ಒಳ್ಳೆ ಕೆಲಸಗಾರ ಸಿಗ್ತಿಲ್ಲ, ಸಾಫ್ಟ್ ಸ್ಕಿಲ್ ಇರಲ್ಲ, ಸಂಬಳ ಒಪ್ಪಲ್ಲ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಅಕ್ಟೋಬರ್ 18: ಅಯ್ಯೋ ನನಗೆ ಒಳ್ಳೆ ಕೆಲ್ಸ ಸಿಗ್ತಿಲ್ವಲ್ಲ ಅನ್ನೋದು ಹೆಚ್ಚು ಕೇಳಿಬರುವ ಆರ್ತನಾದ. ಆದರೆ ಸರಿಯಾದ ಕೆಲಸಗಾರರು ಸಿಗ್ತಿಲ್ಲ ಅಂತಿದ್ದಾರಂತೆ ಮಾಲೀಕರು. ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿ ಅಕೌಂಟಿಂಗ್, ಹಣಕಾಸು ವಿಭಾಗ ಹಾಗೂ ಐಟಿ ವಲಯದಲ್ಲಿ ಒಳ್ಳೆ ಕೆಲಸಗಾರರು ಸಿಗೋದು ಕಷ್ಟವಾಗಿದೆ ಎಂದಿದ್ದಾರೆ ಶೇ 48ರಷ್ಟು ಮಾಲೀಕರು.

ಜಾಗತಿಕ ಮಟ್ಟದಲ್ಲಿ ಈ ಬಗ್ಗೆ ಸರ್ವೇ ನಡೆದಿದ್ದು, ನಲವತ್ತೆರಡು ಸಾವಿರಕ್ಕೂ ಹೆಚ್ಚು ಮಾಲೀಕರು ಇದರಲ್ಲಿ ಪಾಲ್ಗೊಂಡಿದ್ದರು. ಶೇ 40ರಷ್ಟು ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. 2007ರ ಈಚೆಗೆ ಒಳ್ಳೆ ಕೆಲಸಗಾರರ ಕೊರತೆ ಈ ಪ್ರಮಾಣ ಮುಟ್ಟಿರುವುದು ಈಗಲೇ. ಭಾರತದಲ್ಲಿ ಈ ಪ್ರಮಾಣ ಶೇ 48ರಷ್ಟಿದೆ.[ಚಿತ್ರಗಳಲ್ಲಿ: ಭಾರತದ ಬೃಹತ್ ಗ್ರಾಹಕ ಟೆಕ್ ಎಕ್ಸ್ ಪೋ]

Jobs

ಒಳ್ಳೆ ಕೆಲಸಗಾರರು ಸಿಗ್ತಿಲ್ಲ ಅಂದರೆ ಏನು, ಏಕೆ ಅಂತ ಕೇಳಿದರೆ, ಶೇ 36ರಷ್ಟು ಮಾಲೀಕರು ನಮ್ಮ ಹತ್ತಿರ ಬರುವ ವ್ಯಕ್ತಿಗಳಿಗೆ ಸಾಫ್ಟ್ ಸ್ಕಿಲ್ ಇರಲ್ಲ ಅಂದಿದ್ದರೆ, ಹೇಳಿದ್ದಕಿಂತ ತುಂಬಾ ಜಾಸ್ತಿ ಸಂಬಳ ಕೇಳ್ತಾರೆ ಎಂದು ಶೇ 34ರಷ್ಟು ಮಾಲೀಕರು ಹೇಳಿದ್ದಾರೆ.

ಈ ವರ್ಷ ಭಾರತದಲ್ಲಿ ಐಟಿ ನೌಕರರು, ಅಕೌಂಟಿಂಗ್ ಹಾಗೂ ಹಣಕಾಸು ವಿಭಾಗದ ನೌಕರರು, ಪ್ರಾಜೆಕ್ಟ್ ಹಾಗೂ ಮಾರಾಟ ವಿಭಾಗದ ನಿರ್ವಾಹಕರು, ಗ್ರಾಹಕ ಸೇವಾ ಪ್ರತಿನಿಧಿಗಳು, ಕಸ್ಟಮರ್ ಸಪೋರ್ಟ್ ಟೆಕ್ನಿಷಿಯನ್ ಗಳು ಹಾಗೂ ಗುಣಮಟ್ಟ ನಿಯಂತ್ರಕರಿಗೆ ಭಾರೀ ಬೇಡಿಕೆ ಇದೆಯಂತೆ.[ಕೆಲಸ ಮಾಡದ ಇನ್ಫೋಸಿಸ್ ಸಿಬ್ಬಂದಿ ನೌಕರಿಗೆ ಕುತ್ತು?]

ಐಟಿ ಹಾಗೂ ಅಕೌಂಟಿಂಗ್ ವಿಭಾಗದಲ್ಲಿನ ಬೇಡಿಕೆ ನಿರಂತರವಾಗಿ ಏರುತ್ತಲೇ ಇದೆ. ತಾಂತ್ರಿಕವಾಗಿ ಮೇಲ್ದರ್ಜೆಗೆ ಏರುತ್ತಿರುವುದು, ಆರ್ಥಿಕ ಅನುಕೂಲತೆ ಹೆಚ್ಚುತ್ತಿರುವುದು ಈ ವಲಯಗಳಲ್ಲಿ ಮುಂದಿನ ತಿಂಗಳಲ್ಲಿ ಮತ್ತೂ ಬೇಡಿಕೆ ಸೃಷ್ಟಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇನ್ನು ವಲಯವಾರು ಹೇಳಬೇಕು ಅಂದರೆ ಶೇ 46ರಷ್ಟು ಏಷ್ಯಾ ಖಂಡದ ಮಾಲೀಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಜಪಾನ್ (ಶೇ 86), ತೈವಾನ್ (ಶೇ 73), ಹಾಂಕಾಂಗ್ (ಶೇ 69)ನಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಇದ್ದುದರಲ್ಲಿ ಚೀನಾ ದೇಶದ ಮಾಲೀಕರಿಗೆ ಅಷ್ಟಾಗಿ ತೊಂದರೆ ಇದ್ದಂತಿಲ್ಲ. ಯಾಕೆಂದರೆ ಶೇ 10ರಷ್ಟು ಮಂದಿ ಮಾತ್ರ ಸಮಸ್ಯೆ ಇದೆ ಅಂದಿದ್ದಾರೆ.[ಸಿಸ್ಕೋ ಸಂಸ್ಥೆಯಿಂದ 14,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್?]

ಶೇ 36ರಷ್ಟು ಭಾರತೀಯ ಮಾಲೀಕರು ತಮ್ಮದೇ ಸಂಸ್ಥೆ, ಕಂಪನಿಯ ಒಳಗೆ ಪರಿಹಾರ ಕಂಡುಕೊಳ್ತಾರಂತೆ. ಶೇ 36ರಷ್ಟು ಮಾಲೀಕರು ತಮ್ಮದೇ ನೌಕರರನ್ನು ಆರಿಸಿಕೊಂಡು, ತರಬೇತಿ ನೀಡುವ ಮೂಲಕ ತಮಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾರೆ ಎನ್ನುತ್ತಿದೆ ಈ ಅಧ್ಯಯನದ ಫಲಿತಾಂಶ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Around 48% Indian employers find it tough filling job positions due to lack of available talent, and the toughest are those in accounting, finance and IT, says a survey.
Please Wait while comments are loading...