ಭಾರತಕ್ಕೆ ಪೋಕೆಮನ್ ಗೋ ಕರೆ ತಂದ ರಿಯಲನ್ಸ್ ಜಿಯೋ

Posted By:
Subscribe to Oneindia Kannada

ಮುಂಬೈ ಡಿಸೆಂಬರ್ 14, 2016: ಭಾರತೀಯ ಗೇಮರ್ ಗಳಿಗೆ ಖುಷಿಯಾದ ಸುದ್ದಿ ಇಲ್ಲಿದೆ. ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ('ಜಿಯೋ''), ಮೊತ್ತಮೊದಲ ಬಾರಿಗೆ ರಿಯಾಲಿಟಿ ಗೇಮ್ ಪೋಕೆಮನ್ ಗೋ ಅನ್ನು ನಿಯಾನ್ಟೆಕ್ ಸಂಸ್ಥೆಯೊಂದಿಗಿನ ಸಹಭಾಗಿತ್ವದಲ್ಲಿ ಭಾರತಕ್ಕೆ ತಂದಿದೆ.

ಈ ಸಹಭಾಗಿತ್ವದೊಂದಿಗೆ ಸಾವಿರಾರು ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಮತ್ತು ಭಾರತದಲ್ಲಿನ ಆಯ್ದ ಪಾಲುದಾರ ಮಳಿಗೆಗಳಲ್ಲಿ ಪೋಕೆಸ್ಟಾಪ್ಸ್ ಅಥವಾ ಜಿಮ್ಸ್ ಕಾಣಿಸಿಕೊಳ್ಳಲಿದ್ದು, ಡಿಸೆಂಬರ್ 14, 2016 ಬುಧವಾರದಿಂದ ಪೋಕೆಮನ್ ಗೋ ಆರಂಭಗೊಳ್ಳಲಿದೆ.

ಭಾರತೀಯರನ್ನು ಅವಕಾಶಗಳೊಂದಿಗೆ ಸಬಲೀಕರಣಗೊಳಿಸುವ ಜಿಯೋದ ಮಿಷನ್ ನ ನಿಟ್ಟಿನಲ್ಲಿ ಇದರ ಚಾಲನೆ ನೀಡಲಾಗಿದ್ದು, ಇದು ಡಾಟಾದ ಶಕ್ತಿ ಮತ್ತು ಡಿಜಿಟಲ್ ಲೈಫ್ ನಿಂದ ಚಾಲಿತವಾಗಿರಲಿದೆ. ಗೇಮಿಂಗ್ ವಿಭಾಗದಲ್ಲಿ ಪೋಕೆಮನ್ ಗೋ ಮುಂಚೂಣಿ ಆಪ್ ಆಗಿರಲಿದೆ.

ಪೋಕೆಮನ್ ಗೋ ಅನ್ನು ಜಿಯೋದ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಚಾಲನೆ ನೀಡುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ'' ಎಂದು ಜಾನ್ ಹ್ಯಾಂಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಸ್ಥಾಪಕರು, ನಿಯಾನ್‍ಟಿಕ್ ಹೇಳಿದರು.

JIO Delights Gamers- Brings

'ಭಾರತದಲ್ಲಿನ ಪೋಕೆಮನ್ ಅಭಿಮಾನಿಗಳನ್ನು ಕಾಣುವುದು ರೋಮಾಂಚಕಾರಿಯಾಗಿದೆ. ಹೊರಗಡೆ ಬನ್ನಿ, ಪೋಕೆಮನ್ ಹುಡುಕಾಟದಲ್ಲಿ ತಮ್ಮ ನೆರೆಯಲ್ಲೆಲ್ಲಾ ಅನ್ವೇಷಿಸಿ ಮತ್ತು ಜಿಯೋದ ಹೈ ಸ್ಪೀಡ್ 4ಜಿ ಎಲ್ಟಿಇ ನೆಟ್‍ವರ್ಕ್ ಈ ಗೇಮ್‍ನ ಅದ್ಭುತ ಅನುಭವ ಒದಗಿಸಿದೆ'' ಎಂದೂ ಅವರು ಹೇಳಿದರು.

ಈ ಎರಡು ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದು, ಭಾರತೀಯರಿಗೆ ಉತ್ಕೃಷ್ಟ ಮೊಬೈಲ್ ಮನರಂಜನೆಯ ಅನುಭವವನ್ನು ಒದಗಿಸಲಿವೆ. ಪೋಕೆಮನ್ ಗೋಗಾಗಿ ಜಿಯೋ ರಿಟೈಲ್ ಸ್ಥಳಗಳಲ್ಲಿ ಮತ್ತು ಚಾರ್ಜಿಂಗ್ ಸ್ಟೇಶನ್ ಗಳಲ್ಲಿ ಪೋಕೆಮನ್ ಸ್ಟಾಪ್ಸ್ ಮತ್ತು ಜಿಮ್ಸ್ ಆಗಿ ಹೊಂದಹುದಾಗಿದೆ. ಮತ್ತು ಭಾರತೀಯರು ದೇಶಾದ್ಯಂತ ಇರುವ ಜಿಯೋದ ಯಾವುದೇ ಮಳಿಗೆಗಳಲ್ಲಿ ಹಿಡಿಯಬಹುದು, ಆಟವಾಡಬಹುದಾಗಿದೆ.

ಜಿಯೋದ ಸೋಶಿಯಲ್ ಮೆಸೇಜಿಂಗ್ ಆಪ್, ಜಿಯೋಚಾಟ್, ಪೋಕೆಮನ್ ಪ್ಲೇಯರ್ಸ್ ವಿಶಿಷ್ಟ ಪೋಕೆಮನ್ ಗೋ ಚಾನೆಲ್ ಅನ್ನು ಹೊಂದಲು ಅನುಮತಿಸುತ್ತದೆ.

ಜಾಗತಿಕವಾಗಿ 500 ಮಿಲಿಯನ್ ಗೂ ಮಿಕ್ಕಿದ ಡೌನ್ ಲೋಡ್ ಗಳಾಗಿದ್ದು, ಇದೀಗ ಅಧಿಕೃತವಾಗಿ ಭಾರತದಲ್ಲಿ ರಿಲಯನ್ಸ್ ಜಿಯೋದಲ್ಲಿ ಪೋಕೆಮನ್ ಗೋದ ಚಾಲನೆಯಿಂದ ನಾವು ರೋಮಾಂಚನಗೊಂಡಿದ್ದೇವೆ'' ಎಂದು ಮ್ಯಾಥ್ಯೂ ಒಮ್ಮನ್, ಅಧ್ಯಕ್ಷರು ರಿಲಯನ್ಸ್ ಜಿಯೋ ಅವರು ಹೇಳಿದರು.

ಹ್ಯಾಪಿ ನ್ಯೂ ಇಯರ್ ಆಫರ್ ನ ವೇಳೆಯಲ್ಲಿ ಜಿಯೋ ಸಿಮ್ ಹೊಂದಿರುವ ಗ್ರಾಹಕರು ಪೋಕೆಮನ್ ಗೋ ಡೌನ್‍ಲೋಡ್ ಮಾಡಿಕೊಂಡು ಡಾಟಾ ಶುಲ್ಕಗಳ ಚಿಂತೆಯಿಲ್ಲದೆ, ಇತರೆ ಆಪ್ ಗಳು ಹಾಗೂ ವಿಷಯಗಳಂತೆ ಇಲ್ಲೂ ಆಟವಾಡಬಹುದು. 31ನೇ ಮಾರ್ಚ್ 2017ರ ತನಕ ಈ ಅವಕಾಶವಿರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Jio Infocomm Limited (“Jio”) delights Indian gamers by bringing the sought-after, first-of-its-kind, Augmented Reality game ‘Pokémon GO’ to India in a partnership with Niantic, Inc. – publisher and developer of Pokémon GO in association with The Pokémon Company.
Please Wait while comments are loading...