IMFನಿಂದ 2019ನೇ ಸಾಲಿನ ಭಾರತ ಜಿಡಿಪಿ ಅಂದಾಜು 6.1 ಪರ್ಸೆಂಟ್ ಗೆ ಇಳಿಕೆ
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ (ಐಎಂಎಫ್) ಮಂಗಳವಾರ ಭಾರತದ ಅಭಿವೃದ್ಧಿ ದರ (ಜಿಡಿಪಿ) ಅಂದಾಜು 2019ನೇ ಸಾಲಿಗೆ 6.1 ಪರ್ಸೆಂಟ್ ಗೆ ಇಳಿಸಲಾಗಿದೆ. ಕಳೆದ ಏಪ್ರಿಲ್ ನಲ್ಲಿ ಅಂದಾಜು ಮಾಡಿದ್ದಕ್ಕಿಂತ 1.2 ಪರ್ಸೆಂಟ್ ಈಗ ಕಡಿಮೆ ಮಾಡಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ಅಂದಾಜು ಮಾಡಿದ ಪ್ರಕಾರ, 2019ನೇ ಸಾಲಿಗೆ ಜಿಡಿಪಿ 7.3 ಪರ್ಸೆಂಟ್ ಪ್ರಗತಿ ಆಗಬಹುದು ಎನ್ನಲಾಗಿತ್ತು. ಆದರೆ ಕೆಲವೇ ತಿಂಗಳ ಫಾಸಲೆಯಲ್ಲಿ ಅಂದಾಜಿನ ಅಂಕಿಯನ್ನು ಪರಿಷ್ಕರಿಸಲಾಗಿದೆ.
ಕಳೆದ ವರ್ಷ ಅಂದರೆ 2018ರಲ್ಲಿ ಭಾರತ 6.8 ಪರ್ಸೆಂಟ್ ಜಿಡಿಪಿ ದಾಖಲಿಸಿತ್ತು. ಇದೀಗ 2019ರಲ್ಲಿ ಐಎಂಎಫ್ ಅಂದಾಜಿನ ಪ್ರಕಾರ ಭಾರತದ ಜಿಡಿಪಿ 6.1 ಪರ್ಸೆಂಟ್ ಆಗಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, 2020ರಲ್ಲಿ ದೇಶದ ಆರ್ಥಿಕತೆ ಚೇತರಿಸಿಕೊಂಡು, 7.0 ಪರ್ಸೆಂಟ್ ಅಭಿವೃದ್ಧಿ ದರ ದಾಖಲಾಗಬಹುದು ಎನ್ನಲಾಗುತ್ತಿದೆ.

ವಿಶ್ವ ಬ್ಯಾಂಕ್ ನಿಂದ ಭಾನುವಾರ ಪ್ರಕಟಿಸಿದ ಮಾಹಿತಿ ಪ್ರಕಾರ, 2019ರಲ್ಲಿ ಭಾರತದ ಪ್ರಗತಿ ದರ 6 ಪರ್ಸೆಂಟ್ ಗೆ ಕುಸಿಯಬಹುದು ಎನ್ನಲಾಗಿತ್ತು. 2018ರಲ್ಲಿ ಭಾರತದ ಜಿಡಿಪಿ 6.9 ಪರ್ಸೆಂಟ್ ಅಗಬಹುದು ಎಂದು ಅಂದಾಜಿಸಿತ್ತು. ಆಗ ಜಿಡಿಪಿ 6.8 ಪರ್ಸೆಂಟ್ ಆಗಿತ್ತು.












Click it and Unblock the Notifications