ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್

ಜೆಟ್ ಏರ್ವೇಸ್ ಮುಂಬೈ ಕಚೇರಿ ಹರಾಜಿಗಿಟ್ಟ HDFC ಬ್ಯಾಂಕ್

|
Google Oneindia Kannada News

ಮುಂಬೈ, ಮೇ 9: ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆಯ ಮುಂಬೈ ಕಚೇರಿಯನ್ನು, ಸಾಲ ನೀಡಿದ HDFC ಬ್ಯಾಂಕ್ ಹರಾಜಿಗಿಟ್ಟಿದೆ.

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಗೋದ್ರೆಜ್ ಬಿಕೆಸಿಯಲ್ಲಿರುವ 52,775 ಚದರಡಿಯ ಕಚೇರಿಯನ್ನು, 245ಕೋಟಿ ರೂಪಾಯಿ ಮೂಲಬೆಲೆಗೆ ಹರಾಜಿಗಿಡಲಾಗಿದೆ.

ಜೆಟ್ ಏರ್ವೇಸ್ ಈಗ ಶೂನ್ಯಜೆಟ್ ಏರ್ವೇಸ್ ಈಗ ಶೂನ್ಯ

ಬಡ್ಡಿ ಮತ್ತು ಇತರ ಶುಲ್ಕವನ್ನು ಹೊರತು ಪಡಿಸಿ ಬ್ಯಾಂಕಿಗೆ ಬರಬೇಕಾಗಿರುವ 415 ಕೋಟಿ ರೂಪಾಯಿ ಸಾಲ, ಅವಧಿಯೊಳಗೆ ಮರುಪಾವತಿಸದ ಹಿನ್ನಲೆಯಲ್ಲಿ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ.

Jet Airways crisis: HDFC puts airlines BKC office in Mumbai for sale

ಜೆಟ್ ಏರ್ವೇಸ್ ಸಂಸ್ಥೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ತನ್ನ ಸ್ಥಿರಾಸ್ಥಿಯನ್ನು ಅಡಮಾನವಿಟ್ಟು ಸಾಲ ತೆಗೆದುಕೊಂಡಿದ್ದು, 16.04.2019ರಂದು ಬ್ಯಾಂಕ್ ಈ ಕಚೇರಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

8,500 ಕೋಟಿ ಸಾಲದ ಸುಳಿಯಲ್ಲಿರುವ ಜೆಟ್ ಏರ್ವೇಸ್ ಇತ್ತೀಚೆಗೆ ತನ್ನ ಹಾರಾಟವನ್ನು ನಿಲ್ಲಿಸಿತ್ತು. ಸಂಸ್ಥೆ ಇಪ್ಪತ್ತೆರಡು ಸಾವಿರ ಉದ್ಯೋಗಿಗಳನ್ನು ಹೊಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಂಸ್ಥೆಗೆ ಇನ್ನು ಮಧ್ಯಂತರ ಹಣಕಾಸು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ ನಂತರ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಮಾನಗಳ ಎಲ್ಲಾ ಸೇವೆಯನ್ನು ಜೆಟ್ ಏರ್ವೇಸ್ ಸ್ಥಗಿತಗೊಳಿಸಿತ್ತು.

English summary
Housing Development and Finance Corporation (HDFC) has put up Jet Airways' Mumbai office in Godrej BKC on sale. The 52,775-sq-ft office on the fourth floor of the complex has been put on the block for a reserve price of Rs 245 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X