ಇನ್ಪಿ Q3 : ಆದಾಯ ಶೇ7 ಆದಾಯ ಹೆಚ್ಚಳ, ಷೇರುಗಳ ಪತನ

Posted By:
Subscribe to Oneindia Kannada

ಬೆಂಗಳೂರು, ಜನವರಿ 13: ದೇಶದ ಎರಡಣೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಯ ಮೂರನೇ ತ್ರೈಮಾಸಿಕ ವರದಿ ಶುಕ್ರವಾರ ಪ್ರಕಟವಾಗಿದ್ದು, ಶೇ7 ರಷ್ಟು ಆದಾಯ ಹೆಚ್ಚಳ ಕಂಡು 3,708 ಕೋಟಿ ರು ನಿವ್ವಳ ಲಾಭ ಗಳಿಸಿದೆ.

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಐಟಿ ಸಂಸ್ಥೆಯ ನಿವ್ವಳ ಲಾಭ ಕಳೆದ ವರ್ಷ ಇದೇ ಅವಧಿಗೆ 3,465 ಕೋಟಿ ರು ನಂತ್ ಇತ್ತು. ವಾರ್ಷಿಕ ಕರೆನ್ಸಿ ಆದಾಯ ಮಾರ್ಗದರ್ಶಿಯನ್ನು ಶೇ 8.4 ರಿಂದ 8.8ಕ್ಕೆ ತಗ್ಗಿಸಲಾಗಿದೆ. ಈ ಮುಂಚೆ ಶೇ 8ರಿಂದ9 ರಷ್ಟಿತ್ತು.

Infosys Q3 profit up 7% to Rs 3,708 cr, revises revenue guidance

ಒಟ್ಟಾರೆ, ಮೂರನೇ ತ್ರೈಮಾಸಿಕದ ಆದಾಯ ಸೇರಿ 17,273 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,902 ಕೋಟಿ ರು ಆದಾಯ ಗಳಿಸಿತ್ತು.

ಆದಾಯ ಗಳಿಕೆ ಹೆಚ್ಚಳ, ನಿವ್ವಳ ಲಾಭದ ಹೊರತಾಗಿಯೂ ಷೇರುಪೇಟೆಯಲ್ಲಿ ಇನ್ಫೋಸಿಸ್ ಷೇರುಗಳು ಹೆಚ್ಚಿನ ಸದ್ದು ಮಾಡಿಲ್ಲ. ದಿನದ ಆರಂಭದಲ್ಲಿ ಬಿಎಸ್ ಇನಲ್ಲಿ ಶೇ 0.61ರಷ್ಟು ಕುಸಿತ ಕಂಡು 993.95 ನಂತೆ ವಹಿವಾಟು ನಡೆಸಿತ್ತು. ದಿನದ ಅಂತ್ಯಕ್ಕೆ 24 ರು ಕಳೆದುಕೊಂಡು ಶೇ 2.49ರಷ್ಟು ಕುಸಿತ ಕಂಡು 975.15 ನಂತೆ ವ್ಯವಹರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Country's second-largest software firm Infosys today reported a 7 per cent growth in its consolidated net profit at Rs 3,708 crore for the October-December quarter of the current fiscal.
Please Wait while comments are loading...