ಇನ್ಫೋಸಿಸ್ ತೆಕ್ಕೆಗೆ ಯುಎಸ್ ಐಟಿ ಕನ್ಸಲ್ಟೆನ್ಸಿ ನೋವಾ

ಬೆಂಗಳೂರು, ಅ.19: ಭಾರತದ ಎರಡನೇ ಅತಿದೊಡ್ಡ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ಫಲಿತಾಂಶದ ನಂತರ ಹೊಸ ಸಂಸ್ಥೆ ಖರೀದಿಗೆ ಮುಂದಾಗಿದೆ. ಯುಎಸ್ ಮೂಲದ ನೋವಾ ಕನ್ಸಲ್ಟೆನ್ಸಿ ಖರೀದಿ ಮೂಲಕ ಈ ವರ್ಷದ ಮೂರನೇ ದೊಡ್ಡ ಡೀಲ್ ಕುದುರಿಸುತ್ತಿದೆ.

ತೈಲ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ ಸರ್ವೀಸ್ ನೀಡುತ್ತಿರುವ ನೋವಾ(Noah) ಕನ್ಸಲ್ಟೆನ್ಸಿ 2008ರಲ್ಲಿ ಸ್ಥಾಪನೆಗೊಂಡ ಕಂಪನಿಯಾಗಿದೆ. 122 ಉದ್ಯೋಗಿಗಳನ್ನು ಹೊಂದಿರುವ ನೋವಾ ಹೋಸ್ಟನ್, ಟೆಕ್ಸಾಸ್, ಕಲಗರಿ, ಕೆನಡಾದಲ್ಲಿ ತನ್ನ ಕಚೇರಿಯನ್ನು ಹೊಂದಿದೆ.[Q2: ಟಿಸಿಎಎಸ್ vs ಇನ್ಫೋಸಿಸ್ ಯಾವ ಷೇರು ಖರೀದಿಸಲಿ?]

Infosys to buy energy-focused IT firm Noah Consulting for $70 million in cash

ಈಗ ನೋವಾ ಕನ್ಸಲ್ಟೆನ್ಸಿಯನ್ನು ಸುಮಾರು 70 ಮಿಲಿಯನ್ ಡಾಲರ್ ನಗದು ನೀಡಿ ಇನ್ಫೋಸಿಸ್ ಖರೀದಿಸುತ್ತಿದೆ. 2016ರ ಅಂತ್ಯದೊಳಗೆ ನೊವಾ ಸಂಸ್ಥೆ ಸಂಪೂರ್ಣವಾಗಿ ಇನ್ಫೋಸಿಸ್ ಪಾಲಾಗಲಿದೆ. [ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!]

ತೈಲ ಕಂಪನಿಗಳ ಮಾಹಿತಿ ಹಾಗೂ ದತ್ತಾಂಶ ಶೇಖರಣೆ ವ್ಯವಸ್ಥೆ ಸುಧಾರಣೆ ಹಾಗೂ ಜಾಗತಿಕವಾಗಿ ಎಂಡ್ ಟು ಎಂಡ್ ಡಾಟಾ ಮ್ಯಾನೇಜ್ಮೆಂಟ್ ಒದಗಿಸಲು ಇನ್ಫೋಸಿಸ್ ನಿಂದ ಸಾಧ್ಯ ಎಂದು ಇನ್ಫೋಸಿಸ್ ನ ಇವಿಪಿ, ಜಾಗತಿಕ ಇಂಧನ ಹಾಗೂ ಸಂವಹನ ವಿಭಾಗದ ರಾಜೇಶ್ ಮೂರ್ತಿ ಹೇಳಿದ್ದಾರೆ.

2015ರ ಫೆಬ್ರವರಿ ತಿಂಗಳಿನಲ್ಲಿ ಆಟೋಮೇಷನ್ ಸ್ಟಾರ್ಟ್ ಅಪ್ ಪನಯಾವನ್ನು 200 ಮಿಲಿಯನ್ ಡಾಲರ್ ನೀಡಿ ಇನ್ಫೋಸಿಸ್ ಖರೀದಿಸಿತ್ತು. ಏಪ್ರಿಲ್ ತಿಂಗಳಿನಲ್ಲಿ ಡಿಜಿಟಲ್, ಮೊಬೈಲ್ ಸಲ್ಯೂಷನ್ ಸಂಸ್ಥೆ ಕಲ್ಲಿದಸ್(Kallidus) ಐಎನ್ ಸಿಯನ್ನು 120 ಮಿಲಿಯನ್ ಡಾಲರ್ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+