ರಿಲಯನ್ಸ್ ನಿಂದ ಹೊಸವರ್ಷಕ್ಕೆ ಎರಡು ಹೊಸ ಯೋಜನೆಗಳು

Posted By:
Subscribe to Oneindia Kannada
   ಜಿಯೋನಿಂದ ಹೊಸವರ್ಷಕ್ಕೆ ಎರಡು ಹೊಸ ಆಫರ್ಸ್ | Oneindia Kannada

   ಬೆಂಗಳೂರು, ಡಿಸೆಂಬರ್ 24: ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ 2018 ಹೆಸರಿನಲ್ಲಿ ಎರಡು ಹೊಸ ಪ್ಲಾನ್‍ಗಳು ಚಂದಾದಾರರಿಗೆ ನೀಡುತ್ತಿದೆ. ಅಧಿಕ ಡಾಟಾ ಅನುಕೂಲಗಳೊಂದಿಗೆ ಹೊಸ ವರ್ಷಕ್ಕೆ ಹೊಸ ಹುರುಪು ನೀಡಲಿವೆ ಎಂದು ಸಂಸ್ಥೆ ಪ್ರಕಟಿಸಿದೆ.

   ಜಿಯೋ ತನ್ನ ಗ್ರಾಹಕರಿಗೆ 2018ನೇ ಹೊಸ ವರ್ಷಕ್ಕೆ 199 ರೂ. ಮತ್ತು 299 ರೂ.ನ 2 ಹೊಸ ಕ್ರಾಂತಿಕಾರಿ ಪ್ರಿಪೇಯ್ಡ್ ಪ್ಲಾನ್‍ಗಳೊಂದಿಗೆ ಶುಭಾಶಯ ಕೋರುತ್ತಿದೆ. ಹ್ಯಾಪಿ ನ್ಯೂ ಇಯರ್ 2018 ಪ್ಲಾನ್‍ಗಳು ಚಂದಾದಾರರಿಗೆ ಅಧಿಕ ಡಾಟಾ ಅನುಕೂಲಗಳನ್ನು ತರಲಿವೆ.

   Jio launches HAPPY NEW YEAR 2018 plans

   199 ರೂ. ನ ಪ್ಲಾನ್ : ಉಚಿತ ಧ್ವನಿ, ಅನಿಯಮಿತ ಡಾಟಾ (1.2 ಜಿಬಿ ಹೈ ಸ್ಪೀಡ್ 4ಜಿ ಡಾಟಾ ಪ್ರತಿ ದಿನ), ಅನಿಯಮಿತ ಎಸ್‍ಎಂಎಸ್ ಮತ್ತು ಪ್ರೀಮಿಯಂ ಜಿಯೋ ಆಪ್‍ಗಳ ಚಂದಾವನ್ನು ಎಲ್ಲಾ ಜಿಯೋ ಪ್ರೈಮ್ ಸದಸ್ಯರಿಗೆ 28 ದಿನಗಳ ಕಾಲ ಒದಗಿಸಲಿದೆ.

   299 ರೂ. ನ ಪ್ಲಾನ್: ಅಧಿಕ ಡಾಟಾ ಬಳಕೆದಾರರಿಗೆ, ಉಚಿತ ಧ್ವನಿ, ಅನಿಯಮಿತ ಡಾಟಾ (2 ಜಿಬಿ ಹೈ ಸ್ಪೀಡ್ 4ಜಿ ಡಾಟಾ ಪ್ರತಿದಿನ), ಅನಿಯಮಿತ ಎಸ್‍ಎಂಎಸ್ ಮತ್ತು ಪ್ರೀಮಿಯಂ ಜಿಯೋ ಆಪ್‍ಗಳ ಲಭ್ಯತೆ ಎಲ್ಲಾ ಜಿಯೋ ಪ್ರೈಮ್ ಸದಸ್ಯರಿಗೆ 28 ದಿನಗಳ ಕಾಲ ಒದಗಿಸಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Jio launches HAPPY NEW YEAR 2018 plans. This two new prepaid plans usher in the New Year with higher data benefits for subscribers.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ