ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ravi Kumar S resigns : ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ಎಸ್ ರಾಜೀನಾಮೆ

|
Google Oneindia Kannada News

ಬೆಂಗಳೂರು, ಅ.11: ಐಟಿ ಸೇವೆಗಳ ಪ್ರಮುಖ ಸಂಸ್ಥೆ ಇನ್ಫೋಸಿಸ್ ತನ್ನ ಅಧ್ಯಕ್ಷ ರವಿ ಕುಮಾರ್ ಎಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಂಗಳವಾರ ತಿಳಿಸಿದೆ.

ರವಿಕುಮಾರ್ ಅವರು ಕಂಪನಿಗೆ ನೀಡಿದ ಕೊಡುಗೆಗಳಿಗಾಗಿ, ಅವರು ಸಲ್ಲಿಸಿದ ಸೇವೆಗಳಿಗೆ ನಿರ್ದೇಶಕರ ಮಂಡಳಿಯು ತಮ್ಮ ಮೆಚ್ಚುಗೆಯನ್ನು ತಿಳಿಸಿದೆ ಎಂದು ಇನ್ಫೋಸಿಸ್ ಹೇಳಿದೆ.

ತಾಯಂದಿರು, ಭಾರತೀಯ ಮೂಲದವರ ನೇಮಕಾತಿ ಬೇಡ ಎಂದಿತ್ತಾ ಇನ್ಫೋಸಿಸ್? ಅಮೆರಿಕ ಕೋರ್ಟ್‌ನಲ್ಲಿ ವಿಚಾರಣೆತಾಯಂದಿರು, ಭಾರತೀಯ ಮೂಲದವರ ನೇಮಕಾತಿ ಬೇಡ ಎಂದಿತ್ತಾ ಇನ್ಫೋಸಿಸ್? ಅಮೆರಿಕ ಕೋರ್ಟ್‌ನಲ್ಲಿ ವಿಚಾರಣೆ

ಕಂಪನಿಯ ಎರಡನೇ ತ್ರೈಮಾಸಿಕ ಫಲಿತಾಂಶ ಪ್ರಕಟಣೆಗೆ ಕೇವಲ 2 ದಿನಗಳ ಮುಂಚಿತವಾಗಿ ಈ ಕ್ರಮವು ಬಂದಿದೆ. ಕಂಪನಿ ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಮಾಹಿತಿಯಲ್ಲಿ ಈ ವಿಷಯ ತಿಳಿದು ಬಂದಿದೆ.

Infosys Says President Ravi Kumar S Resigns

ರವಿ ಕುಮಾರ್ ಎಸ್ ಅವರ ರಾಜೀನಾಮೆ ಅಂಗೀಕಾರವಾಗಿದ್ದು, ಅ.11 ರ ಮಂಗಳವಾರವೇ ಅವರ ಅಧಿಕಾರದ ಕಡೆಯ ದಿನವಾಗಿದೆ ಎಂದು ಇನ್ಫೋಸಿಸ್ ತಿಳಿಸಿದೆ. ಆದರೆ, ರಾಜೀನಾಮೆಗೆ ಯಾವುದೇ ಕಾರಣವನ್ನು ನೀಡಿಲ್ಲ.

ಅಧ್ಯಕ್ಷರಾಗಿ ತಮ್ಮ ಪಾತ್ರದಲ್ಲಿ, ರವಿಕುಮಾರ್ ಅವರು ಎಲ್ಲಾ ಉದ್ಯಮ ವಿಭಾಗಗಳಲ್ಲಿ ಇನ್ಫೋಸಿಸ್ ಗ್ಲೋಬಲ್ ಸರ್ವಿಸಸ್ ಆರ್ಗನೈಸೇಶನ್ ಅನ್ನು ಮುನ್ನಡೆಸಿದರು.

ಕನ್ಸಲ್ಟಿಂಗ್, ತಂತ್ರಜ್ಞಾನ, ಮೂಲಸೌಕರ್ಯ, ಇಂಜಿನಿಯರಿಂಗ್ ಮತ್ತು ಪ್ರೊಸೆಸ್ ವರ್ಟಿಕಲ್ ಸೇವೆಗಳಿ ಸೇರಿದಂತೆ ವಿಶೇಷ ಡಿಜಿಟಲ್ ಮಾರಾಟಗಳನ್ನು ಮುನ್ನಡೆಸಿದ್ದರು.

ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಪರಮಾಣು ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಅವರು 2002 ರಲ್ಲಿ ಇನ್ಫೋಸಿಸ್‌ಗೆ ಸೇರಿದ್ದರು. 2016 ರಲ್ಲಿ ಅದರ ಅಧ್ಯಕ್ಷರಾಗಿ ನೇಮಕಗೊಂಡರು.

2017 ರಲ್ಲಿ, ಅವರನ್ನು ಡೆಪ್ಯೂಟಿ ಸಿಒಒ ಎಂದು ಕರೆಯಲಾಗಿತ್ತು. ಕಳೆದ ವರ್ಷಯುಬಿ ಪ್ರವೀಣ್ ರಾವ್ ಅವರ ನಿವೃತ್ತಿಯ ನಂತರ ಇನ್ಫೋಸಿಸ್ ಅಧ್ಯಕ್ಷರಾಗಿದ್ದರು.

ಇನ್ಫೋಸಿಸ್‌ನ 2021-22ರ ವಾರ್ಷಿಕ ವರದಿಯ ಪ್ರಕಾರ, ಸಿಇಒ ಸಲೀಲ್ ಪರೇಖ್ ಮತ್ತು ಮಾಜಿ ಸಿಒಒ ಯುಬಿ ಪ್ರವೀಣ್ ರಾವ್ ನಂತರ ಕುಮಾರ್ ಅವರು ಕಂಪನಿಯ ಮೂರನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿರಿಯ ಅಧಿಕಾರಿಯಾಗಿದ್ದಾರೆ.

ಅಕ್ಟೋಬರ್ 13 ರಂದು ತನ್ನ ಎರಡನೇ ತ್ರೈಮಾಸಿಕ ಗಳಿಕೆಯನ್ನು ಪ್ರಕಟಿಸಲಿರುವ ಇನ್ಫೋಸಿಸ್ ಷೇರುಗಳು ಬಿಎಸ್‌ಇಯಲ್ಲಿ 2.65 ಶೇಕಡಾ ಕಡಿಮೆಯಾಗಿ 1,423.90 ರೂಪಾಯಿಗೆ ಕೊನೆಗೊಂಡಿದೆ.

English summary
Infosys Tuesday said its president Ravi Kumar S has resigned from his post. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X