511 ರುಪಾಯಿ ನೀಡಿ ಸ್ಪೈಸ್ ಜೆಟ್‌ನಲ್ಲಿ ಹಾರಾಡಿ

Written By:
Subscribe to Oneindia Kannada

ನವದೆಹಲಿ, ಮೇ, 18: ಕಡಿಮೆದರದ ವಿಮಾನಯಾನ ಸೇವೆ ಒದಗಿಸುವ ಸ್ಪೈಸ್ ಜೆಟ್ ಇದೀಗ ಮತ್ತೊಂದು ಕೊಡುಗೆಯನ್ನು ನೀಡಿದೆ. 11ನೇ ವಾಷಿ೯ಕೋತ್ಸವದ ಪ್ರಯುಕ್ತ ವಿಶೇಷ ದರಕಡಿತ ಘೋಷಿಸಿದೆ.

ದೇಶೀಯ ಆಯ್ದ ಪಟ್ಟಣಗಳ ನಡುವೆ ಪ್ರಯಾಣಿಸಲು ನೀವು ಕೇವಲ 511 ರು. ನೀಡಿದರೆ ಸಾಕು. ಹಾ ನೆನಪಿರಲಿ ಟಿಕೆಟ್ ಬುಕ್ ಮಾಡಲು ಇನ್ನು ಒಂದೇ ದಿನದ ಕಾಲಾವಕಾಶ ನಿಮ್ಮ ಬಳಿ ಇದೆ. ಹೆಚ್ಚುವರಿ ತೆರಿಗೆ ಮತ್ತು ಶುಲ್ಕ ನೀಡಬೇಕಾಗುತ್ತದೆ. [ಸಸ್ಯಹಾರಿಗಳಿಗೆ ಸೋತ ಏರ್ ಇಂಡಿಯಾ]

ಬುಕಿಂಗ್ ಇಲ್ಲಿ ಲಭ್ಯವಿದೆ

spicejet

ಮೇ 19ರ ವರೆಗೆ ಟಿಕೆಟ್ ಕಾಯ್ದಿರಿಸಬಹುದಾಗಿದ್ದು ಜೂನ್ 15, 2016ರಿ೦ದ ಸೆಪ್ಟೆ೦ಬರ್ 30, 2016ರವರೆಗೆ ಪ್ರಯಾಣ ಮಾಡಲು ಅವಕಾಶ ಸಿಗಲಿದೆ. ಈ ದರದಲ್ಲಿ ಡೆಹ್ರಾಡೂನ್, ಉದಯಪುರ, ಜೈಪುರ, ಗೋವಾ, ಕೊಚ್ಚಿ ಸೇರಿದಂತೆ ಆಯ್ದ ನಗರ ಮತ್ತು ಪ್ರವಾಸಿ ತಾಣಗಳಿಗೆ ಪ್ರವಾಸ ಮಾಡಬಹುದು.[ಹೈದರಾಬಾದ್ ಗೆ ಬಂದಿದ್ದ ವಿಶ್ವದ ಅತಿದೊಡ್ಡ ವಿಮಾನದ ಚಿತ್ರಗಳು]

ಅಂತಾರಾಷ್ಟ್ರೀಯ ನಗರಗಳ ಪ್ರಯಾಣಕ್ಕೂ ಕೆಲ ರಿಯಾಯಿತಿ ಘೋಷಣೆ ಮಾಡಲಾಗಿದೆ. ಇಂಡಿಗೋ ಸಾಥ್ ನೀಡಿದ್ದು ಶ್ರೀನಗರದಿಂದ ಚಂಡಿಘಡ, ಶ್ರೀನಗರದಿಂದ ಜಮ್ಮುಗೆ 806 ರು. ನಲ್ಲಿ ಪ್ರಯಾಣ ಮಾಡಬಹುದು. ದೆಹಲಿ-ಮುಂಬೈ, ದೆಹಲಿ-ಕೋಲ್ಕತಾ ನಡುವಿನ ಪ್ರಯಾಣಕ್ಕೂ ಆಫರ್ ಘೋಷಣೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After SpiceJet offered tickets at Rs 511 India's biggest carrier IndiGo also slashed airfares. IndiGo is offering tickets at an all-inclusive fare of Rs 806 on certain domestic routes. IndiGo's offer is open till May 19 and is applicable on travel between July 4 and September 30.
Please Wait while comments are loading...