ಜೆಫ್ ಬೇಜೋಸ್ ಸಂಪತ್ತು ದಾಖಲೆಯ ಹೆಚ್ಚಳ: ಆಸ್ತಿ 171.6 ಬಿಲಿಯನ್ ಡಾಲರ್

ವಾಷಿಂಗ್ಟನ್, ಜುಲೈ 2: ಅಮೆಜಾನ್ ಸಂಸ್ಥಾಪಕ, ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್‌ ಬೇಜೋಸ್ ಇದೀಗ ತನ್ನ ದಾಖಲೆಯನ್ನೇ ಮುರಿದು ಮತ್ತಷ್ಟು ಆಸ್ತಿ ಸಂಪಾದಿಸಿದ್ದಾರೆ. ಹಿಂದೆ ಅವರ ಬಳಿ ಇದ್ದ ಗರಿಷ್ಠ ಸಂಪತ್ತಿನ ಪ್ರಮಾಣದ ದಾಖಲೆ ಬ್ರೇಕ್ ಆಗಿದೆ.

Recommended Video

      Corona Cases,Hassan ಹಾಸನದಲ್ಲಿ ಕೊರೊನಾಗೆ ಮತ್ತೊಂದು ಬಲಿ , ಆತಂಕದಲ್ಲಿ ಜನಗಳು | Oneindia Kannada

      ಇ ಕಾಮರ್ಸ್ ಕಂಪೆನಿ ಅಮೆಜಾನ್ ಪ್ರತಿ ಷೇರು ಮೌಲ್ಯ ಬುಧವಾರ 2,878.70 ಅಮೆರಿಕನ್ ಡಾಲರ್ ತಲುಪುವುದರೊಂದಿಗೆ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 171.6 ಬಿಲಿಯನ್ ಡಾಲರ್ ತಲುಪಿತು.(ಸುಮಾರು 13 ಲಕ್ಷ ಕೋಟಿ ರುಪಾಯಿ). ಅದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಸೆಪ್ಟೆಂಬರ್ 4, 2018 ರಂದು ನಿಗದಿಪಡಿಸಿದ ಅವರ ಹಿಂದಿನ ಗರಿಷ್ಠ 167.7 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿದೆ. ಈ ವರ್ಷದ ಮೊದಲ ಆರು ತಿಂಗಳಲ್ಲೇ ಅವರ ಆಸ್ತಿ ಮೌಲ್ಯಕ್ಕೆ 5,670 ಕೋಟಿ ಅಮೆರಿಕನ್ ಡಾಲರ್ ಸೇರ್ಪಡೆ ಆಗಿದೆ.

      Jeff Bezoss Wealth At Record 171.6 Billion Dollar

      ಇನ್ನು ಬೇಜೋಸ್ ಸಂಪತ್ತು ಅಷ್ಟೇ ಅಲ್ಲದೆ, ಆತನ ವಿಚ್ಚೇದಿತ ಪತ್ನಿ ಮ್ಯಾಕೆಂಜಿ ಬೆಜೋಸ್ ಅಮೆಜಾನ್‌ನಲ್ಲಿ 4% ಪಾಲನ್ನು ಹೊಂದಿದ್ದು, ಅವರ ನಿವ್ವಳ ಆಸ್ತಿ ಮೌಲ್ಯ 56.9 ಬಿಲಿಯನ್ ಡಾಲರ್ ಮತ್ತು ಬ್ಲೂಮ್‌ಬರ್ಗ್‌ನ ಶ್ರೇಯಾಂಕದಲ್ಲಿ 12 ನೇ ಸ್ಥಾನಕ್ಕೆರಿದ್ದಾರೆ. ಜೊತೆಗೆ ವಿಶ್ವದಲ್ಲೇ 2ನೇ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+