ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಬಳ ಬಹಿರಂಗ!
ಬೆಂಗಳೂರು, ಜನವರಿ 04: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ತೆ ಇನ್ಫೋಸಿಸ್ ನ ಹೊಸ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಸಲೀಲ್ ಪಾರೇಖ್ ಅವರ ಸಂಬಳ ವಿವರಗಳನ್ನು ಬೋರ್ಡ್ ಸದಸ್ಯೆ ಕಿರಣ್ ಮಜುಂದಾರ್ ಶಾ ಅವರು ಪ್ರಕಟಿಸಿದ್ದಾರೆ.
ವಿಶಾಲ್ ಸಿಕ್ಕಾ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಯುಬಿ ಪ್ರವೀಣ್ ರಾವ್ ಅವರು ಮಧ್ಯಂತರ ಸಿಇಒ ಆಗಿ ನೇಮಕಗೊಂಡಿದ್ದರು. ಈಗ ಹೊಸ ಸಿಇಒ ಆಗಿ ಸಲೀಲ್ ಪಾರೇಖ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಸಂಬಳದ ವಿಷಯವಾಗಿ ಬೋರ್ಡ್ ಸದಸ್ಯರ ಜತೆ ಕಿತ್ತಾಟವಾಡಿಕೊಂಡು ರಾಜೀನಾಮೆ ನೀಡಿದ್ದರಿಂದ ಹೊಸ ಸಿಇಒಗೆ ಎಷ್ಟು ಸಂಬಳ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.

ಇನ್ಫೋಸಿಸ್ ನ ಹೊಸ ಸಿಇಒ ಸಲೀಲ್ ಪಾರೇಖ್ ಸಲೀಲ್ ಪಾರೇಖ್ 2018-19 ನೇ ಸಾಲಿನಲ್ಲಿ ಒಟ್ಟು 16 ಕೋಟಿ ರೂ. ವೇತನ ಪಡೆಯಲಿದ್ದು, ಈ ಪೈಕಿ 6.5 ಕೋಟಿ ನಿಶ್ಚಿತ ವೇತನ ಹಾಗೂ 9.75 ಕೋಟಿ ವೇರಿಯಬಲ್ ವೇತನವಾಗಿದೆ. 3.25 ಕೋಟಿ ನಿರ್ಬಂಧಿತ ಸ್ಟಾಕ್ ಯೂನಿಟ್ ಸಿಗಲಿದೆ. 13 ಕೋಟಿ ವಾರ್ಷಿಕ ಕಾರ್ಯ ಕ್ಷಮತೆ ಈಕ್ವಿಟಿ ಅನುದಾನ ಪಡೆಯಬಹುದಾಗಿದೆ ಎಂದು ಇನ್ಫೋಸಿಸ್ ಬೋರ್ಡ್ ನ ಸ್ವತಂತ್ರ ಸದಸ್ಯೆ ಕಿರಣ್ ಮಂಜುದಾರ್ ಅವರು ಹೇಳಿದ್ದಾರೆ.
ವಿಶಾಲ್ ಸಿಕ್ಕಾ ಅವರು ಕಳೆದ ಆರ್ಥಿಕ ವರ್ಷದಲ್ಲಿ 42 ಕೋಟಿ ರೂ. ವೇತನ ತೆಗೆದುಕೊಂಡಿದ್ದರು.2014ರಲ್ಲಿ ಇನ್ಫೋಸಿಸ್ ಸೇರಿದ್ದ ಸಿಕ್ಕಾ ಅವರಿಗೆ ವಾರ್ಷಿಕ 5.08 ಮಿಲಿಯನ್ ಯುಎಸ್ ಡಾಲರ್ ಸಿಗುತ್ತಿತ್ತು. ಜತೆಗೆ 2 ಮಿಲಿಯನ್ ಡಾಲರ್ ಷೇರುಗಳು ಲಭಿಸಿದ್ದರಿಂದ ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಎನಿಸಿಕೊಂಡಿದ್ದರು.
ಸದ್ಯ ವಿಪ್ರೋ ಸಿಇಒ ಅಬಿದಲಿ ನೀಮುಚ್ವಾಲಾ ಅವರು 2 ಮಿಲಿಯನ್ ಯುಎಸ್ ಡಾಲರ್ ಗಳಿಸುತ್ತಿದ್ದು ಅತಿ ಹೆಚ್ಚು ಸಂಬಳ ಪಡೆಯುವ ಸಿಇಒ ಎನಿಸಿಕೊಂಡಿದ್ದಾರೆ.












Click it and Unblock the Notifications