ITR Filing: ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಮುಖ ದಿನಾಂಕಗಳು

ನವದೆಹಲಿ, ನವೆಂಬರ್ 28: 2019-20ರ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ನಿಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್‌) ಸಲ್ಲಿಸಿಲ್ಲ, ಏನು ಮಾಡೋದು ಎಂದು ಚಿಂತೆ ಮಾಡದಿರಿ. ಏಕೆಂದರೆ ಡಿಸೆಂಬರ್ 31ರವರೆಗೆ ಐಟಿಆರ್‌ ಸಲ್ಲಿಸಲು ಸಮಯವಿದೆ.

ಕೊರೊನಾವೈರಸ್ ಬಿಕ್ಕಟ್ಟಿನ ದೃಷ್ಟಿಯಿಂದ ಆದಾಯ ತೆರಿಗೆ ಇಲಾಖೆಯು ಐಟಿಆರ್ ಸಲ್ಲಿಕೆಯನ್ನು ಸರಾಗಗೊಳಿಸಲು ಇತ್ತೀಚೆಗಷ್ಟೇ ಐಟಿಆರ್‌ ಸಲ್ಲಿಕೆ ಅಂತಿಮ ಗಡುವನ್ನು ವಿಸ್ತರಿಸಿದೆ.

ವೈಯಕ್ತಿಕ ತೆರಿಗೆ ಪಾವತಿದಾರರು ಏಪ್ರಿಲ್ 1, 2019 ರಿಂದ ಮಾರ್ಚ್ 31, 2020ರ ನಡುವಿನ ಐಟಿಆರ್ ಸಲ್ಲಿಸಲು ಈ ವರ್ಷದ ಕೊನೆಯವರೆಗೆ ಅಂದರೆ ಡಿಸೆಂಬರ್ 31ರವರೆಗೆ ಅವಕಾಶವಿದೆ. ಈ ಹಿಂದಿದ್ದ ನವೆಂಬರ್ 30ರ ಬದಲು ಡಿಸೆಂಬರ್ 31ಕ್ಕೆ ವಿಸ್ತರಿಸಲಾಗಿದೆ.

ITR Filing: Important Due Dates To Remember in order to file Your Income Tax Return

ಐಟಿಆರ್ ಅನ್ನು ಸಲ್ಲಿಸುವ ಮೊದಲು ನೀವು ನೆನಪಿಡಬೇಕಾದ ಕೆಲವು ಪ್ರಮುಖ ದಿನಾಂಕಗಳು ಇಲ್ಲಿವೆ:

ತೆರಿಗೆ ಪಾವತಿದಾರರಿಗೆ ಲೆಕ್ಕಪರಿಶೋಧನೆ ಮಾಡಬೇಕಾದ ಐಟಿಆರ್ ಸಲ್ಲಿಕೆಯ ದಿನಾಂಕವನ್ನು ಜನವರಿ 31, 2020 ಕ್ಕೆ ವಿಸ್ತರಿಸಲಾಗಿದೆ.

ತೆರಿಗೆ ಲೆಕ್ಕಪರಿಶೋಧನಾ ವರದಿ ಮತ್ತು ಅಂತರರಾಷ್ಟ್ರೀಯ / ನಿಗದಿತ ದೇಶೀಯ ವಹಿವಾಟಿಗೆ ಸಂಬಂಧಿಸಿದ ವರದಿ ಸೇರಿದಂತೆ ಕಾಯಿದೆಯಡಿ ವಿವಿಧ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸುವ ದಿನಾಂಕವನ್ನು ಜನವರಿ 31, 2021 ಕ್ಕೆ ವಿಸ್ತರಿಸಲಾಗಿದೆ.

ತೆರಿಗೆ ಲೆಕ್ಕಪರಿಶೋಧನಾ ವರದಿ ಮತ್ತು ಅಂತರರಾಷ್ಟ್ರೀಯ / ನಿರ್ದಿಷ್ಟಪಡಿಸಿದ ದೇಶೀಯ ವಹಿವಾಟಿಗೆ ಸಂಬಂಧಿಸಿದ ವರದಿ ಸೇರಿದಂತೆ ಕಾಯಿದೆಯಡಿ ವಿವಿಧ ಲೆಕ್ಕಪರಿಶೋಧನಾ ವರದಿಗಳನ್ನು ನೀಡುವ ದಿನಾಂಕವನ್ನು ಡಿಸೆಂಬರ್ 31, 2020 ಕ್ಕೆ ವಿಸ್ತರಿಸಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+