ಇನ್ಫೋಸಿಸ್ ಗೆ ಒಲಿದ ಐಟಿ ರಿಟನ್ಸ್ ಸರಳಗೊಳಿಸುವ ಗುತ್ತಿಗೆ

ನವದೆಹಲಿ, ಜನವರಿ 17: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆದಾಯ ತೆರಿಗೆ ಮರು ಪಾವತಿ(ಐಟಿಆರ್) ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಐಟಿ ರಿಟರ್ನ್ಸ್ ಪ್ರಕ್ರಿಯೆ ಒಂದೇ ದಿನದಲ್ಲಿ ಮುಗಿಯಲಿದ್ದು, ರೀಫಂಡ್ ಕೂಡಾ ಬೇಗನೇ ಸಿಗಲಿದೆ.

ಈ ಯೋಜನೆಯನ್ನು ಬೆಂಗಳೂರು ಮೂಲದ ದೇಶದ ಎರಡನೇ ಅತಿದೊಡ್ಡ ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈ ಯೋಜನೆಯ ವೆಚ್ಚ ಸುಮಾರು 4,241.7 ಕೋಟಿ ರು ಗಳಾಗಿವೆ.

ಈ ಯೋಜನೆ ಜಾರಿಯಾದಲ್ಲಿ ಐಟಿಆರ್ ಪ್ರಕ್ರಿಯೆ 63 ದಿನಗಳಿಂದ 1 ದಿನಕ್ಕೆ ಇಳಿಕೆಯಾಗಲಿದೆ. ಈ ಯೋಜನೆ ಪೂರ್ಣಗೊಳಿಸಲು 18 ತಿಂಗಳು ಅವಕಾಶ ನೀಡಲಾಗಿದ್ದು, ಬಳಿಕ 3 ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ.

Infosys to implement new ITR filing project

ಈ ನಡುವೆ ನೂತನ ವ್ಯವಸ್ಥೆ ಜಾರಿ ಬರುವರೆಗೆ Central processing entre(ಸಿಪಿಸಿ) 1.0ರ ಅಭಿವೃದ್ಧಿಗೆ 1482.44 ಕೋಟಿ ರೂ. ನೀಡಲು ಕೇಂದ್ರ ನಿರ್ಧರಿಸಿದೆ. ಈ ಹಿಂದೆ ಜಿಎಸ್​ಟಿಎನ್ ತಂತ್ರಾಂಶವನ್ನು ಕೂಡ ಇನ್ಪೋಸಿಸ್ ಅಭಿವೃದ್ಧಿ ಪಡಿಸಿತ್ತು. ಆದರೆ ಸಾಕಷ್ಟು ದೂರುಗಳು ಕೇಳಿ ಬಂದಿತ್ತು.

ತೆರಿಗೆದಾರರು ಐಟಿಆರ್ ಪ್ರಕ್ರಿಯೆಯನ್ನು ಕೇಂದ್ರೀಯ ವ್ಯವಸ್ಥೆ ಮೂಲಕ ಆನ್​ಲೈನ್​ನಲ್ಲಿ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಬಿಡ್ಡಿಂಗ್ ಮೂಲಕ ಈ ಯೋಜನೆ ಲಭ್ಯವಾಗಿದೆ ಎಂದು ಇನ್ಫೋಸಿಸ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+