ಮುಂದುವರಿದ ಚಿನ್ನಾಭರಣ ಅಂಗಡಿ ಮಾಲೀಕರ ಧರಣಿ

Subscribe to Oneindia Kannada

ನವದೆಹಲಿ, ಮಾರ್ಚ್, 14: ನಿಮ್ಮ ಮನೆಯಲ್ಲಿ ಮದುವೆ, ಮುಂಜಿ ಮತ್ತಿತರ ಯಾವುದಾದರೂ ಮಂಗಳ ಕಾರ್ಯ ಇಟ್ಟುಕೊಂಡಿದ್ದೀರಾ? ಹೌದಾ... ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಿ.

ದೇಶಾದ್ಯಂತ ಚಿನ್ನಾಭರಣ ಅಂಗಡಿಗಳು ಬಾಗಿಲು ಹಾಕಿದ್ದು ಆಭರಣ ಖರೀದಿ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ದರ ಏರಿಕೆ ಬರೆ ಎಳೆದಿದ್ದರೆ ಇತ್ತ ಆಭರಣಗಳೇ ಸಿಗದೆ ಪರದಾಡುವಂತಾಗಿದೆ.[ಚಿನ್ನಾಭರಣ ಅಂಗಡಿ ಮಾಲೀಕರ ಮುಷ್ಕರ ಯಾಕೆ?]

bengaluru

ಚಿನ್ನಾಭರಣ ಅಂಗಡಿ ಮಾಲೀಕರ ಮುಷ್ಕರ 13 ದಿನ ಪೂರೈಸಿದೆ. ಮದುವೆ ಮತ್ತು ಮಂಗಳ ಕಾರ್ಯಕ್ಕೆ ಆಭರಣಗಳು ದೊರೆಯದೇ ಗ್ರಾಹಕರು ಪರಿತಪಿಸುವಂಥ ಸ್ಥಿತಿ ನಿರ್ಮಾಣವಾಗಿದೆ.[ಗೋಲ್ಡ್ ಮಾನಿಟೈಸೇಶನ್ ಯೋಜನೆ ಏಕೆ ಮತ್ತು ಏತಕ್ಕೆ?]

ಎರಡು ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಪಾನ್‌ ಕಾರ್ಡ್‌ ಕಡ್ಡಾಯ ಮತ್ತು ಆಭರಗಳ ವಹಿವಾಟಿನ ಮೇಲೆ ಶೇ. 1ರಷ್ಟು ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಚಿನ್ನಾಭರಣ ವರ್ತಕರು ಮುಷ್ಕರ ನಡೆಸುತ್ತಿದ್ದಾರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮಾರ್ಚ್‌ 17ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಸರಾಫ‌ ಸಂಘದ ಉಪಾಧ್ಯಕ್ಷ ಸುರೀಂದರ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಬೆಂಗಳೂರಿನಲ್ಲಿ ಬೈಕ್ ಜಾಥಾ: ಬೆಂಗಳೂರಿನಲಿ ಬೈಕ್ ಜಾಥಾ ನಡೆಸಿದ ಚಿನ್ನಾಭರಣ ಅಂಗಡಿ ಮಾಲೀಕರು. ಕೇಂದ್ರ ಸರ್ಕಾರ ನೀತಿಯನ್ನು ಹಿಂದಕ್ಕೆ ಪಡೆಯುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು. ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್‌, ದೆಹಲಿ, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನಾಭರಣ ವರ್ತಕರು ಮಳಿಗೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The protest by gold and jewellery traders entered the 13th day today to protest the proposed excise duty on non-silver jewellery items. Stepping up the pressure, striking associations in different parts of the country have collectively decided to hold a protest rally at Ramlila Maidan on March 17 against the Budget proposal to levy 1 per cent excise duty on non-silver jewellery, All India Sarafa Association Vice-President, Surinder Kumar Jain told.
Please Wait while comments are loading...