ಇಂಟೆಲ್ : ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತ

Posted By:
Subscribe to Oneindia Kannada

ಹೋಸ್ಟನ್, ಏಪ್ರಿಲ್ 20: ಮೈಕ್ರೋಪ್ರೊಸೆಸರ್ ವಿನ್ಯಾಸ ಕ್ಷೇತ್ರದಲ್ಲಿ ಜಗತ್ತಿನ ಅತಿ ದೊಡ್ಡ ಸಂಸ್ಥೆ ಎನಿಸಿರುವ ಇಂಟೆಲ್, ಅತಿ ದೊಡ್ಡ ಪಿಂಕ್ ಸ್ಲಿಪ್ ಮೇಳಕ್ಕೆ ಮುಂದಾಗಿದೆ. ವಿಶ್ವದೆಲ್ಲೆಡೆ 12 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳಿಸುವುದಾಗಿ ಘೋಷಿಸಿದೆ.

ಕಳೆದ ವರ್ಷದ ಗಣತಿಯಂತೆ ಇಂಟೆಲ್ ನಲ್ಲಿ 1,07,300 ಉದ್ಯೋಗಿಗಳಿದ್ದಾರೆ. ಈಗ ಸಂಸ್ಥೆಯನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ ಶೇ 11ರಷ್ಟು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತದೆ.

Intel to slash up to 12,000 jobs

2017 ರ ಮಧ್ಯಭಾಗದ ಹೊತ್ತಿಗೆ ಉದ್ಯೋಗ ಕಡಿತ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ ಹಲವಾರು ಉದ್ಯೋಗಿಗಳಿಗೆ ಮುಂದಿನ 60 ದಿನಗಳಲ್ಲಿ ಕಂಪನಿ ತೊರೆಯುವಂತೆ ಸೂಚನೆ ನೀಡಲಾಗುತ್ತದೆ ಎಂದು ಇಂಟೆಲ್ ಹೇಳಿದೆ.

ಕಳೆದ ಹಲವು ವರ್ಷಗಳಿಂದ ಪರ್ಸನಲ್ ಕಂಪ್ಯೂಟರ್ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರುತ್ತಿತ್ತು. ಇಂಟೆಲ್ ಮೈಕ್ರೋಪ್ರೊಸೆಸರ್ ಗೆ ಬೇಡಿಕೆ ಇತ್ತು. ಆದರೆ. ಸ್ಮಾರ್ಟ್ ಫೋನ್ ಕ್ಷೇತ್ರ ಬಲಗೊಳ್ಳುತ್ತಿದ್ದಂತೆ ಅದೇ ಪ್ರಾಬಲ್ಯವನ್ನು ಮುಂದುವರೆಸಲು ಇಂಟೆಲ್ ಗೆ ಆಗುತ್ತಿಲ್ಲ. ಡೆಸ್ಕ್ ಟಾಪ್, ಲಾಪ್ ಟಾಪ್ ಗಳನ್ನೇ ನೆಚ್ಚಿಕೊಂಡು ಕಂಪನಿ ನಿರ್ವಹಣೆ ಕಷ್ಟವಾಗುತ್ತಿದೆ.


ಇಂಟೆಲ್ ಸಂಸ್ಥೆಗೆ ಮೈಕ್ರೋಪ್ರೊಸೆಸರ್ ಹಾಗೂ ಚಿಪ್ ವ್ಯವಹಾರದಿಂದಲೇ ಶೇ 60 ರಷ್ಟು ಲಾಭ ಬರುತ್ತಿದೆ. ಈಗ ಈ ಉದ್ಯೋಗ ಕಡಿತದಿಂದ ಈ ವರ್ಷ 750 ಮಿಲಿಯನ್ ಯುಎಸ್ ಡಾಲರ್ ಉಳಿಸಲು ಇಂಟೆಲ್ ಯೋಜಿಸಿದೆ ಎಂದು ಮುಖ್ಯ ಕಾರ್ಯಕಾರಿ ಅಧಿಕಾರಿ ಬ್ರಿಯಾನ್ ಕ್ರಾಜಾನಿಕ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
intel, the world’s largest microprocessor maker, will shed up to 12,000 jobs worldwide in a massive restructuring effort to reduce its dependence on the personal computer market which is witnessing sluggish growth.
Please Wait while comments are loading...