ಜಬಾಂಗ್-ಮಿಂತ್ರಾ ವಿಲೀನ: 250ಕ್ಕೂ ಹೆಚ್ಚು ಸಿಬ್ಬಂದಿಗೆ ಕೊಕ್

ಬೆಂಗಳೂರು, ನವೆಂಬರ್ 19: ಆನ್ ಲೈನ್ ಶಾಪಿಂಗ್ ತಾಣ ಮಿಂತ್ರಾ ಜತೆ ಜಬಾಂಗ್ ವಿಲೀನಗೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ಇದರ ಪರಿಣಾಮವಾಗಿ, ಜಬಾಂಗ್ ಸಂಸ್ಥೆಯ 250ಕ್ಕೂ ಅಧಿಕ ಸಿಬ್ಬಂದಿಯನ್ನು ಹೊರಹಾಕುವ ಸುದ್ದಿ ಬಂದಿದೆ.

ಬೆಂಗಳೂರು ಮೂಲದ ಮಿಂತ್ರಾ ಜತೆ ವಿಲೀನವಾದ ಬಳಿಕ, ಇನ್ನು ಮೂರು ತಿಂಗಳೊಳಗಾಗಿ ಮತ್ತೆ 200 ಸಿಬ್ಬಂದಿಗೆ ಗೇಟ್ ಪಾಸ್​ ನೀಡಬಹುದು ಎಂಬ ಮಾಹಿತಿ ಇದೆ. ಜಬಾಂಗ್ ಸಿಇಒ ಅನಂತ್ ನಾರಾಯಣನ್ ಅವರು 250 ಮಂದಿಗೆ ಪಿಂಕ್ ಸ್ಲಿಪ್ ನೀಡುವ ಬಗ್ಗೆ ಸುಳಿವು ನೀಡಿದ್ದರು.

ಗುರುಗ್ರಾಮ ಮೂಲದ ಜಬಾಂಗ್ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಮಿಂತ್ರಾ ಸಿಇಒ ಅನಂತ ನಾರಾಯಣನ್, ತಂತ್ರಜ್ಞಾನ, ಹಣಕಾಸು, ಮಾರ್ಕೆಟಿಂಗ್​ ಮೊದಲಾದ ಕ್ಷೇತ್ರಗಳಲ್ಲಿ ಮಿಂತ್ರಾ ಮತ್ತು ಜಬಾಂಗ್​ ವಿಲೀನಗೊಳ್ಳಲಿದೆ. ಹೀಗಾಗಿ, 250 ಮಂದಿಯನ್ನು ಸೇವೆಯಿಂದ ಮುಕ್ತಿಗೊಳಿಸುವುದು ಅನಿವಾರ್ಯ ಎಂದಿದ್ದರು.

Jabong Myntra Merger: 200 Employees may to get Pink Slip.

ಫ್ಯೂಚರ್ ಗ್ರೂಪ್, ಸ್ನಾಪ್ ಡೀಲ್, ಅಬೋಫ್ ಗೆ ಪೈಪೋಟಿ ನೀಡಲು ಜಬಾಂಗ್ ಸಂಸ್ಥೆಯನ್ನು ಜುಲೈ 2016ರಲ್ಲಿ ಫ್ಲಿಪ್ ಕಾರ್ಟ್ ಒಡೆತನದ ಮಿಂತ್ರಾ ಸಂಸ್ಥೆಯು 70 ಮಿಲಿಯನ್ ಡಾಲರ್ ಮೌಲ್ಯಕ್ಕೆ ಖರೀದಿಸಿತ್ತು.

ಈಗ ಫ್ಲಿಪ್ ಕಾರ್ಟ್ ನಲ್ಲಿ ಬದಲಾವಣೆಗಳಾಗುತ್ತಿದ್ದು, ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಂಸ್ಥೆ ತೊರೆದಿದ್ದಾರೆ. ಫ್ಲಿಪ್ ಕಾರ್ಟಿನಲ್ಲಿನ 77% ಪಾಲನ್ನು ವಾಲ್ ಮಾರ್ಟ್ ಖರೀದಿಸಿದೆ.

ಕಲ್ಯಾಣ್ ಕೃಷ್ಣಮೂರ್ತಿ ಅವರು ಫ್ಲಿಪ್ ಕಾರ್ಟ್ ಸಮೂಹದ ಹೊಸ ಸಿಇಒ ಆಗಿ ನೇಮಕಗೊಂಡಿದ್ದಾರೆ. 18 ತಿಂಗಳ ಬಳಿಕ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ನೇಮಕ ಮಾಡಲಾಗಿದ್ದು, ಸೋನಿ ಪಿಕ್ಚರ್ ನಲ್ಲಿದ್ದ ಸ್ಮೃತಿ ಸಿಂಗ್ ಅವರು ಡಿಸೆಂಬರ್ ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+