ಜಿಯೋ ಭರ್ಜರಿ ಆಫರ್: ಐದು ತಿಂಗಳು ಉಚಿತ ಡೇಟಾ

ನವದೆಹಲಿ, ಆಗಸ್ಟ್‌ 15: ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ರಿಲಯನ್ಸ್ ಜಿಯೋ ಸ್ವಾತಂತ್ರ್ಯ ದಿನದ ವಿಶೇಷ ಕೊಡುಗೆಯಾಗಿ ಆಫರ್‌ವೊಂದನ್ನು ಬಿಟ್ಟಿದೆ. ಐದು ತಿಂಗಳ ಉಚಿತ 4 ಜಿ ಡೇಟಾ ಮತ್ತು ಪೂರಕ ಜಿಯೋ-ಟು-ಜಿಯೋ ಫೋನ್ ಕರೆಗಳನ್ನು ತನ್ನ ಜಿಯೋಫೈ 4 ಜಿ ವೈರ್‌ಲೆಸ್ ಹಾಟ್‌ಸ್ಪಾಟ್‌ ಮೂಲಕ ನೀಡಿದೆ.

ಜಿಯೋಫೈ ಬೆಲೆಯನ್ನು 1,999 ರೂ. ನಿಗದಿಪಡಿಸಲಾಗಿದೆ. ಈ ಕೊಡುಗೆಯ ಲಾಭ ಪಡೆಯಲು, ಖರೀದಿದಾರರು ಮೊದಲು ಅಸ್ತಿತ್ವದಲ್ಲಿರುವ ಜಿಯೋಫೈ ಪ್ಲಾನ್ ತೆಗೆದುಕೊಳ್ಳಬೇಕಾಗುತ್ತದೆ.

ಮೂರು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು

ಮೂರು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು

ರಿಲಯನ್ಸ್ ಡಿಜಿಟಲ್ ಸ್ಟೋರ್‌ನಿಂದ ಜಿಯೋಫೈ ಹಾಟ್‌ಸ್ಪಾಟ್ ಖರೀದಿಸಿದ ನಂತರ ಮತ್ತು ಜಿಯೋ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಗ್ರಾಹಕರು JioFi ಉಪಕರಣವನ್ನು ಸಕ್ರೀಯಗೊಳಿಸಲು ಮೂರು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾದಬೇಕಾಗಲಿದೆ. ಜಿಯೋಫೈ ಸಾಧನದಲ್ಲಿ ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರ, ಕೆಲವೇ ಸಮಯದಲ್ಲಿ ಪ್ಲಾನ್ ಗಳ ಬೆನಿಫಿಟ್ ಗಳು ನಿಮಗೆ ಸಿಗಲು ಆರಂಭಿಸಲಿವೆ. ಆ್ಯಕ್ಟಿವೆಶನ್ ಸ್ಟೇಟಸ್ ಅನ್ನು ನೀವು ನಿಮ್ಮ MyJio ಆಪ್ ಮೇಲೆ ಪರಿಶೀಲಿಸಬಹುದಾಗಿದೆ. ಗ್ರಾಹಕರು ಈ ಕೊಡುಗೆಯನ್ನು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಕೂಡ ಮಾಹಿತಿ ಪಡೆಯಬಹುದಾಗಿದೆ.

199 ರೂಪಾಯಿ ಯೋಜನೆ

199 ರೂಪಾಯಿ ಯೋಜನೆ

ಅತ್ಯಂತ ಒಳ್ಳೆ ಕೊಡುಗೆಗಳಲ್ಲಿ ಇದು ಒಂದಾಗಿದೆ ರೂ. 199, ಇದು ಪ್ರತಿದಿನ 1.5 ಜಿಬಿ ಡೇಟಾವನ್ನು ನೀಡುತ್ತದೆ ಮತ್ತು ಇದು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ನೀವು ಹೆಚ್ಚುವರಿ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆಯಲು ರೂ. 99 ಪಾವತಿಸಬೇಕು. ಈ ಪ್ಲಾನ್ ಖರೀದಿಸಿದ ಬಳಿಕ ಗ್ರಾಹಕರು ರೂ.99 ಪಾವತಿಸಿ JioPrime ಮೆಂಬರ್ ಷಿಪ್ ಆಕ್ಟಿವೇಟ್ ಮಾಡಿಕೊಳ್ಳಬೇಕು. ಪ್ರತಿದಿನ ಡೇಟಾ ಹೊರತುಪಡಿಸಿ ಜಿಯೋ ನೆಟ್ವರ್ಕ್ ಮೇಲೆ ಅನಿಯಮಿತ ಕಾಲಿಂಗ್ ಹಾಗೂ ಇತರ ನೆಟ್ವರ್ಕ್ ಗಾಗಿ 1000 ನಿಮಿಷ ಕಾಲಿಂಗ್ ಜೊತೆಗೆ ನಿತ್ಯ 100 ಉಚಿತ SMSಗಳು ಸಿಗಲಿವೆ.

249 ರೂಪಾಯಿ ಯೋಜನೆ

249 ರೂಪಾಯಿ ಯೋಜನೆ

JioFi ಎರಡನೇ ಕೊಡುಗೆ ರೂ. 249. ಇದು ಪ್ರತಿದಿನ 2 ಜಿಬಿ ಡೇಟಾವನ್ನು 28 ದಿನಗಳವರೆಗೆ ಒದಗಿಸುತ್ತದೆ. ಇಲ್ಲಿಯೂ ನೀವು ಹೆಚ್ಚುವರಿ 99 ರೂಪಾಯಿ ಪಾವತಿಸಿ ಜಿಯೋ ಪ್ರೈಮ್ ಸದಸ್ಯತ್ವವನ್ನ ಆ್ಯಕ್ಟಿವೇಟ್ ಮಾಡಿಕೊಳ್ಳಬೇಕು. ಇದರಲ್ಲಿ ದಿನಕ್ಕೆ 2 ಜಿಬಿ ಡೇಟಾ, ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಇತರೆ ಮೊಬೈಲ್ ನೆಟ್‌ವರ್ಕ್‌ಗೆ 1000 ನಿಮಿಷಗಳು ಕರೆ ಮಾಡಬಹುದು. ಜೊತೆಗೆ 100 ರಾಷ್ಟ್ರೀಯ ಎಸ್‌ಎಂಎಸ್ 112 ದಿನಗಳವರೆಗೆ ಪಡೆಯಿರಿ.

349 ರೂಪಾಯಿ ಯೋಜನೆ

349 ರೂಪಾಯಿ ಯೋಜನೆ

ಮೂರನೇ ಆಯ್ಕೆ 349 ರೂಪಾಯಿ ಆಗಿದ್ದು, 28 ದಿನಗಳವರೆಗೆ ಪ್ರತಿದಿನ 3 ಜಿಬಿ ಡೇಟಾ ಸೌಲಭ್ಯವಿದೆ. ರೂ. 99 ಹೆಚ್ಚುವರಿಯಾಗಿ ಪಾವತಿಸಿ ನೀವು ಜಿಯೋ ಪ್ರೈಮ್ ಸದಸ್ಯತ್ವ ಪಡೆಯಬೇಕು. ಇದರಲ್ಲಿ ಅನಿಯಮಿತ ಜಿಯೋ ಟು ಜಿಯೋ ಕರೆಗಳು, ಜಿಯೋಯಿಂದ ಇತರ ಮೊಬೈಲ್ ನೆಟ್‌ವರ್ಕ್ ಕರೆಗಳಿಗೆ 1,000 ನಿಮಿಷಗಳ ಉಚಿತ ಕರೆ ಸೌಲಭ್ಯವಿದೆ. 84 ದಿನಗಳವರೆಗೆ ದಿನಕ್ಕೆ 100 ರಾಷ್ಟ್ರೀಯ ಎಸ್‌ಎಂಎಸ್ ಪಡೆಯುತ್ತೀರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+