Get Updates
Get notified of breaking news, exclusive insights, and must-see stories!

ಇನ್ಫೋಸಿಸ್ 2ನೇ ತ್ರೈಮಾಸಿಕ ವರದಿ ಪ್ರಕಟ, ನಿವ್ವಳ ಲಾಭ ತುಸು ಇಳಿಕೆ

ಬೆಂಗಳೂರು, ಅಕ್ಟೋಬರ್ 11: ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಬೆಂಗಳೂರು ಮೂಲದ ಇನ್ಫೋಸಿಸ್ 2ನೇ ತ್ರೈಮಾಸಿಕ ವರದಿ ಶುಕ್ರವಾರದಂದು ಪ್ರಕಟಿಸಲಾಗಿದೆ. ಈ ವರದಿ ಪ್ರಕಾರ ವರ್ಷದಿಂದ ವರ್ಷ(y-o-y)ಕ್ಕೆ ನಿವ್ವಳ ಲಾಭ ತಗ್ಗಿದೆ.

ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 2.2 ರಷ್ಟು ನಿವ್ವಳ ಲಾಭ ತಗ್ಗಿ 4,019 ಕೋಟಿ ರು ಲಾಭ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 4,110 ಕೋಟಿ ರು ಲಾಭ ಗಳಿಸಿತ್ತು. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 3,798 ಕೋಟಿ ರು ಲಾಭ ಬಂದಿತ್ತು. ಹೀಗಾಗಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ 5.8% ನಿವ್ವಳ ಲಾಭ ಹೆಚ್ಚಾಗಿದೆ.+

ಆದಾಯ ಪ್ರಗತಿ ಶೇ11.4ರಷ್ಟು ರುಪಾಯಿ ಮೌಲ್ಯದಂತೆ ಹಾಗೂ 9.9% ಡಾಲರ್ ಮೌಲ್ಯದಂತೆ ಹೆಚ್ಚಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ 9.8% ಆದಾಯ ಏರಿಕೆ ಕಂಡಿದ್ದು 22,629 ಕೋಟಿ ರು ಗಳಿಕೆಯಾಗಿದ್ದರೆ, ತ್ರೈಮಾಸಿಕದಿಂದ ತ್ರೈಮಾಸಿಕ ಲೆಕ್ಕದಂತೆ 3.8% ಏರಿಕೆಯಾಗಿದೆ.+

Infosys Q2 report: Net profit dips 2 pc Y-o-Y to Rs 4,019 cr

"ಕಾರ್ಯ ನಿರ್ವಹಣಾ ಲಾಭ ವರ್ಷದಿಂದ ವರ್ಷಕ್ಕೆ 0.4ರಷ್ಟು ಹಾಗೂ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ 9.9ರಷ್ಟು ಏರಿಕೆಯಾಗಿ 4,912 ಕೋಟಿ ರು ನಷ್ಟಿದೆ. ಸಂಸ್ಥೆಯು 8 ರು ಪ್ರತಿ ಷೇರಿನಂತೆ ಮಧ್ಯಂತರ ಡಿವಿಡೆಂಟ್ ಘೋಷಿಸಿದೆ, ಜೂನ್ ನಲ್ಲಿದ್ದ 21.5% ಆಟ್ರಿಷನ್ ದರ ಈ ತ್ರೈಮಾಸಿಕದಲ್ಲಿ 19.4%ಗೆ ತಗ್ಗಿದೆ" ಎಂದು ವ್ಯವಸ್ಥಾಪಕ ನಿರ್ದೇಶಕ, ಸಿಇಒ ಸಲೀಲ್ ಪರೇಖ್ ಹೇಳಿದರು.

ಶುಕ್ರವಾರದ ದಿನದ ವಹಿವಾಟಿನ ಅಂತ್ಯಕ್ಕೆ ಷೇರುಪೇಟೆಯಲ್ಲಿ ಇನ್ಫೋಸಿಸ್ ಷೇರುಗಳು 814.80 ರು ನಂತೆ ಶೇ 4.05ರಷ್ಟು ಏರಿಕೆ(31.75ರು ) ಕಂಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+