ಎರಡನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಗೆ ಶೇ7 ರಷ್ಟು ಲಾಭ
ಬೆಂಗಳೂರು, ಅಕ್ಟೋಬರ್ 24: ಬೆಂಗಳೂರು ಮೂಲದ ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 7ರಷ್ಟು ಲಾಭ ದಾಖಲಿಸಿದೆ.
ಜುಲೈ -ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಿ ಸುಮಾರು 3,276 ಕೋಟಿ ರು ಲಾಭ ಬಂದಿದೆ. ಈ ತ್ರೈಮಾಸಿಕ ಅವಧಿಯಲ್ಲಿ ಸಂಸ್ಥೆಯ ಆದಾಯ ಶೇ 2.9ರಷ್ಟು ಹೆಚ್ಚಾಗಿ 17,567 ಕೋಟಿ ರು ಗಳಿಕೆಯಾಗಿದೆ.

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಡಾಲರ್ ಆದಾಯ ಪ್ರಗತಿ ಕೂಡಾ ಶೇ 2.9ರಷ್ಟು ಹೆಚ್ಚಳವಾಗಿ 2,728 ಕೋಟಿ ರು ಬಂದಿದೆ. ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆಯ ವಾರ್ಷಿಕ ಕರೆನ್ಸಿ ಆದಾಯ ಮಾರ್ಗದರ್ಶಿಯನ್ನು ಶೇ 5.5-6.5ಕ್ಕೆ ಇಳಿಸಲಾಗಿದೆ.












Click it and Unblock the Notifications