• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2 ಸಾವಿರ ಸಿಬ್ಬಂದಿ ನೇಮಕಕ್ಕೆ ಮುಂದಾದ ಐಟಿ ದಿಗ್ಗಜ

|

ಬೆಂಗಳೂರು, ನ.6 : ಐಟಿ ದಿಗ್ಗಜ ಇನ್ ಇನ್ಫೋಸಿಸ್ ತಾಂತ್ರಿಕ ಕೌಶಲ್ಯ ಮತ್ತು ವ್ಯವಹಾರ ವೃದ್ಧಿಗೆ ಅಮೆರಿಕದಲ್ಲಿರುವ ತನ್ನ ಕಂಪನಿಗೆ 2,100 ಜನ ಹೊಸ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ತೀರ್ಮಾನಿಸಿದೆ.

1,500 ಜನ ವೃತ್ತಿಪರರು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುವುದು. ಅಲ್ಲದೇ 600 ಜನ ಹೊಸ ಪದವೀಧರರು ಮತ್ತು ಮುಂದಿನ ಒಂದು ವರ್ಷದ ಅವಧಿಯಲ್ಲಿ ಪದವಿ ಪಡೆಯುವವರನ್ನು ಬಾಡಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ಕಂಪನಿ ಹೇಳಿಕೆಯೊಂದು ತಿಳಿಸಿದೆ.[ಇನ್ಫೋಸಿಸ್ ಗೊಣಗಾಟಕ್ಕೆ ಸರ್ಕಾರ ಗೋಣು ಆಡಿಸಬೇಕೇ?]

ಹೊಸ ಸಿಬ್ಬಂದಿ ನೇಮಕದಿಂದ ಕೆಲಸ ಇನ್ನಷ್ಟು ಅಚ್ಚುಕಟ್ಟಾಗುವುದು. ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ಮ್ಯಾನೆಜ್ ಮೆಂಟ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿ ಅಮೆರಿಕದ 300 ಜನ ಪದವಿಧರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವರು ಡಿಜಿಟಲ್, ಆನಾಲಿಟಿಕಲ್, ಡಾಡಾ ಪ್ರೊಸೇಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲಿದ್ದಾರೆ. ಈಗಾಗಲೇ 180 ಜನರಿಗೆ ನೇಮಕ ಆದೇಶ ನೀಡಲಾಗಿದ್ದು ಇತರರೊಂದಿಗೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.[ಪ್ರತಿಕ್ರಿಯೆ: ಇನ್ಫೋಸಿಸ್ ತಗಾದೆ, ಸರ್ಕಾರ ಏನ್ಮಾಡ್ಬೇಕು?]

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅಮೆರಿಕ ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪಿಗ್ಗಿ ಟಾಯ್ ಲೇ, ಹೊಸದಾಗಿ ನೇಮಕ ಮಾಡಿಕೊಂಡವರು ಉತ್ತಮ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಮುಂದಿನ ಪೀಳಿಗೆಯ ಕಂಪ್ಯೂಟರ್ ಸಾಮ್ರಾಜ್ಯ ನಿರ್ಮಾಣ ಇವರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.

ಯುವಕರಿಗೆ ಮತ್ತು ಸಾಧನೆ ಮಾಡಲು ಆಸೆ ಇದ್ದವರಿಗೆ ಅವಕಾಶದ ಬಾಗಿಲು ತೆರೆದಿದೆ. ನಮಗೆ ದೊರೆಯುವ ಪದವಿಧರರ ಗುಂಪು ಕಂಪನಿ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಲಿದೆ ಎಂದು ಅಮೆರಿಕ ಇನ್ಫೋಸಿಸ್ ಉಪಾಧ್ಯಕ್ಷ ಸಂದೀಪ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Announcing a major recruitment drive, Infosys, India's second-largest IT services exporter on Thursday said that it will be hiring over 2,100 people in US, in order to support the growth of its business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more