ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ತೈಮಾಸಿಕ : ಇನ್ಫೋಸಿಸ್ ಗೆ ಭರ್ಜರಿ ಲಾಭ, 4,110 ಕೋಟಿ ರು ಗಳಿಕೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ, ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಇಂದು ತನ್ನ 2018ನೇ ಸಾಲಿನ 2ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಲ್ಲಿ ಸಂಸ್ಥೆಗೆ ಶೇ 13.6ರಷ್ಟು ನಿವ್ವಳ ಲಾಭ ಏರಿಕೆಯಾಗಿದ್ದು, 4,110 ಕೋಟಿ ರು ಬಂದಿದೆ.

ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿ

ಡಾಲರ್ ಎಣಿಕೆಯಲ್ಲಿ ಆದಾಯವು ಶೇ 3.2ರಷ್ಟು ಏರಿಕೆ ಕಂಡು 2,921 ಮಿಲಿಯನ್ ಡಾಲರ್ ನಷ್ಟು ಬಂದಿದೆ. ತೆರಿಗೆ ರಹಿತ ಆದಾಯ್ 4,894 ಕೋಟಿ ರು ನಷ್ಟಿದೆ, ಆದರೆ, ಆಪರೇಟಿಂಗ್ ಮಾರ್ಜಿನ್ ಶೇ 23.7ರಷ್ಟೇ ಮುಂದುವರೆದಿದೆ.

Q1 ವರದಿ : ಎಸ್ಬಿಐಗೆ 4,876 ಕೋಟಿ ರು ನಷ್ಟQ1 ವರದಿ : ಎಸ್ಬಿಐಗೆ 4,876 ಕೋಟಿ ರು ನಷ್ಟ

ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದರೆ ಆದಾಯವು ಶೇ 17.3ರಷ್ಟು ಏರಿಕೆ ಕಂಡಿದ್ದು, 20,609 ಕೋಟಿ ರು ನಷ್ಟಿದೆ. ಸಂಸ್ಥೆಯು 7 ರು ಪ್ರತಿ ಷೇರಿನಂತೆ ಮಧ್ಯಂತರ ಡಿವೆಂಡೆಂಡ್ ಘೋಷಿಸಿದೆ. ಮಂಗಳವಾರದಂದು ಷೇರುಪೇಟೆಯಲ್ಲಿ ಇನ್ಫೋಸಿಸ್ ಷೇರುಗಳು 2.70 ರು ಕಳೆದುಕೊಂಡು 696.40 ರು ನಂತೆ ಈ ದಿನ ತನ್ನ ವಹಿವಾಟು ಅಂತ್ಯಗೊಳಿಸಿದೆ.

Infosys Q2 2018 Profit Surges Up To Touch Whopping Rs 4,110 Crore

'ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆಯು 2 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳನ್ನು ಕಂಡಿದೆ. ಡಿಜಿಟಲ್ ಸೇವೆ ಪ್ರಗತಿ ದ್ವಿಗುಣವಾಗಿದೆ' ಎಂದು ಸಿಇಒ, ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪಾರೇಖ್ ಅವರು ಪ್ರತಿಕ್ರಿಯಿಸಿದ್ದಾರೆ.

English summary
Infosys Ltd, the Bangalore based IT major announced second quarter 2018 results. Infosys Ltd, the Bangalore based IT major announced second quarter 2018 results. The company's profit rose for the second quarter but the operating margin remained constant amid fall in the rupee value.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X