ಬೆಂಗಳೂರಿಗೆ ಕಾಲಿಟ್ಟ ವಿಶ್ವದ ಅಗ್ರಗಣ್ಯ ತಂತ್ರಜ್ಞಾನ ಸಂಸ್ಥೆ ಐಟ್ರಾನ್

Posted By:
Subscribe to Oneindia Kannada

ಬೆಂಗಳೂರು, ಮೇ, 13: ವಿಶ್ವದ ಮುಂಚೂಣಿ ತಂತ್ರಜ್ಞಾನ ಮತ್ತು ಸೇವಾ ಸಂಸ್ಥೆ ಐಟ್ರಾನ್, ತನ್ನ ಸಾಫ್ಟ್‍ವೇರ್ ಕೇಂದ್ರವನ್ನು ವಿಸ್ತರಿಸಿದೆ. ಮುಂದಿನ 2 ವರ್ಷಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನು ದುಪ್ಪಟ್ಟು ಮಾಡಲಿದೆ. ಬೆಂಗಳೂರಿನ ಕೇಂದ್ರ ವಿಶ್ವದ ಮುಂಚೂಣಿ ಸಾಫ್ಟ್‍ವೇರ್ ತಾಣವಾಗುವ ಗುರಿ ಹೊಂದಿದೆ.

ಈ ಕೇಂದ್ರ 2013ರಲ್ಲಿ ಅಭಿವೃದ್ಧಿಗೊಂಡಿತ್ತು. ಪ್ರಸ್ತುತ 240 ಸಿಬ್ಬಂದಿ ಹೊಂದಿದೆ. ಬೆಂಗಳೂರಿನ ಅತ್ಯಂತ ಕೌಶಲ್ಯಯುತ ಸಾಫ್ಟ್‍ವೇರ್ ಇಂಜಿನಿಯರ್ ಗಳೊಂದಿಗೆ ಈ ಕೇಂದ್ರ ಸ್ಮಾರ್ಟ್ ಸಿಟಿಗಳಿಗೆ ಸಾಫ್ಟ್‍ವೇರ್ ಅಪ್ಲಿಕೇಷನ್ ಅಭಿವೃದ್ಧಿ ಮತ್ತು ಜಾಗತಿಕ ಸ್ಮಾರ್ಟ್ ಗ್ರಿಡ್ ಗಳತ್ತ ದೃಷ್ಟಿ ಹಾಯಿಸಲಿದೆ.

'ನಮ್ಮ ಈ ಕೇಂದ್ರ ಐಟ್ರಾನ್ ತಾಂತ್ರಿಕ ವಿಭಾಗಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಜಾಗತಿಕ ಮಾರುಕಟ್ಟೆಗೆ ವಿಶ್ವ ದರ್ಜೆಯ ಪರಿಹಾರ ಒದಗಿಸುತ್ತಿದೆ. ಭಾರತದ ಬೃಹತ್ ಪ್ರತಿಭಾನ್ವಿತ ತಾಣದೊಂದಿಗೆ ನಾವು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಒಂದು ಸ್ಥಿರ ಭವಿಷ್ಯ ನಿರ್ಮಿಸುವ ನಂಬಿಕೆ ಹೊಂದಿದ್ದೇವೆ' ಎಂದು ಐಟ್ರಾನ್ ಕಾರ್ಯಕಾರಿ ಉಪಾಧ್ಯಕ್ಷ ಮತ್ತು ಸಿಒಒ ಟಾಮ್ ಡೈರಿಚ್ ಹೇಳಿದರು.

'ಬೆಂಗಳೂರಿನ ಐಟಿ ಕೇಂದ್ರ ನಮ್ಮ ವಹಿವಾಟಿನ ಯಶಸ್ವಿ ಮಾದರಿಯನ್ನು ಪ್ರದರ್ಶಿಸುತ್ತಿದೆ. ಕ್ಷಿಪ್ರ ಪರಿಹಾರದೊಂದಿಗೆ ಸಮಸ್ಯೆಗಳಿಗೆ ಉತ್ತರ ನೀಡುವ ಸಾಮರ್ಥ್ಯ ಪ್ರದರ್ಶಿಸಿದೆ. ನಮ್ಮ ಜಾಗತಿಕ ಜ್ಞಾನ ಮತ್ತು ಸ್ಥಳೀಯ ಸಾಫ್ಟ್‍ವೇರ್ ಸಾಮಥ್ರ್ಯ ಸ್ಮಾರ್ಟ್ ಸಿಟಿಗಳಿಗೆ ಸಾಫ್ಟ್‍ವೇರ್ ಸಂಶೋಧನೆ ಸಾಮರ್ಥ್ಯ ನೀಡಿದೆ' ಎಂದು ಐಟ್ರಾನ್ ನ ಜಾಗತಿಕ ಅಭಿವೃದ್ಧಿ ಉಪಾಧ್ಯಕ್ಷ ಜಾರ್ಜ್ ರಿಚರ್ಡ್ ಹೇಳಿದರು.

Itron Expands Software Center of Excellence in Bangalore

ಐಟ್ರಾನ್ ಭಾರತದಲ್ಲಿ ದಿನಬಳಕೆಗೆ ಸಹಾಯ ಮಾಡಿದ ಸುದೀರ್ಘ ಇತಿಹಾಸ ಹೊಂದಿದೆ. ಇಂಧನ ಮತ್ತು ನೀರು ನಿರ್ವಹಣೆಯಲ್ಲಿ ಐಟ್ರಾನ್ ಪರಿಹಾರ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಸ್ಥೆಗಳಿಗೆ ಸಹಾಯ ಒದಗಿಸಿದೆ.

ಐಟ್ರಾನ್ ಕುರಿತು: ವಿಶ್ವದ ಮುಂಚೂಣಿ ತಂತ್ರಜ್ಞಾನ ಮತ್ತು ಸೇವಾ ಸಂಸ್ಥೆಯಾಗಿದ್ದು, ಇಂಧನ ಮತ್ತು ನೀರಿನ ಸಂಪನ್ಮೂಲ ಬಳಕೆಗೆ ಮೀಸಲಾಗಿದೆ. ನಾವು ಇಂಧನ ಮತ್ತು ನೀರಿನ ಉಪಯುಕ್ತ ಬಳಕೆ, ನಿರ್ವಹಣೆ ಪರಿಹಾರ ಒದಗಿಸುತ್ತೇವೆ. ವಿದ್ಯುತ್, ಗ್ಯಾಸ್, ನೀರು, ಉಷ್ಣ ವಿದ್ಯುತ್ ಮಾಪನ ಸಾಧನ ಮತ್ತು ನಿಯಂತ್ರಣ ತಂತ್ರಜ್ಞಾನ ಸೇವಾ ವಲಯ, ಸಂವಹನ ವ್ಯವಸ್ಥೆ, ಸಾಫ್ಟ್‍ವೇರ್ ವಲಯದಲ್ಲಿ ನಮ್ಮ ಸೇವೆ ಲಭ್ಯವಿದೆ. 100 ದೇಶಗಳಲ್ಲಿ 8000 ಗ್ರಾಹಕರನ್ನು ಹೊಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Itron, Inc a world-leading technology and services company, expandಸ್ its software Center of Excellence by doubling its workforce over the next two years. The Bangalore Center of Excellence aims to be one of the world's leading development centers for innovative software and firmware solutions that enable utilities and cities to manage energy and water more resourcefully.
Please Wait while comments are loading...