ಟ್ರಾವೆಲ್ ಕ್ರೆಡಿಟ್ ಕಾರ್ಡ್ ಹೊರತಂದ IRCTC- HDFC: ಏನಿದು ಯೋಜನೆ? ಗರಿಷ್ಟ ಉಳಿತಾಯ, ಅನುಕೂಲ- ಮಾಹಿತಿ, ವರದಿ
ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಮತ್ತು HDFC ಬ್ಯಾಂಕ್ ಸಹಭಾಗಿತ್ವದಲ್ಲಿ ಕ್ರೆಡಿಟ್ ಕಾರ್ಡ್ ಹೊರಬಂದಿದೆ. ಈ ಎರಡೂ ಸಂಸ್ಥೆಗಳು ಬ್ರಾಂಡೆಡ್ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಕೈಜೋಡಿಸಿವೆ.
ನವದೆಹಲಿ, ಮಾರ್ಚ್ 01: ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಮತ್ತು HDFC ಬ್ಯಾಂಕ್ ಸಹಭಾಗಿತ್ವದಲ್ಲಿ ಕ್ರೆಡಿಟ್ ಕಾರ್ಡ್ ಹೊರಬಂದಿದೆ. ಈ ಎರಡೂ ಸಂಸ್ಥೆಗಳು ಬ್ರಾಂಡೆಡ್ ಟ್ರಾವೆಲ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಕೈಜೋಡಿಸಿವೆ. ಇದು ಎನ್‌ಪಿಸಿಐನ ರುಪೇ ನೆಟ್‌ವರ್ಕ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.
IRCTC ಯ ಟಿಕೆಟಿಂಗ್ ವೆಬ್‌ಸೈಟ್ ಮೂಲಕ ಮತ್ತು IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾಗುವ ರೈಲು ಟಿಕೆಟ್‌ಗಳ ಬುಕಿಂಗ್‌ನಲ್ಲಿ ಕಾರ್ಡ್ ವಿಶೇಷ ಪ್ರಯೋಜನಗಳನ್ನು ಮತ್ತು ಗರಿಷ್ಠ ಉಳಿತಾಯವನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ.

IRCTC HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್: ಪ್ರಮುಖ ಪ್ರಯೋಜನಗಳು
- ಈ ಕ್ರೆಡಿಡ್ ಕಾರ್ಡ್ ಎನ್‌ಪಿಸಿಐನ ರುಪೇ ನೆಟ್‌ವರ್ಕ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ.
- ಕಾರ್ಡ್ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.
- ಇದು IRCTC ಯ ಟಿಕೆಟಿಂಗ್ ವೆಬ್‌ಸೈಟ್ ಮೂಲಕ ಮತ್ತು IRCTC ರೈಲ್ ಕನೆಕ್ಟ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾದ ರೈಲು ಟಿಕೆಟ್‌ಗಳ ಬುಕಿಂಗ್‌ನಲ್ಲಿ ಗರಿಷ್ಠ ಉಳಿತಾಯವನ್ನು ಒದಗಿಸುತ್ತದೆ.
- IRCTC- HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು ಆಕರ್ಷಕ ಬೋನಸ್, ಬುಕಿಂಗ್‌ಗಳ ಮೇಲೆ ರಿಯಾಯಿತಿಗಳು ಮತ್ತು ದೇಶದಾದ್ಯಂತದ ರೈಲ್ವೇ ನಿಲ್ದಾಣಗಳಲ್ಲಿ ಹಲವಾರು ಕಾರ್ಯನಿರ್ವಾಹಕ ಲಾಂಜ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.

- IRCTC ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಜನಿ ಹಸಿಜಾ ಅವರು ಅಸೋಸಿಯೇಷನ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'HDFC ಬ್ಯಾಂಕ್ ದೇಶದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಈ ಉಪಕ್ರಮಕ್ಕಾಗಿ ಅವರೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಬ್ರಾಂಡೆಡ್ ಕಾರ್ಡ್ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೊಸದಾಗಿ ತೆರೆಯಲಾದ ಅತ್ಯಾಧುನಿಕ ಲಾಂಜ್‌ಗಳಿಗೆ ವಿಶೇಷ ಪ್ರವೇಶವನ್ನು ನೀಡುತ್ತದೆ' ಎಂದು ಹೇಳಿದ್ದಾರೆ.
'ಕ್ರೆಡಿಟ್ ಕಾರ್ಡ್ ಆನ್‌ಲೈನ್ ವಹಿವಾಟುಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ನಮ್ಮ ಗ್ರಾಹಕರಿಗೆ ಉತ್ತಮ ದರ್ಜೆಯ ಪ್ರಯೋಜನಗಳನ್ನು ಮತ್ತು ಅನುಭವವನ್ನು ನೀಡುತ್ತದೆ' ಎಂದು ಅವರು ಹೇಳಿದರು.
'IRCTC- HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ದೇಶಾದ್ಯಂತ ಲಕ್ಷಾಂತರ ಭಾರತೀಯರಿಗೆ ಕಾರ್ಡ್ ಅನ್ನು ನೀಡಲು ನಮಗೆ ಅನುವು ಮಾಡಿಕೊಡುತ್ತದೆ. ಭಾರತೀಯ ರೈಲ್ವೇಯು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿದೆ. ರೈಲು ಪ್ರಯಾಣಿಕರಿಗೆ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸುವ ಸಮಯವು ಈ ಯೋಜನೆಯಿಂದ ಕಡಿತಗೊಳ್ಳುತ್ತದೆ. IRCTC ಯೊಂದಿಗೆ ಪಾಲುದಾರರಾಗಿರುವ ಮೊದಲ ಖಾಸಗಿ ವಲಯದ ಬ್ಯಾಂಕ್ HDFC ಆಗಿರುವುದು ನಮಗೆ ಸಂತೋಷ ತಂದಿದೆ' ಎಂದು ಭಾರತೀಯ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications