ಇನ್ಫಿಯಿಂದ ಯುಎಸ್ಎ, ಆಸ್ಟ್ರೇಲಿಯಾದಲ್ಲಿ ಸಾವಿರಾರು ಉದ್ಯೋಗ
ಬೆಂಗಳೂರು, ನವೆಂಬರ್ 21: ಭಾರತದ ಪ್ರಮುಖ ಐಟಿ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಅಸ್ಟ್ರೇಲಿಯಾ ಹಾಗೂ ಯುಎಸ್ಎ ಕೇಂದ್ರಗಳನ್ನು ವಿಸ್ತರಿಸಲು ಮುಂದಾಗಿದೆ. ಇದರಿಂದಾಗಿ ಸಾವಿರಾರು ಮಂದಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಬುಧವಾರ(ನವೆಂಬರ್ 21)ದಂದು ಸಂಸ್ಥೆ ಹೇಳಿದೆ.
ಆಸ್ಟ್ರೇಲಿಯಾದಲ್ಲಿ ಮೂರು ಉನ್ನತ ತಂತ್ರಜ್ಞಾನದ ಹಬ್ ಗಳನ್ನು ಸ್ಥಾಪಿಸಲಾಗುವುದು ಇದರಿಂದ 1,200 ಅಭ್ಯರ್ಥಿಗಳಿಗೆ ಉದ್ಯೋಗ ಸಿಗಲಿದೆ. 2020ರೊಳಗೆ ಎಲ್ಲಾ ನೇಮಕಾತಿ ಅಗಲಿದೆ ಎಂದಿದೆ.
ಬೆಂಗಳೂರೂ ಮೂಲದ ಸಂಸ್ಥೆ ಇದೇ ರೀತಿ ಹಬ್ ಗಳನ್ನು ಯುಎಸ್ ನಲ್ಲೂ ಹೊಂದಿದ್ದು, 10 ಸಾವಿರ ಮಂದಿ ಸ್ಥಳೀಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. 2017ರ ಮೇ ತಿಂಗಳಿನಿಂದ ಇಲ್ಲಿ ತನಕ ಸುಮಾರು 6,200 ಸ್ಥಳೀಯರನ್ನು ನೇಮಿಸಿಕೊಳ್ಳಲಾಗಿದೆ.

ಆಸ್ಟ್ರೇಲಿಯಾದಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ವಿನ್ಯಾಸ ವಿಷಯದಲ್ಲಿ ಪದವಿ ಪಡೆದವರಿಗೆ ಇನ್ಫೋಸಿಸ್ ಸೇರಲು ಅವಕಾಶ ಸಿಗಲಿದೆ. ಆಸ್ಟ್ರೇಲಿಯಾದಲ್ಲಿ ಸಂಸ್ಥೆ 20 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಸಂಸ್ಥೆಯ ಸಿಒಒ ಪ್ರವೀಣ್ ರಾವ್ ಹೇಳಿದರು.












Click it and Unblock the Notifications