• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬರಲಿದೆ ಬ್ರಾಡ್ ಬ್ಯಾಂಡ್ ಸೌಕರ್ಯವುಳ್ಳ ಜಿಯೊ ಡಿಟಿಎಚ್ ಬಾಕ್ಸ್

|

ನವದೆಹಲಿ, ಏಪ್ರಿಲ್ 5: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ ರಿಲಯನ್ಸ್ ಜಿಯೋ, ಶೀಘ್ರದಲ್ಲೇ ಡೈರೆಕ್ಟ್ ಟು ಹೋಂ (ಡಿಟಿಎಚ್) ಸೇವಾ ಕ್ಷೇತ್ರಕ್ಕೆ ಲಗ್ಗೆಯಿಡಲಿದೆ ಎಂದು ಮೂಲಗಳು ತಿಳಿಸಿವೆ. ಇಥರ್ ನೆಟ್ ಸಂಪರ್ಕದೊಂದಿಗೆ ಗ್ರಾಹಕರು ಈ ಸೆಟ್ ಟಾಪ್ ಬಾಕ್ಸ್ ಮೂಲಕ ಅಂತರ್ಜಾಲ ಬ್ರೌಸ್ ಮಾಡಬಹುದು ಎಂದು ಹೇಳಲಾಗಿದೆ.

ವಿಶೇಷತೆ ಏನು?

ಸ್ಟಾಂಡರ್ಡ್ ಕೇಬಲ್ ಕನೆಕ್ಟರ್ ಜತೆಯಲ್ಲಿ ಎಚ್ ಡಿಎಂಐ, ಯುಎಸ್ ಬಿ, ಆಡಿಯೋ ಹಾಗೂ ವೀಡಿಯೋ ಔಟ್ ಪುಟ್ ಗಳನ್ನು ಸೆಟ್ ಟಾಪ್ ಬಾಕ್ಸ್ ಹೊಂದಿದೆ. ಇದಲ್ಲದೆ, ಇಥರ್ ನೆಟ್ ವ್ಯವಸ್ಥೆಯನ್ನೂ ಈ ಡಿಟಿಎಚ್ ಬಾಕ್ಸ್ ಗಳು ಹೊಂದಿದ್ದು, ಗ್ರಾಹಕರಿಗೆ ಆ ಮೂಲಕ ಬ್ರಾಡ್ ಬ್ಯಾಂಡ್ ಸಹ ಬ್ರೌಸ್ ಮಾಡುವ ಅವಕಾಶವನ್ನು ನೀಡಲಿದೆ.[ಮಾರ್ಚ್ ನಂತರ ತಣ್ಣಗಾಗುತ್ತಾ ಜಿಯೊ ಬಿರುಗಾಳಿ?]

Jio DTH set top box with browsing facility coming soon

ಇದೇ ವರ್ಷ, ಫೆಬ್ರವರಿ ತಿಂಗಳಲ್ಲಿ ರಿಲಯನ್ಸ್ ಜಿಯೋ ಸಂಸ್ಥೆ ವತಿಯಿಂದ ಸೆಟ್ ಟಾಪ್ ಬಾಕ್ಸ್ ಗಳು ಮಾರುಕಟ್ಟೆಗೆ ಆಗಮಿಸಲಿವೆ ಎಂದು ಹೇಳಲಾಗಿತ್ತು.

ಅದರ ಕೆಲವಾರು ಚಿತ್ರಗಳೂ ಟ್ವಿಟರ್ ನಲ್ಲಿ ಹರಿದಾಡಿ, ಕೊಂಚ ಹವಾ ಸೃಷ್ಟಿಸಿದ್ದವು. ಆ ಚಿತ್ರಗಳು ಅಂತರ್ಜಾಲ ಮಾಧ್ಯಮಗಳಲ್ಲೂ ಪ್ರಕಟಗೊಂಡಿದ್ದವು. ಆದರೆ, ಆನಂತರ ಎಲ್ಲವೂ ಸ್ತಬ್ಧವಾಗಿತ್ತು.[ಗೂಗಲ್ ಜತೆಗೆ ಕೈ ಜೋಡಿಸಲಿದೆ ರಿಲಯನ್ಸ್ ಜಿಯೊ...]

ಆದರೆ, ಏಪ್ರಿಲ್ 5ರಂದು ಪುನಃ ಜಿಯೋ ಸೆಟ್ ಟಾಪ್ ಬಾಕ್ಸ್ ಗಳ ಚಿತ್ರಗಳು ಮತ್ತೆ ಹರಿದಾಡಲು ಆರಂಭಿದ್ದವು. ಆದರೆ, ಈ ಚಿತ್ರಗಳು ಕಳೆದ ಚಿತ್ರಗಳಿಗಿಂತ ಭಿನ್ನವಾಗಿವೆ.

ಫೆಬ್ರವರಿಯಲ್ಲಿ ಬಿಡುಗಡೆಗೊಂಡಿರುವ ಚಿತ್ರಗಳಲ್ಲಿ ಸೆಟ್ ಟಾಪ್ ಬಾಕ್ಸ್ ದುಂಡನೆಯ ಆಕಾರದಲ್ಲಿದ್ದವು. ಆದರೆ, ಈ ಬಾರಿ ಸಾಮಾನ್ಯವಾಗಿ ಬಳಕೆಯಾಗುತ್ತಿರುವ ಚೌಕಾಕಾರದ ಸೆಟ್ ಟಾಪ್ ಬಾಕ್ಸ್ ಗಳನ್ನೇ ಜಿಯೋ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ.

English summary
Reliance Jio is preparing to enter in to the DTH (Direct to Home) service space, given new leaked images of its set-top box have started to surface online. Apart from HDMI, Audio, Video output the box will give internet browsing fecility using ethernet option.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X