ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್-6 ಎಫೆಕ್ಟ್; ಭಾರತದಲ್ಲಿ ಬೆಲೆ ಏರಿಕೆ ಕಾಣಲಿದೆ ಕಾರು

|
Google Oneindia Kannada News

ಬೆಂಗಳೂರು, ಅ. 10: ಭಾರತದಲ್ಲಿ ಕಾರುಗಳ ಬೆಲೆ ಏರಿಕೆ ಆಗುವುದು ನಿಶ್ಚಿತವಾಗಿದೆ. ಮುಂದಿನ ಏಪ್ರಿಲ್‌ನಿಂದ ಸರಕಾರ ವಾಹನಗಳ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ನಿಯಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ವಾಹನಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ, ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

ವಾಹನಗಳಿಂದ ಹೊರಸೂಸುವ ಮಾಲಿನ್ಯ ನಿಯಂತ್ರಣಕ್ಕೆ ಸರಕಾರ ಭಾರತ್ ಸ್ಟೇಜ್ ಮಾನದಂಡಗಳನ್ನು ರೂಪಿಸಿದೆ. ಈಗ ಭಾರತ್ ಸ್ಟೇಜ್ 6 ಚಾಲನೆಯಲ್ಲಿದೆ. ಈ ಮಾನದಂಡಕ್ಕೆ ಪೂರಕವಾಗಿ ವಾಹನಗಳ ತಯಾರಿಕೆ ಆಗುತ್ತಿದೆ. ಭಾರತ್ ಸ್ಟೇಜ್ 6 ಎಂಬುದು ಯೂರೋಪ್‌ನ ಯೂರೋ-6 ಮಾನದಂಡಗಳಿಗೆ ಸಮ. ಈ ಹಂತದ ಎಮಿಷನ್ ಸ್ಟಾಂಡರ್ಡ್‌ಗೆ ವಾಹನಗಳನ್ನು ತಯಾರಿಸುವುದಕ್ಕೆ ಹೆಚ್ಚು ವೆಚ್ಚವಾಗುವ ನಿರೀಕ್ಷೆ ಇದೆ.

ನೀವು ಸಿಡಿಸುವ ಪಟಾಕಿ ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಕರ!?ನೀವು ಸಿಡಿಸುವ ಪಟಾಕಿ ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಕರ!?

ವಾಹನ ತಯಾರಿಕೆಯಲ್ಲಿ ಆಗುವ ಹೆಚ್ಚುವರಿ ವೆಚ್ಚ ಸಹಜವಾಗಿ ಗ್ರಾಹಕರ ಮೇಲೆ ಬೀಳಲಿದೆ. ಮುಂದಿನ ವರ್ಷದಿಂದ ಮಾರುಕಟ್ಟೆಗೆ ಬರಲಿರುವ ಹೊಸ ಕಾರುಗಳು ಹೆಚ್ಚು ದುಬಾರಿಯಾಗಿರಲಿವೆ.

Indian Car Prices May Rise Due To BS-VI Second Phase Norms

ಏನು ಮಾರ್ಪಾಡು?

ಭಾರತ್ ಸ್ಟೇಜ್-6ನ ಎರಡನೇ ಹಂತದ ಎಮಿಷನ್ ಸ್ಟಾಂಡರ್ಡ್ ಪ್ರಕಾರ, ವಾಹನಗಳನ್ನು ರೈಡ್ ಮಾಡುವಾಗ ಹೊಗೆ ಹೊರಸೂಸುವ ಮಟ್ಟವನ್ನು ಪರಿಶೀಲಿಸುವ ಸಾಧನವನ್ನು ಅಳವಡಿಸಿರಬೇಕು. ಕೆಟಲಿಟಿಕ್ ಕನ್ವರ್ಟರ್, ಆಕ್ಸಿಜನ್ ಸೆನ್ಸಾರ್ ಇತ್ಯಾದಿ ಪ್ರಮುಖ ಭಾಗಗಳನ್ನು ಈ ಸಾಧನದಿಂದ ನಿರಂತರವಾಗಿ ಪರಿಶೀಲನೆಯಲ್ಲಿಡಲು, ಮತ್ತು ಆ ಮೂಲಕ ಹೊಗೆಯ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಒಂದು ವೇಳೆ, ನಿಗದಿತ ಮಾನದಂಡದ ಮಟ್ಟಕ್ಕಿಂತ ಹೆಚ್ಚು ಹೊಗೆ ಅಥವಾ ಮಾಲಿನ್ಯ ಆಗುತ್ತಿದ್ದಲ್ಲಿ ಈ ಸಾಧನವು ಎಚ್ಚರಿಕೆಯ ಸಿಗ್ನಲ್ ನೀಡುತ್ತದೆ. ಅಗ ವಾಹನವನ್ನು ದುರಸ್ತಿ ಮಾಡಿಸಬಹುದು.

ಬಾಹ್ಯಾಕಾಶದಲ್ಲಿ ಅತಿಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿರುವ ರಾಷ್ಟ್ರಗಳು ಯಾವುವು?ಬಾಹ್ಯಾಕಾಶದಲ್ಲಿ ಅತಿಹೆಚ್ಚು ಮಾಲಿನ್ಯ ಸೃಷ್ಟಿಸುತ್ತಿರುವ ರಾಷ್ಟ್ರಗಳು ಯಾವುವು?

ಇನ್ನು, ಪ್ರೋಗ್ರಾಮ್ ಮಾಡಲಾದ ಫುಯೆಲ್ ಇಂಜೆಕ್ಟರ್ ಅನ್ನು ಅಳವಡಿಸಬೇಕು. ಸೆಮಿಕಂಡಕ್ಟರ್‌ಗಳನ್ನು ಅಪ್‌ಗ್ರೇಡ್ ಮಾಡಬೇಕು ಎಂದಿದೆ.

ಥ್ರಾಟಲ್, ಕ್ರ್ಯಾಂಕ್‌ಶಾಫ್ಟ್, ಎಂಜಿನ್ ಬಿಸಿಯನ್ನು ಪರಿಶೀಸಿಸಲು ಅನುವಾಗುವ ರೀತಿಯಲ್ಲಿ ಸೆಮಿಕಂಡಕ್ಟರ್ ಅಪ್‌ಗ್ರೇಡ್ ಮಾಡಬೇಕು. ಎಂಜಿನ್‌ನಿಂದ ಹೊರಹೋಗುವ ಮಾಲಿನ್ಯಕಾರಕ ವಸ್ತುಗಳಾದ ನೈಟ್ರೋಜನ್ ಆಕ್ಸೈಡ್, ಕಾರ್ಬಲ್ ಡೈ ಆಕ್ಸೈಡ್, ಸಲ್ಫರ್ ಇತ್ಯಾದಿ ವಸ್ತುಗಳನ್ನು ಸೆಮಿಕಂಡಕ್ಟರ್ ಮೂಲಕ ನಿಗಾ ಇಡುವಂತೆ ವ್ಯವಸ್ಥೆ ಮಾಡಬೇಕು ಎಂದು ಭಾರತ್ ಸ್ಟೇಜ್-6 ಸ್ಟಾಂಡರ್ಡ್‌ನಲ್ಲಿ ಸೂಚಿಸಲಾಗಿದೆ.

Indian Car Prices May Rise Due To BS-VI Second Phase Norms

ಆದರೆ, ಅದೃಷ್ಟಕ್ಕೆ ಕಾರುಗಳ ಬೆಲೆಯಲ್ಲಿ ತೀರಾ ಹೆಚ್ಚಳ ಆಗುವ ಸಾಧ್ಯತೆ ಕಡಿಮೆ. ಹೆಚ್ಚುವರಿ ವೆಚ್ಚದಲ್ಲಿ ಸೆಲ್ಫ್ ಡಯಾಗ್ನಾಸ್ಟಿಕ್ ಸಾಧನದ ಅಳವಡಿಕೆಗೆ ಹೆಚ್ಚು ಹಣ ಹೋಗುತ್ತದೆ. ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಲು ಒಂದಷ್ಟು ವ್ಯಯವಾಗುತ್ತದೆ.

ಭಾರತದಲ್ಲಿ ಈ ಹಿಂದೆ ಬಿಎಸ್-4 ಎಮಿಷನ್ ಸ್ಟಾಂಡರ್ಡ್ ಇತ್ತು. ಕೇವಲ ನಾಲ್ಕು ವರ್ಷಗಳಲ್ಲಿ ಬಿಎಸ್-6 ಅಳವಡಿಕೆಯಾಗಿದೆ. 2020 ಏಪ್ರಿಲ್ 1ರಿಂದ ಮಾರುಕಟ್ಟೆಗೆ ಬರುವ ವಾಹನಗಳು ಬಿಎಸ್-6 ಮಾನದಂಡಕ್ಕೆ ಬದ್ಧವಾಗಿರುವುದು ಕಡ್ಡಾಯ. ಬಿಎಸ್-4ರಿಂದ ಬಿಎಸ್-6ಗೆ ಇಷ್ಟು ಕಡಿಮೆ ವರ್ಷದಲ್ಲಿ ಅಳವಡಿಕೆ ಆಗಿದ್ದು ಭಾರತದಲ್ಲಿ ಮಾತ್ರ.

ಬಿಎಸ್-3 ಇಂದ ಬಿಎಸ್-4ಗೆ ಬರಲು ಭಾರತಕ್ಕೆ 7 ವರ್ಷ ತಗುಲಿತ್ತು. ಬಿಎಸ್-3ಯಲ್ಲಿ ವಾಹನ ಹೊರಸೂಸುವ ಹೊಗೆಯಲ್ಲಿ ಸಲ್ಫರ್ 350ಪಿಪಿಎಂ ಮಿತಿ ಹೇರಲಾಗಿತ್ತು. ಅದಾದ ಬಳಿಕ ಬಿಎಸ್-4ನಲ್ಲಿ ಸಲ್ಫರ್ ಮಿತಿ 50 ಪಿಪಿಎಂಗೆ ಇಳಿಸಲಾಯಿತು. ಈಗ ಭಾರತ್-6 ನಲ್ಲಿ ಸಲ್ಫರ್ ಮಿತಿ 10 ಪಿಪಿಎಂಗೆ ನಿಗದಿ ಮಾಡಲಾಗಿದೆ. ಇಲ್ಲಿ ಪಿಪಿಎಂ ಎಂದರೆ ಪಾರ್ಟ್ಸ್ ಪರ್ ಮಿಲಿಯನ್. 10 ಪಿಪಿಎಂ ಅಂದರೆ ಪ್ರತೀ ದಶಲಕ್ಷಕ್ಕೆ ಸಲ್ಫರ್ ಅಂಶ 10ಕ್ಕಿಂತ ಹೆಚ್ಚಿರಬಾರದು.

ಮಾರುತಿ ಸುಜುಕಿ ಮುನ್ನಡೆ

ಭಾರತ್-6ನ ಎರಡನೇ ಹಂತಕ್ಕೆ ವಾಹನಗಳನ್ನು ಅಳವಡಿಸಲು ಮುಂದಿನ ಏಪ್ರಿಲ್‌ವರೆಗೂ ಸಮಯ ಇದೆ. ವಾಹನ ತಯಾರಕ ಸಂಸ್ಥೆಗಳು ಸಮರೋಪಾದಿಯಲ್ಲಿ ಈ ಡೆಡ್‌ಲೈನ್ ಮುಟ್ಟಲು ಪ್ರಯತ್ನಿಸುತ್ತಿವೆ. ಆದರೆ, ಮಾರುತಿ ಸುಜುಕಿ ಸಂಸ್ಥೆ ಈ ಹಾದಿಯಲ್ಲಿ ಮುಂದಿದೆ. ಅದರ ಬಹತೇಕ ಎಲ್ಲಾ ಮಾಡೆಲ್‌ಗಳಲ್ಲೂ ಬಿಎಸ್-6ನ ಎರಡನೇ ಹಂತಕ್ಕೆ ಪೂರಕವಾಗಿ ಅಳವಡಿಕೆ ಮಾಡಲಾಗಿರುವುದು ತಿಳಿದುಬಂದಿದೆ.

(ಒನ್ಇಂಡಿಯಾ ಸುದ್ದಿ)

English summary
Government has made mandatory for car companies to implement second phase of BS-VI norms from 2023, April. Price of new cars likely to be hiked because of extra expense to implement new norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X