ಜಿಯೋಫೈ ಜತೆಗೆ 100ಜಿಬಿ 4ಜಿ ಡೇಟಾ, ಜಿಯೋ ಆಫರ್
ಬೆಂಗಳೂರು, ಏಪ್ರಿಲ್ 18: ಗೂಗಲ್ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿರುವ ಗೂಗಲ್ ಹೋ ಸಾಧನಗಳನ್ನು ರಿಲಯನ್ಸ್ ರೀಟೈಲ್ ಮಳಿಗೆಯಿಂದ ಖರೀದಿಸುವ ಗ್ರಾಹಕರಿಗೆ, ಉಚಿತ ಜಿಯೋಫೈ ಜತೆಗೆ 100ಜಿಬಿ 4ಜಿ ಡೇಟಾ ನೀಡಲು ರಿಲಯನ್ಸ್ ಜಿಯೋ ಮುಂದಾಗಿದೆ.
ಗೂಗಲ್ ಹೋಮ್ ಹಾಗೂ ಗೂಗಲ್ ಮಿನಿ ಸ್ಮಾರ್ಟ್ ಸ್ಪೀಕರ್ ಗಳು ಇತ್ತೀಚೆಗೆ ಮಾರುಕಟ್ಟೆ ಪ್ರವೇಶಿಸಿದ್ದು, ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಗೂಗಲ್ ಅಸಿಸ್ಟಂಟ್ ನೆರವಿನಿಂದ ವಾಯ್ಸ್ ಕಮಾಂಡ್ ಮೂಲಕ ಸ್ಮಾರ್ಟ್ ಸ್ಪೀಕರ್ ಗಳು ಕಾರ್ಯ ನಿರ್ವಹಿಸುತ್ತವೆ.
ಸದ್ಯಕ್ಕೆ ಫ್ಲಿಪ್ ಕಾರ್ಟಿನಲ್ಲಿ ಲಭ್ಯವಿರುವ ಗೂಗಲ್ ಹೋಮ್ ನಂತರ ಆಯ್ದ ಮಳಿಗೆಗಳಲ್ಲಿ ಲಭ್ಯವಾಗಲಿವೆ.

ಜಿಯೋ ಆಫರ್ : ಗೂಗಲ್ ಜಿಯೋಫೈ ಡೇಟಾ ವೋಚರ್ ಗಳು ಲಭ್ಯವಾಗಲಿದೆ. 10 ಜಿಬಿಯುಳ್ಳ 10 ವೋಚರ್ ಗಳು ಒಂದು ವರ್ಷದ ಅವಧಿ ತನಕ ಲಭ್ಯವಿರಲಿದೆ. ಇದನ್ನು ಮೈ ಜಿಯೋ ಆಪ್ ಮೂಲಕ ಪ್ರೀಪೇಯ್ಡ್ ಗ್ರಾಹಕರು ಪಡೆದುಕೊಳ್ಳಬಹುದು. ಜಿಯೋಫೈ ಸಾಧನಕ್ಕಾಗಿ 149 ಹಾಗೂ 99ರುಗಳ ರೀಚಾರ್ಜ್ ಸೌಲಭ್ಯವಿದೆ.












Click it and Unblock the Notifications