ಚಾಲ್ತಿಯಲ್ಲಿರದ ಪಿಎಫ್ ಖಾತೆಗೂ ಇನ್ಮುಂದೆ ಬಡ್ಡಿ

Subscribe to Oneindia Kannada

ನವದೆಹಲಿ, ಮಾರ್ಚ್, 30: ಕಾರ್ಮಿಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಚಾಲ್ತಿಯಲ್ಲಿಲ್ಲದ ಭವಿಷ್ಯ ನಿಧಿ (ಪಿಎಫ್‌) ಖಾತೆಯಲ್ಲಿ ಇರುವ ಹಣಕ್ಕೂ ಏಪ್ರಿಲ್‌ 1 ರಿಂದ ಬಡ್ಡಿ ಸಿಗಲಿದೆ.

ಇದು 32 ಸಾವಿರ ಕೋಟಿ ರು. ಠೇವಣಿ ಹೊಂದಿರುವ 9 ಕೋಟಿ ಖಾತೆದಾರರಿಗೆ ಲಾಭ ತಂದುಕೊಡಲಿದೆ. ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನೇತೃತ್ವದಲ್ಲಿ ಮಂಗಳವಾರ ನಡೆದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಕಾರ್ಮಿಕರಿಗೆ ಮತ್ತು ಮಧ್ಯಮ ವೇತನ ಪಡೆಯುವ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.[ಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ]

Inoperative PF accounts to earn interest from April 1

'ಯುಪಿಎ ಸರ್ಕಾರ ಆಡಳಿತಲ್ಲಿದ್ದಾಗ ಚಾಲ್ತಿಯಲ್ಲಿರದ ಪಿಎಫ್‌ ಖಾತೆಗಳಲ್ಲಿ ಇರುವ ಹಣಕ್ಕೆ ಬಡ್ಡಿ ನೀಡುವುದನ್ನು ನಿಲ್ಲಿಸಿತ್ತು. ಇದೀಗ ನಾವು ಮತ್ತೆ ಕಾರ್ಮಿಕರ ಪರವಾದ ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದು ಬಂಡಾರು ದತ್ತಾತ್ರೇಯ ತಿಳಿಸಿದರು.[ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]

36 ತಿಂಗಳವರೆಗೆ ಪಿಎಫ್ ಖಾತೆಗೆ ಹಣ ಸಂದಾಯ ಆಗದೇ ಇದ್ದರೆ ಅಂತಹ ಖಾತೆಯನ್ನು ಚಾಲ್ತಿಯಲ್ಲಿಲ್ಲದ ಖಾತೆ ಎಂದು ಪರಿಗಣಿಸಲಾಗುತ್ತದೆ. ಆದರೆ ಇದೀಗ ಪಿಎಫ್‌ ಖಾತೆಗೆ ಬಡ್ಡಿ ಹಣ ನಿರಂತರವಾಗಿ ಜಮಾ ಆಗುವುದರಿಂದ ಚಾಲ್ತಿಯಲ್ಲಿಲ್ಲದ ಖಾತೆಗಳೇ ಇರುವುದಿಲ್ಲ ಎಂದು ತಿಳಿಸಿದರು.

ಬಜೆಟ್ ವೇಳೆ ಪಿಎಫ್ ವಿತ್ ಡ್ರಾ ಮೇಲೆ ತೆರಿಗೆ ವಿಧಿಸಿ ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ನಂತರ ಆ ನೀತಿಯನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಇದೀಗ ಚಾಲ್ತಿಯಲ್ಲಿಲ್ಲದ ಭವಿಷ್ಯ ನಿಧಿ ಖಾತೆಗೂ ಬಡ್ಡಿ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದೇ ವಿಶ್ಲೇಷಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Retirement fund body EPFO decided to provide interest on inoperative accounts from April 1, a move which will benefit over nine crore such account-holders having total deposits of over Rs 32,000 crore.
Please Wait while comments are loading...