ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇ.7.3ಕ್ಕೆ ಕುಸಿದ ಭಾರತದ ಆರ್ಥಿಕತೆ, 4 ದಶಕಗಳಲ್ಲಿ ಅತಿ ಕಳಪೆ

|
Google Oneindia Kannada News

ನವದೆಹಲಿ, ಮೇ 31: ಭಾರತದ ಆರ್ಥಿಕತೆಯು 2020-21 7.3ಕ್ಕೆ ಕುಸಿದಿದೆ, ಇದು ಕಳೆದ ನಾಲ್ಕು ದಶಕಗಳಲ್ಲೇ ಅತಿ ಕಳಪೆ ಆರ್ಥಿಕತೆ ಎಂದು ವಿಶ್ಲೇಷಿಸಲಾಗಿದೆ. 2020-21ರ ಕೊನೆಯ ತ್ರೈಮಾಸಿಕದಲ್ಲಿ 1.6ರ ಬೆಳವಣಿಗೆ ಕಂಡಿದ್ದರೂ ಒಟ್ಟಾರೆ ಜಿಡಿಪಿ ಋಣಾತ್ಮಕವಾಗಿ ಶೇ.7.3ರಷ್ಟಾಗಿದೆ.

ಭಾರತದ ಕಳೆದ ಒಂದು ವರ್ಷದಿಂದಿರುವ ಕೊರೊನಾ ಪರಿಸ್ಥಿತಿ ಹಾಗೂ ಲಾಕ್‌ಡೌನ್ ಕಾರಣದಿಂದ ಆರ್ಥಿಕತೆ ಈ ಮಟ್ಟಕ್ಕೆ ಕುಸಿದಿರುವುದಾಗಿ ಹೇಳಲಾಗಿದೆ. ಭಾರತದಲ್ಲಿ ಒಟ್ಟಾರೆ ಜಿಡಿಪಿ 38.96 ಲಕ್ಷ ಕೋಟಿ ರೂಪಾಯಿ ಇದ್ದು, ಕಳೆದ 2019-20 ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.1.6ರಷ್ಟು ವೃದ್ಧಿಯಾಗಿರುವುದು ತಿಳಿದುಬಂದಿದೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಿದ್ದರಿಂದ 2021ರ ಮೊದಲಾರ್ಧದಲ್ಲಿ ಭಾರತದ ಆರ್ಥಿಕತೆ ಸಂಕುಚಿತಗೊಂಡಿತ್ತು. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 0.4ರಷ್ಟು ಬೆಳವಣಿಗೆಯೊಂದಿಗೆ ಸಕಾರಾತ್ಮಕ ಸ್ಥಿತಿಗೆ ಮರಳುವ ಮೊದಲು ಏಪ್ರಿಲ್-ಜೂನ್‌ನಲ್ಲಿ ಆರ್ಥಿಕತೆಯು ಶೇ.24.38ಕ್ಕೆ ಕುಸಿದಿತ್ತು.

Indias Economy Contracts 7.3% In FY21

ಬ್ಯಾಂಕ್‌ಗಳು ಕೋವಿಡ್-19 ಸಾಂಕ್ರಾಮಿಕದ ಬಳಿಕ ಸಾಕಷ್ಟು ತೊಂದರೆ ಅನುಭವಿಸಿವೆ. ಅದರಲ್ಲೂ ದೇಶದ ಜಿಡಿಪಿ ದರವು ಕೊರೊನಾವೈರಸ್‌ ಆಕ್ರಮಣಕ್ಕೂ ಮುನ್ನ ಹಣಕಾಸು ವರ್ಷ 2016-17 ರಲ್ಲಿ ಶೇಕಡಾ 8 ರಿಂದ ಹಣಕಾಸು ವರ್ಷ 2020-21 ರಲ್ಲಿ ಸುಮಾರು ಶೇಕಡಾ 4ಕ್ಕೆ ಇಳಿದಿದೆ.

ಅದರಲ್ಲೂ ಜನವರಿ 2020 ರಲ್ಲಿ, ಜಿಡಿಪಿ ಬೆಳವಣಿಗೆಯು 42 ವರ್ಷಗಳ ಕನಿಷ್ಠಕ್ಕೆ ಕುಸಿಯಿತು. ಈ ವೇಳೆ ''ಭಾರತದ ಆರ್ಥಿಕತೆಗೆ ಪುಟಿಯುವ ಸಾಮರ್ಥ್ಯವಿದೆ'' ಎಂದು ಪ್ರಧಾನಿ ಮೋದಿ ಹೇಳಿದ್ದರು.

English summary
Recording its worst ever performance in over four decades, India clocked a negative growth of 7.3 per cent for 2020-21 while the fourth quarter of the fiscal showed a meagre rise of 1.6 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X