ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಷೇರುಪೇಟೆ ಸ್ತಂಭನ; ರೂಪಾಯಿ ಮೌಲ್ಯ ಪ್ರಪಾತಕ್ಕೆ

|
Google Oneindia Kannada News

ನವದೆಹಲಿ, ಮೇ 9: ಜಾಗತಿಕವಾಗಿ ವಿವಿಧ ಷೇರುಪೇಟೆಗಳು ಅಲುಗಾಡುತ್ತಿರುವಂತೆಯೇ ಭಾರತದಲ್ಲೂ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಂದು ಸೋಮವಾರ ಭಾರೀ ಹಿನ್ನಡೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 16,200 ಗಡಿಗಿಂತ ಕೆಳಗಿಳಿದಿದೆ. ಸುಮಾರು 800 ಕಂಪನಿಗಳ ಷೇರುಗಳ ಮೌಲ್ಯ ಏರುಗತಿಗೆ ಹೋದರೆ ಅದಕ್ಕಿಂತ ಸುಮಾರು ಎರಡು ಪಟ್ಟು ಕಂಪನಿಗಳ ಷೇರುಗಳ ಮೌಲ್ಯ ಇಳಿಕೆ ಕಂಡಿದೆ.

ರಷ್ಯಾ ಉಕ್ರೇನ್ ಯುದ್ಧ ಪರಿಣಾಮದ ಜೊತೆಗೆ, ಅಮೆರಿಕದ ಆರ್ಥಿಕ ಹಿಂಜರಿತ ಸಮಸ್ಯೆಯು ಜಾಗತಿಕ ಷೇರುಪೇಟೆ ಅಲುಗಾಟಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ತಜ್ಞರ ಅನಿಸಿಕೆ. ಅಮೆರಿಕದ ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತಿರುವ ಹಣದುಬ್ಬರ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ಇರುವ ಹಿನ್ನಲೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಕುಂದಿಸಿದೆ. ಹೀಗಾಗಿ, ಡೋ ಜೋನ್ಸ್, ನಾಸ್ಡಾಕ್, ರಸೆಲ್ 2000 ಇತ್ಯಾದಿ ಷೇರುಪೇಟೆಗಳಲ್ಲಿ ಹಲವಾರು ಅಂಕಗಳ ಕುಸಿತವಾಗಿದೆ.

ವಿಶ್ವದ ಅತಿಶ್ರೀಮಂತನಿಗೆ ಅತ್ಯುತ್ತಮ ಹೂಡಿಕೆ ಸಲಹೆ ಕೊಟ್ಟ ಭಾರತೀಯ ಉದ್ಯಮಿ ವಿಶ್ವದ ಅತಿಶ್ರೀಮಂತನಿಗೆ ಅತ್ಯುತ್ತಮ ಹೂಡಿಕೆ ಸಲಹೆ ಕೊಟ್ಟ ಭಾರತೀಯ ಉದ್ಯಮಿ

ಅಮೆರಿಕದ ಷೇರುಪೇಟೆ ಕುಸಿಯುತ್ತಿದ್ದರ ಪರಿಣಾಮ ಇತರೆಡೆಯೂ ಆಗಿದೆ. ಏಷ್ಯಾದ ಜಪಾನ್‌ನ ಷೇರುಪೇಟೆ ಸೂಚ್ಯಂಕಗಳು ಕಳೆಗಿಳಿದಿವೆ. ಭಾರತದ ಷೇರುಮಾರುಕಟ್ಟೆ ಇನ್ನೂ ಹೆಚ್ಚು ಕುಸಿತ ಕಂಡಿದೆ. ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಮಾರುತಿ, ಬಜಾಜ್, ರಿಲಾಯನ್ಸ್, ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಗಳ ಷೇರುಗಳ ಮೌಲ್ಯ ಇಳಿಕೆಯಾಗಿದೆ. ನಿಫ್ಟಿಯಲ್ಲಿ ಹಿಂಡಾಲ್ಕೊ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಟಾಟಾ ಮೋಟರ್ಸ್ ಕಂಪನಿಯ ಷೇರುಗಳು ಮಾತ್ರ ಏಳಿಗೆ ಕಂಡಿವೆ.

Indian Stock Markets Tumble and Rupee in Record Low against Dollar

ರೂಪಾಯಿ ದಾಖಲೆ ಕುಸಿತ: ಭಾರತದ ಷೇರುಪೇಟೆ ಕುಸಿತದ ಜೊತೆಗೆ ಮತ್ತೊಂದು ಶಾಕ್ ಬಿದ್ದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಪ್ರತೀ ಡಾಲರ್‌ಗೆ ರೂಪಾಯಿ ಮೌಲ್ಯ 77.40ಕ್ಕೆ ಇಳಿದಿದೆ. ಕಳೆದ ಶುಕ್ರವಾರದಂದು ಒಂದು ಡಾಲರ್‌ಗೆ 77.05 ರೂಪಾಯಿಯಂತೆ ವಹಿವಾಟು ಆಗಿತ್ತು.

L&T ಇನ್ಫೋಟೆಕ್ + ಮೈಂಡ್‌ಟ್ರೀ= LTIMindtreeL&T ಇನ್ಫೋಟೆಕ್ + ಮೈಂಡ್‌ಟ್ರೀ= LTIMindtree

Indian Stock Markets Tumble and Rupee in Record Low against Dollar

ಸೋಮವಾರ ರೂಪಾಯಿಗೆ ಇನ್ನೂ ಹೆಚ್ಚು ಹಿನ್ನಡೆಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಡಾಲರ್ ಎದುರು ಇಷ್ಟು ಮಟ್ಟಕ್ಕೆ ಕುಸಿತ ಕಂಡಿರುವುದು. ಕಳೆದ ವಾರ ಆರ್‌ಬಿಐ ಬಡ್ಡಿ ದರಗಳನ್ನ ಏರಿಕೆ ಮಾಡಿದ್ದು, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಘೋರ ಮಟ್ಟಕ್ಕೆ ಹೋಗುತ್ತಿರುವುದು ಇವೆಲ್ಲವೂ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿವೆ ಎಂಬ ಅಭಿಪ್ರಾಯಗಳಿವೆ.

(ಒನ್ಇಂಡಿಯಾ ಸುದ್ದಿ)

English summary
The markets started Monday’s trade with deep cuts as weak global sentiment continued to weigh on equities. The Sensex was down 612.05 points or 1.12 per cent at 54223.53, and the Nifty was down 174.50 points or 1.06 per cent at 16236.80.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X