ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿನ ಶ್ರೀಮಂತಿಕೆ, ಲೆಕ್ಕ ತಪ್ಪಿಸಿ- ಬೆಚ್ಚಿಬೀಳಿಸುವ ಲೆಕ್ಕಾಚಾರ ಇಲ್ಲಿದೆ!

|
Google Oneindia Kannada News

Recommended Video

ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶ | Oneindia Kannada

ದೇಶದ ಶ್ರೀಮಂತರು ಹಾಗೂ ಶ್ರೀಮಂತಿಕೆ ಬಗ್ಗೆ ಆಕ್ಸ್ ಫ್ಯಾಮ್ ಎಂಬ ಅಂತರರಾಷ್ಟ್ರೀಯ ಸಂಸ್ಥೆಯೊಂದು ಸಮೀಕ್ಷೆ ಬಿಡುಗಡೆ ಮಾಡಿದ್ದು, ಸಂಪತ್ತಿನ ಅಸಮಾನ ಹಂಚಿಕೆ ಬಗ್ಗೆ ಆತಂಕ ತರುವಂಥ ಅಂಕಿ-ಅಂಶಗಳನ್ನು ಬಯಲು ಮಾಡಿದೆ. ಕಳೆದ ವರ್ಷ ಶೇ 1ರಷ್ಟಿನ ಭಾರತದ ಅತಿ ಶ್ರೀಮಂತರು ದೇಶದಲ್ಲಿ ಉತ್ಪಾದನೆಯಾದ ಶೇ 73ರಷ್ಟು ಸಂಪತ್ತನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದರ ಹೊರತುಪಡಿಸಿ, ಅರವತ್ತೇಳು ಕೋಟಿ ಭಾರತೀಯರ ಆಸ್ತಿ ಹೆಚ್ಚಳ ಪ್ರಮಾಣ ಶೇ ಒಂದರಷ್ಟು ಮಾತ್ರ ಆಗಿದೆ. ದಾವೋಸ್ ನಲ್ಲಿ ನಡೆಯುವ ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಮುನ್ನ ಈ ಅಂಶವನ್ನು ಬಯಲು ಮಾಡಲಾಗಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಪರಿಸ್ಥಿತಿ ಹೇಗಿದೆಯೋ ಅಂತ ಗಮನಿಸಿದರೆ, ಅದು ಮತ್ತೂ ಚಿಂತಾಜನಕವಾಗಿದೆ.

ಭಾರತದಲ್ಲಿ 101 ಶತಕೋಟಿ ಸಿರಿವಂತರು; ಅಗ್ರಸ್ಥಾನದಲ್ಲಿ ಅಂಬಾನಿಭಾರತದಲ್ಲಿ 101 ಶತಕೋಟಿ ಸಿರಿವಂತರು; ಅಗ್ರಸ್ಥಾನದಲ್ಲಿ ಅಂಬಾನಿ

ಕಳೆದ ವರ್ಷ ಒಟ್ಟು ಉತ್ಪಾದನೆಯಾದ ಸಂಪತ್ತಿನಲ್ಲಿ ಶೇಕಡಾ ಎಂಬತ್ತರೆಡರಷ್ಟು ಪ್ರಮಾಣ ಶೇ ಒಂದರಷ್ಟು ಶ್ರೀಮಂತರ ಪಾಲಾಗಿದೆ. ಜಗತ್ತಿನಾದ್ಯಂತ ಮೂನ್ನೂರಾ ಎಪ್ಪತ್ತು ಕೋಟಿ ಜನರ ಸಂಪತ್ತಿನ ಪ್ರಮಾಣದಲ್ಲಿ ಯಾವ ಏರಿಕೆಯೂ ಆಗಿಲ್ಲ ಎಂಬ ಮಾಹಿತಿ ಕೂಡ ಇದರಿಂದಲೇ ತಿಳಿದುಬರುತ್ತದೆ.

ಶೇ 1ರಷ್ಟಿರುವ ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ 58ರಷ್ಟು

ಶೇ 1ರಷ್ಟಿರುವ ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ 58ರಷ್ಟು

ಆಕ್ಸ್ ಫ್ಯಾಮ್ ನ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಈ ಸಮೀಕ್ಷೆ ಬಗ್ಗೆ ಚರ್ಚೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೆಚ್ಚುತ್ತಿರುವ ಆದಾಯ, ಲಿಂಗಾನುಪಾತದಲ್ಲಿನ ಅಸಮಾನತೆಯು ವಿಶ್ವ ನಾಯಕರ ಚರ್ಚೆಯ ಪ್ರಮುಖ ಅಂಶಗಳಾಗಿರುತ್ತವೆ. ಕಳೆದ ವರ್ಷದ ಸಮೀಕ್ಷೆ ಪ್ರಕಾರ ಭಾರತದ ಶೇ 1ರಷ್ಟು ಶ್ರೀಮಂತರ ಬಳಿ ದೇಶದ ಒಟ್ಟು ಸಂಪತ್ತಿನ ಶೇ 58ರಷ್ಟಿತ್ತು.

ಕೇಂದ್ರ ಸರಕಾರದ ಬಜೆಟ್ ಹಾಗೂ ಒಂದು ವರ್ಷದ ಗಳಿಕೆ ಸಮ

ಕೇಂದ್ರ ಸರಕಾರದ ಬಜೆಟ್ ಹಾಗೂ ಒಂದು ವರ್ಷದ ಗಳಿಕೆ ಸಮ

ಜಾಗತಿಕ ಪ್ರಮಾಣಕ್ಕೆ ಹೋಲಿಸಿದರೆ (ಶೇ 50) ಇದು ಸ್ವಲ್ಪ ಹೆಚ್ಚಿನ ಪ್ರಮಾಣ ಅನ್ನೋದು ಹೌದು. ಈ ವರ್ಷದ ಸಮೀಕ್ಷೆ ಪ್ರಕಾರ ಶೇ 1ರಷ್ಟು ಶ್ರೀಮಂತರ ಬಳಿಯ ಸಂಪತ್ತಿನ ಪ್ರಮಾಣ 2017ರಲ್ಲಿ 20.9 ಲಕ್ಷ ಕೋಟಿಗೂ ಹೆಚ್ಚಾಗಿದೆ. ಅಂದರೆ ಈ ಮೊತ್ತವು ಕೇಂದ್ರ ಸರಕಾರದ 2017-18ರ ಬಜೆಟ್ ಗೆ ಸಮ ಎಂದು ಆಕ್ಸ್ ಫ್ಯಾಮ್ ಹೇಳಿದೆ.

ಕೋಟ್ಯಂತರ ಜನರು ಬಡತನದಲ್ಲೇ ಹೆಣಗಾಡುತ್ತಿದ್ದಾರೆ

ಕೋಟ್ಯಂತರ ಜನರು ಬಡತನದಲ್ಲೇ ಹೆಣಗಾಡುತ್ತಿದ್ದಾರೆ

ತನ್ನ ವರದಿಗೆ "ಕೆಲಸಕ್ಕೆ ಪ್ರತಿಫಲ, ಸಂಪತ್ತಿಗಲ್ಲ" ಎಂಬ ಶೀರ್ಷಿಕೆ ನೀಡಲಾಗಿದೆ. ಜಾಗತಿಕ ಮಟ್ಟದಲ್ಲಿ ಶ್ರೀಮಂತರ ತಿಜೋರಿಗೇ ಅಪಾರ ಪ್ರಮಾಣದ ಸಂಪತ್ತು ಹೇಗೆ ಸೇರಿದೆ, ಕೋಟ್ಯಂತರ ಜನರು ಹೇಗೆ ಇನ್ನೂ ಬಡತನದಲ್ಲೇ ಹೆಣಗಾಡುತ್ತಿದ್ದಾರೆ ಎಂಬುದನ್ನು ಈ ಸಂಖ್ಯೆ ತಿಳಿಸುತ್ತದೆ ಎಂದು ಆಕ್ಸ್ ಫ್ಯಾಮ್ ಹೇಳಿದೆ.

ಕಾರ್ಮಿಕರ ವೇತನಕ್ಕಿಂತ ಸಂಪತ್ತು ವೃದ್ಧಿಯೇ ಹೆಚ್ಚು

ಕಾರ್ಮಿಕರ ವೇತನಕ್ಕಿಂತ ಸಂಪತ್ತು ವೃದ್ಧಿಯೇ ಹೆಚ್ಚು

2017ರಲ್ಲಿ ಬಿಲಿಯನೇರ್ ಗಳ ಸಂಪತ್ತಿನಲ್ಲಿ ಭಾರೀ ಏರಿಕೆ ಆಗಿದೆ. ಕಳೆದ ಏಳು ವರ್ಷಕ್ಕೆ ಹೋಲಿಸಿದರೆ ಸರಾಸರಿ ಶೇಕಡಾ ಹದಿಮೂರರಷ್ಟು ಹೆಚ್ಚಾಗಿದೆ. ಸಾಮಾನ್ಯ ನೌಕರರ ಸಂಬಳದ ಪ್ರಮಾಣಕ್ಕೆ ಹೋಲಿಸಿದರೆ ಆರು ಪಟ್ಟು ವೇಗದಲ್ಲಿ ಶ್ರೀಮಂತರ ಸಂಪತ್ತು ವೃದ್ಧಿಯಾಗಿದೆ. ಹಾಗೆ ನೋಡಿದರೆ ನೌಕರರ ವೇತನ ಹೆಚ್ಚಳ ಪ್ರಮಾಣ ವರ್ಷಕ್ಕೆ ಶೇ ಎರಡರಷ್ಟು ಮಾತ್ರ.

ಕನಿಷ್ಠ ಕೂಲಿ ಪಡೆಯುವ ನೌಕರನಿಗೆ 941 ವರ್ಷ ಬೇಕು

ಕನಿಷ್ಠ ಕೂಲಿ ಪಡೆಯುವ ನೌಕರನಿಗೆ 941 ವರ್ಷ ಬೇಕು

ಇನ್ನೊಂದು ಲೆಕ್ಕಾಚಾರವನ್ನು ಸಹ ಸಮೀಕ್ಷೆಯಲ್ಲಿ ಬಯಲು ಮಾಡಲಾಗಿದೆ. ಭಾರತದ ಟಾಪ್ ಗಾರ್ಮೆಂಟ್ ಕಂಪೆನಿಯ ಉನ್ನತ ಮಟ್ಟದ ಅಧಿಕಾರಿ ಒಂದು ವರ್ಷಕ್ಕೆ ಪಡೆಯುವ ವೇತನವನ್ನು ಸಂಪಾದಿಸಲು ಗ್ರಾಮೀಣ ಭಾಗದಲ್ಲಿ ಕನಿಷ್ಠ ಕೂಲಿ ಪಡೆಯುವ ನೌಕರನಿಗೆ 941 ವರ್ಷ ಬೇಕಾಗುತ್ತದಂತೆ.

ಅಮೆರಿಕದಲ್ಲಿ ಒಂದು ದಿನಕ್ಕಿಂತ ಸ್ವಲ್ಪ ಹೆಚ್ಚು

ಅಮೆರಿಕದಲ್ಲಿ ಒಂದು ದಿನಕ್ಕಿಂತ ಸ್ವಲ್ಪ ಹೆಚ್ಚು

ಅಮೆರಿಕದಲ್ಲಿ ಒಬ್ಬ ಸಾಮಾನ್ಯ ನೌಕರ ಒಂದು ವರ್ಷ ದುಡಿಯುವಷ್ಟು ಹಣವನ್ನು ಅಲ್ಲಿನ ಒಬ್ಬ ಸಿಇಒ ಒಂದು ದಿನಕ್ಕಿಂತ ಸ್ವಲ್ಪ ಹೆಚ್ಚು ಸಮಯದಲ್ಲಿ ದುಡಿಯುತ್ತಾರಂತೆ. ಹತ್ತು ದೇಶಗಳ ಎಪ್ಪತ್ತು ಸಾವಿರ ಮಂದಿಯನ್ನು ಈ ಸಮೀಕ್ಷೆಯಲ್ಲಿ ಮಾತನಾಡಿಸಲಾಗಿದೆ. ಆ ಪೈಕಿ ಮೂರನೇ ಎರಡು ಭಾಗದಷ್ಟು ಮಂದಿ, ಶ್ರೀಮಂತರು ಹಾಗೂ ಬಡವರ ಮಧ್ಯೆ ಅಂತರ ದಿನದಿನಕ್ಕೂ ಹೆಚ್ಚಾಗುತ್ತಿದೆ. ಅದನ್ನು ಸರಿಪಡಿಸಬೇಕು ಎಂದಿದ್ದಾರೆ.

ಅತಿ ಶ್ರೀಮಂತರಿಗೆ ಹೆಚ್ಚು ತೆರಿಗೆ ಹಾಕಬೇಕು

ಅತಿ ಶ್ರೀಮಂತರಿಗೆ ಹೆಚ್ಚು ತೆರಿಗೆ ಹಾಕಬೇಕು

ನರೇಂದ್ರ ಮೋದಿ ಅವರ ಸರಕಾರದ ಆರ್ಥಿಕತೆಯು ಎಲ್ಲರಿಗೂ ಒಳಿತನ್ನು ಮಾಡಬೇಕು, ಬರೀ ಶ್ರೀಮಂತರಿಗೆ ಮಾತ್ರವಲ್ಲ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ತೆರಿಗೆ ಕದಿಯುವವರು, ತಪ್ಪಿಸುವವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಅತಿ ಶ್ರೀಮಂತರಿಗೆ ಹೆಚ್ಚಿಗೆ ತೆರಿಗೆ ಹಾಕಬೇಕು. ಕಾರ್ಪೊರೇಟ್ ತೆರಿಗೆಗಳಿಗೆ ವಿನಾಯಿತಿ ತೆಗೆಯಬೇಕು ಎಂದು ಹೇಳಲಾಗಿದೆ.

ಹೊಸ ಬಿಲಿಯನೇರ್ ಗಳ ಸೇರ್ಪಡೆ

ಹೊಸ ಬಿಲಿಯನೇರ್ ಗಳ ಸೇರ್ಪಡೆ

ಭಾರತದಲ್ಲಿ ಕಳೆದ ವರ್ಷ ಹದಿನೇಳು ಹೊಸ ಬಿಲಿಯನೇರ್ ಗಳ ಸೇರ್ಪಡೆಯಾಗಿದೆ. ಒಟ್ಟು ಸಂಖ್ಯೆ 101ಕ್ಕೆ ಏರಿದೆ. ಒಟ್ಟಾರೆಯಾಗಿ ಅವರ ಸಂಪತ್ತಿನ ಮೌಲ್ಯ 20.7 ಲಕ್ಷ ಕೋಟಿ ಆಗಿದೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ 4.89 ಲಕ್ಷ ಕೋಟಿ ರುಪಾಯಿ ಹೆಚ್ಚಳವಾಗಿದೆ. ದೇಶದ ಎಲ್ಲ ರಾಜ್ಯಗಳ ಬಜೆಟ್ ನಲ್ಲಿ ಆರೋಗ್ಯ- ಶಿಕ್ಷಣಕ್ಕೆ ಮೀಸಲಿಡುವ ಒಟ್ಟು ಹಣದ ಪ್ರಮಾಣದ ಶೇ 85ರಷ್ಟು ಪೂರೈಸಲು ಈ ಹಣ (4.89 ಲಕ್ಷ ಕೋಟಿ ರುಪಾಯಿ) ಸಾಕು.

ಹತ್ತು ಪರ್ಸೆಂಟ್ ಜನರ ಬಳಿ ಶೇ 73ರಷ್ಟು ಸಂಪತ್ತು

ಹತ್ತು ಪರ್ಸೆಂಟ್ ಜನರ ಬಳಿ ಶೇ 73ರಷ್ಟು ಸಂಪತ್ತು

ಭಾರತದ ಜನಸಂಖ್ಯೆಯ ಟಾಪ್ ಹತ್ತು ಪರ್ಸೆಂಟ್ ಶೇ 73ರಷ್ಟು ಸಂಪತ್ತು ಹೊಂದಿದ್ದರೆ, ಶೇ 37ರಷ್ಟು ಭಾರತೀಯರಿಗೆ ಶ್ರೀಮಂತಿಕೆ ತಮ್ಮ ಕುಟುಂಬದಿಂದ ಬಂದಿದೆ. ದೇಶದ ಬಿಲಿಯನೇರ್ ಗಳ ಒಟ್ಟು ಸಂಪತ್ತಿನಲ್ಲಿ ಶೇ 51ರಷ್ಟು ಸಂಪತ್ತು ಇವರ ಬಳಿಯೇ ಇದೆ ಎಂಬುದನ್ನು ಸಮೀಕ್ಷೆ ತಿಳಿಸಿದೆ.

17.5 ದಿನದ ವೇತನ ಐವತ್ತು ವರ್ಷದ ದುಡಿಮೆಗೆ ಸಮ

17.5 ದಿನದ ವೇತನ ಐವತ್ತು ವರ್ಷದ ದುಡಿಮೆಗೆ ಸಮ

ಇನ್ನು ಬಿಲಿಯನೇರ್ ಗಳ ಪೈಕಿ ಹತ್ತರಲ್ಲಿ ಒಂಬತ್ತು ಮಂದಿ ಪುರುಷರಿದ್ದಾರೆ. ಭಾರತದಲ್ಲಿ ನಾಲ್ವರೇ ಮಹಿಳಾ ಬಿಲಿಯನೇರ್ ಗಳಿದ್ದು, ಆ ಪೈಕಿ ಮೂವರು ಕುಟುಂಬದಿಂದ ಬಂದ ಸಂಪತ್ತಿನ ಮೂಲಕ ಶ್ರೀಮಂತರಾಗಿರುವವರು. ಗ್ರಾಮೀಣ ಭಾರತದಲ್ಲಿ ಕನಿಷ್ಠ ಕೂಲಿ ಪಡೆಯುವ ಕಾರ್ಮಿಕ ತನ್ನ ಜೀವಿತಾವಧಿಯಲ್ಲಿ (ಐವತ್ತು ವರ್ಷ ಅಂದುಕೊಳ್ಳಿ) ದುಡಿಯುವ ಮೊತ್ತವನ್ನು ಟಾಪ್ ಗಾರ್ಮೆಂಟ್ ಕಂಪೆನಿಯ ಅತ್ಯುನ್ನತ ಸ್ತರದ ಅಧಿಕಾರಿ ಕೇವಲ 17.5 ದಿನದಲ್ಲಿ ಸಂಪಾದಿಸುತ್ತಾರೆ ಎಂದು ಸಮೀಕ್ಷೆ ಬಯಲು ಮಾಡಿದೆ.

English summary
The richest 1 per cent in India cornered 73 per cent of the wealth generated in the country last year, a new survey showed today, presenting a worrying picture of rising income inequality. This number revealed in Oxfam survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X