5 ದಿನದಲ್ಲಿ ಹೂಡಿಕೆದಾರರ 8.47 ಲಕ್ಷ ಕೋಟಿ ಷೇರು ಪೇಟೆಯಲ್ಲಿ ಮಟಾಶ್

ಮುಂಬೈ, ಸೆಪ್ಟೆಂಬರ್ 24: ಷೇರು ಮಾರುಕಟ್ಟೆಯು ನಿರಂತರವಾಗಿ ಇಳಿಕೆ ಕಾಣುತ್ತಿದ್ದು, ಹೂಡಿಕೆದಾರರ 8.47 ಲಕ್ಷ ಕೋಟಿ ರುಪಾಯಿಯು 5 ದಿನಗಳಲ್ಲಿ ಕೊಚ್ಚಿಹೋಗಿದೆ. ಕಳೆದ ವಾರದ ಆರಂಭದಿಂದ ಲೆಕ್ಕ ಹಿಡಿದು ಹೇಳುವುದಾದರೆ ಬಿಎಸ್ ಇ (ಬಾಂಬೆ ಸ್ಟಾಕ್ ಎಕ್ಸ್ ಚೇಂಜ್) 5 % ಕುಸಿತ ಕಂಡಿದೆ.

ಸೋಮವಾರದಂದು (ಸೆಪ್ಟೆಂಬರ್ 24) ಸೆನ್ಸೆಕ್ಸ್ 536.58 ಅಂಶಗಳಷ್ಟು ಇಳಿಕೆ ಕಂಡು, ಒಟ್ಟಾರೆಯಾಗಿ ದಿನಾಂತ್ಯಕ್ಕೆ 36,305.02ಕ್ಕೆ ತಲುಪಿತು. ಆ ಮೂಲಕ ಕಳೆದ 5 ಟ್ರೇಡಿಂಗ್ ಸೆಷನ್ ನಲ್ಲಿ 4.68% ಅಥವಾ 1,785.62 ಅಂಶಗಳನ್ನು ಕಳೆದುಕೊಂಡಂತೆ ಆಗುತ್ತದೆ.

ಮಾರುಕಟ್ಟೆ ಬಗ್ಗೆ ಇರುವ ನಕಾರಾತ್ಮಕ ನಂಬಿಕೆ ಪರಿಣಾಮವಾಗಿ ಬಿಎಸ್ ಇಯಲ್ಲಿ ಲಿಸ್ಟ್ ಆಗಿರುವಂಥ ಕಂಪೆನಿಗಳು 8,47,974.15 ಕೋಟಿ ರುಪಾಯಿ ಇಳಿದು 1,47,89,045 ಕೋಟಿ ತಲುಪಿದವು. ಬ್ಯಾಂಕಿಂಗೇತರ ಫೈನಾನ್ಷಿಯಲ್ ಕಂಪನಿಗಳು ಹಾಗೂ ಹೌಸಿಂಗ್ ಫೈನಾನ್ಸ್ ಕಂಪನಿಗಳ ಸಮಸ್ಯೆ ಕಾರಣಕ್ಕೆ ಆ ವಲಯ ಷೇರುಗಳಿಗೆ ಹೊಡೆತ ಬಿದ್ದವು.

Investors lost Rs 8.5 lakh crore in 5 trading session

ಇದರ ಜತೆಗೆ ನಗದು ಸಮಸ್ಯೆ ಹಾಗೂ ಅಮೆರಿಕ ಜತೆಗೆ ವ್ಯಾಪಾರದ ಮಾತುಕತೆಯನ್ನು ಚೀನಾ ರದ್ದುಗೊಳಿಸಿದ ಸುದ್ದಿ ಕೂಡ ಹೂಡಿಕೆದಾರರಲ್ಲಿ ಆತಂಕ ಹುಟ್ಟಲು ಕಾರಣವಾದವು. ಮಹೀಂದ್ರಾ ಅಂಡ್ ಮಹೀಂದ್ರಾ, ಎಚ್ ಡಿಎಫ್ ಸಿ, ಇಂಡಸ್ ಇಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್ ಷೇರುಗಳು ಭಾರೀ ಕುಸಿತ ಕಂಡವು.

ಬಿಎಸ್ ಇಯಲ್ಲಿ ಸೋಮವಾರ 2,111 ಷೇರುಗಳು ಇಳಿಕೆ ಕಂಡವು. 538 ಷೇರುಗಳು ಏರಿಕೆಯಾದವು. 168 ಷೇರುಗಳ ದರದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. 470 ಷೇರುಗಳು ವಾರ್ಷಿಕ ಕನಿಷ್ಠ ಮಟ್ಟ ತಲುಪಿದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+