ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆ ಆಲೋಚನೆ ಕೈಬಿಟ್ಟ ಆರ್ ಬಿಐ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 13: ಭಾರತದಲ್ಲಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರುವ ಆಲೋಚನೆಯನ್ನು ಕೈಬಿಟ್ಟಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಈ ಕುರಿತಂತೆ ಸಲ್ಲಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ(ಆರ್ ಟಿಐ)ಯಡಿ ಹಾಕಿದ್ದ ಅರ್ಜಿಗೆ ಆರ್ ಬಿಐ ಉತ್ತರಿಸಿದೆ.

ಎಲ್ಲ ನಾಗರಿಕರಿಗೆ ಸಮಾನ ಮತ್ತು ವ್ಯಾಪಕ ನೆಲೆಯಲ್ಲಿ ಬ್ಯಾಂಕಿಂಗ್‌ ಮತ್ತು ಹಣಕಾಸು ಸೇವೆಗಳು ಸಿಗಬೇಕು ಎನ್ನುವ ಕಾರಣಕ್ಕೆ ಇಸ್ಲಾಮಿಕ್‌ ಬ್ಯಾಂಕಿಂಗ್‌ ಸೌಲಭ್ಯ ಜಾರಿಗೆ ತರುವ ಚಿಂತನೆಯನ್ನು ಕೈಬಿಡಲಾಯಿತು ಎಂದು ಆರ್ ಬಿಐ ತಿಳಿಸಿದೆ.

Islamic banking will not be pursued by RBI

ಇಸ್ಲಾಮಿಕ್‌ ಬ್ಯಾಂಕಿಂಗ್‌ ವ್ಯವಸ್ಥೆಯು ಸಾಂಪ್ರದಾಯಿಕ ಬ್ಯಾಂಕಿಂಗ್‌ಗಿಂತ ಭಿನ್ನವಾದ ಹಣಕಾಸು ವ್ಯವಸ್ಥೆಯಾಗಿದೆ. ಬಡ್ಡಿ ದರ ರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಇದಾಗಿದ್ದು, ಇಸ್ಲಾಮಿನಲ್ಲಿ ಬಡ್ಡಿ ಪಾವತಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಘುರಾಮ್ ರಾಜನ್‌ ಅವರ ನೇತೃತ್ವದಲ್ಲಿ 2008ರಲ್ಲಿ ಹಣಕಾಸು ವಲಯದ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸಮಿತಿಯೊಂದನ್ನು ರಚಿಸಲಾಗಿತ್ತು. ಬಡ್ಡಿ ದರ ರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ತರುವ ಅಗತ್ಯದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು.

ದೇಶಿ ಬ್ಯಾಂಕ್‌ಗಳು ಈ ವ್ಯವಸ್ಥೆ ಬಗ್ಗೆ ಯಾವುದೇ ಅನುಭವ ಹೊಂದಿಲ್ಲ. ಹಂತ ಹಂತವಾಗಿ ಇಸ್ಲಾಮಿಕ್‌ ಬ್ಯಾಂಕಿಂಗ್‌ ಜಾರಿಗೆ ತರಬಹುದು ಎಂದು ಕಾನೂನು, ತಾಂತ್ರಿಕ ಮತ್ತು ನಿಯಂತ್ರಣ ವಿಷಯಗಳನ್ನು ಪರಿಶೀಲಿಸಿ ಸಮಿತಿ ತನ್ನ ಅಭಿಪ್ರಾಯ ತಿಳಿಸಿತ್ತು.

ಅಂತಿಮವಾಗಿ ಈ ಸಲಹೆ ಅನುಸರಿಸುವುದನ್ನು ಕೈಬಿಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Islamic banking will not be introduced in India. The RBI decided not to pursue a proposal for Islamic banking in the country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ