ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರಾರು ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಲಿರುವ ಇಂಟೆಲ್

|
Google Oneindia Kannada News

ಆಲ್ಫಾಬೆಟ್ ಮಾಲೀಕತ್ವದ ಗೂಗಲ್, ಮೈಕ್ರೋಸಾಫ್ಟ್, ವಿಪ್ರೋ, ಇನ್ಫೋಸಿಸ್ ಮತ್ತು ಫೇಸ್‌ಬುಕ್-ಪೋಷಕ ಮೆಟಾ ಹೀಗೆ ಉದ್ಯೋಗ ಕಡಿತಗೊಳಿಸಿದ ಸಂಸ್ಥೆಗಳ ಸಾಲಿಗೆ ಪ್ರಮುಖ ಕಂಪನಿ ಸೇರ್ಪಡೆಗೊಂಡಿದೆ. ಚಿಪ್‌ ತಯಾರಕ ಸಂಸ್ಥೆ ಇಂಟೆಲ್ ಕಾರ್ಪ್ ಹೊಸದಾಗಿ ಸೇರಿಕೊಂಡಿದೆ.

ಪರ್ಸನಲ್ ಕಂಪ್ಯೂಟರ್ ಮಾರುಕಟ್ಟೆ ಕುಸಿತ ಕಾಣುತ್ತಿದ್ದು, ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಚಿಪ್‌ ತಯಾರಕ ಸಂಸ್ಥೆ ಇಂಟೆಲ್ ಕಾರ್ಪ್ ಯೋಜಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಮಂಗಳವಾರ ವರದಿ ಮಾಡಿದೆ

ಉದ್ಯೋಗಿಗಳ ಸಂಖ್ಯೆ ಕಡಿತದ ಬಗ್ಗೆ ಇಂಟೆಲ್ ಈ ಮುಂಚೆಯೇ ಸೂಚನೆ ನೀಡಿದ್ದು, ಸೇಲ್ಸ್ ಹಾಗೂ ಮಾರುಕಟ್ಟೆ ವಿಭಾಗದಲ್ಲಿ ಶೇ 20ರಷ್ಟು ಸಿಬ್ಬಂದಿಗಳನ್ನು ಮನೆಗೆ ಕಳಿಸಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಬಂದಿದೆ. ಲಭ್ಯ ಮಾಹಿತಿ ಪ್ರಕಾರ ಜುಲೈ ಎಣಿಕೆಯಂತೆ 1,13,700 ಉದ್ಯೋಗಿಗಳನ್ನು ಸಂಸ್ಥೆ ಹೊಂದಿದೆ. ಆದರೆ, ಎಷ್ಟು ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬುದರ ಬಗ್ಗೆ ಇಂಟೆಲ್ ಸ್ಪಷ್ಟಪಡಿಸಿಲ್ಲ.

Intel Plans To Cut Thousands Of Jobs Hit By Demand Slowdown: Report

ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷಿತ ಆದಾಯ, ನಿವ್ವಳ ಲಾಭ ಗಳಿಸಲು ಸಾಧ್ಯವಾಗದ ಕಾರಣ, ವಾರ್ಷಿಕ ಮಾರಾಟ ಮಾರ್ಗದರ್ಶಿಯನ್ನು ಇಂಟೆಲ್ ಪ್ರಕಟಿಸಿರಲಿಲ್ಲ.

ಟೆಕ್ ದೈತ್ಯ ಸಂಸ್ಥೆಗಳ ಈ ಕಂಪನಿಯಿಂದ ಉದ್ಯೋಗಿಗಳ ಕಡಿತ ಘೋಷಣೆಟೆಕ್ ದೈತ್ಯ ಸಂಸ್ಥೆಗಳ ಈ ಕಂಪನಿಯಿಂದ ಉದ್ಯೋಗಿಗಳ ಕಡಿತ ಘೋಷಣೆ

ಸಾಂಕ್ರಾಮಿಕ-ಸಂಬಂಧಿತ ಲಾಕ್‌ಡೌನ್‌ಗಳ ಸಮಯಕ್ಕೆ ಹೋಲಿಸಿದರೆ ದಶಕಗಳಿಗೂ ಹೆಚ್ಚಿನ ಹಣದುಬ್ಬರ ಎದುರಾಗಿದ್ದು, ಕಚೇರಿಗಳು ಮತ್ತು ಶಾಲೆಗಳ ಪುನರಾರಂಭಗೊಂಡರೂ ಪರ್ಸನಲ್ ಕಂಪ್ಯೂಟರ್ ಖರೀದಿಗೆ ಜನರು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ ಎಂದು ವಿಶ್ಲೇಷಣೆ ಮಾಡಲಾಗಿದೆ.

ಕೋವಿಡ್ 19 ಸಂದರ್ಭದಲ್ಲಿ ಹೊಡೆತಕ್ಕೆ ಸಿಲುಕಿದ್ದ ಇಂಟೆಲ್ ಪ್ರಸ್ತುತ ಉಕ್ರೇನ್-ರಷ್ಯಾ ಸಂಘರ್ಷದಿಂದ ನಷ್ಟ ಅನುಭವಿಸುತ್ತಿದೆ. ಬೇಡಿಕೆಗೆ ತಕ್ಕ ಪೂರೈಕೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಇಂಟೆಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಟ್ ಗೆಲ್ಸಿಂಗರ್ ಮಂಗಳವಾರ ಕಂಪನಿಯ ಉದ್ಯೋಗಿಗಳಿಗೆ ಜ್ಞಾಪಕ ಪತ್ರ(memo)ವನ್ನು ಬಿಡುಗಡೆ ಮಾಡಿ, ಬಾಹ್ಯ ಗ್ರಾಹಕರು ಮತ್ತು ಕಂಪನಿಯ ಉತ್ಪನ್ನ ಲೈನ್‌ಗಳಿಗಾಗಿ ಆಂತರಿಕ ಫೌಂಡ್ರಿ ಮಾದರಿಯನ್ನು ರಚಿಸುವ ಯೋಜನೆಗಳನ್ನು ವಿವರಿಸಿದ್ದಾರೆ.

ಫೌಂಡ್ರಿ ವ್ಯವಹಾರವು ಇತರ ಕಂಪನಿಗಳು ವಿನ್ಯಾಸಗೊಳಿಸುವ ಚಿಪ್‌ಗಳನ್ನು ನಿರ್ಮಿಸುತ್ತದೆ ಮತ್ತು ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕೋ ಆ ಜಾಗದಲ್ಲಿ ಅಗ್ರ ಸಂಸ್ಥೆಗಳಾಗಿದೆ. ಇಂಟೆಲ್ ಮುಖ್ಯವಾಗಿ ಇದುವರೆಗೆ ಸ್ವತಃ ವಿನ್ಯಾಸಗೊಳಿಸಿದ ಚಿಪ್‌ಗಳನ್ನು ನಿರ್ಮಿಸಿ, ಮಾರಾಟುತ್ತಿದೆ.

ಇತ್ತ ಭಾರತದಲ್ಲಿ ಇನ್ಫೋಸಿಸ್‌, ವಿಪ್ರೋ ಮತ್ತು ಎಚ್‌ಸಿಎಲ್‌ ಕಂಪೆನಿಗಳಲ್ಲಿ ಫ್ರೆಶರ್‌ಗಳ ನೇಮಕಾತಿ ಕುರಿತಂತೆ ಗೊಂದಲ ಮುಂದುವರೆದಿದೆ. ಬಹುರಾಷ್ಟ್ರೀಯ ಐಟಿ ಕಂಪನಿ ಆಕ್ಸೆಂಚರ್ ಹೊಸ ಉದ್ಯೋಗಿಗಳನ್ನು ಸೇರ್ಪಡೆಗೊಳಿಸುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಆರೋಪಗಳನ್ನು ಎದುರಿಸುತ್ತಿದೆ.

ಕೆಲಸದ ನಿಯೋಜನೆಯಲ್ಲಿ ವಿಳಂಬ ಮಾತ್ರವಲ್ಲದೆ ಕಂಪನಿಯು ಆಫರ್ ಲೆಟರ್ ನೀಡಿದ ನಂತರ ಸೇರಲು ನಿರಾಕರಿಸುವ ಮೂಲಕ ಫ್ರೆಶರ್‌ಗಳಿಗೆ ದೊಡ್ಡ ಹೊಡೆತವನ್ನು ನೀಡಿದೆ. ಟೆಕ್ ಕಂಪನಿಗಳ ಈ ಧೋರಣೆಯಿಂದ ಹೊಸ ಉದ್ಯೋಗಿಗಳು ಸಮಸ್ಯೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಅವರಲ್ಲಿ ಭವಿಷ್ಯದ ಕಾಳಜಿಯೂ ಹೆಚ್ಚಿದೆ.

English summary
Chipmaker Intel Corp is planning a major reduction in headcount, likely numbering in the thousands, in the face of a slowdown in the personal computer market, Bloomberg News reported on Tuesday, citing people with knowledge of the situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X