribers on the network," Reliance Jio said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more