ಯುಎಸ್, ಜಪಾನ್ ಹಾದಿಯಲ್ಲಿ ಭಾರತ, ತೈಲ ಬೆಲೆ ಇಳಿಕೆಗೆ ಕ್ರಮ
ನವದೆಹಲಿ, ನವೆಂಬರ್ 23: ತೈಲ ಬೆಲೆ ಇಳಿಸುವ ದೃಷ್ಟಿಯಿಂದ ಯುಎಸ್, ಜಪಾನ್ ಕೈಗೊಂಡ ಕ್ರಮವನ್ನೇ ಅನುಸರಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಭಾರತ ತುರ್ತು ದಾಸ್ತಾನು ಎಂದು ಇರಿಸಿಕೊಂಡಿರುವ 50 ಲಕ್ಷ ಬ್ಯಾರಲ್ ಮೀಸಲು ಕಚ್ಚಾ ತೈಲ ಬಿಡುಗಡೆಗೊಳಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಏಳೆಂಟು ದಿನಗಳಲ್ಲಿ ಇದರಲ್ಲಿ 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಬಿಡುಗಡೆಗೆ ಯೋಜಿಸಲಾಗಿದೆ, ಭಾರತ 5.33 ಮಿಲಿಯನ್ ಟನ್ ಅಥವಾ 38 ಮಿಲಿಯನ್ ಬ್ಯಾರೆಲ್ ನಷ್ಟು ಕಚ್ಚಾತೈಲವನ್ನು ಹೊಂದಿದೆ. ಭಾರತದ ಪೂರ್ವ ಹಾಗೂ ಪಶ್ಚಿಮ ಕರಾವಳಿಯಲ್ಲಿ ಮೀಸಲು ದಾಸ್ತಾನು ಇರಿಸಲಾಗಿದೆ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಈ ಮೂಲಕ ಅಮೆರಿಕ, ಜಪಾನ್ ಸೇರಿದಂತೆ ಇತರೆ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳ ಕ್ರಮವನ್ನು ಭಾರತ ಅನುಸರಿಸಲು ಮುಂದಾಗಿದೆ. ಈ ಮೊದಲೇ ತಿಳಿಸಿದಂತೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಮೂರು ಪ್ರದೇಶಗಳ ನೆಲದಡಿಯ ಚೇಂಬರ್‌ಗಳಲ್ಲಿ ಸುಮಾರು 3.8 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಶೇಖರಿಸಿಡಲಾಗಿದೆ.

ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಎಚ್‌ಪಿಸಿಎಲ್) ಮೂಲಕ ಈ ತೈಲವನ್ನು ಮಾರಾಟ ಮಾಡಲಾಗುತ್ತದೆ. ಈ ಸಂಸ್ಥೆಗಳು ಕಚ್ಚಾ ತೈಲ ದಾಸ್ತಾನು ಪ್ರದೇಶದಿಂದ ಪೈಪ್ ಲೈನ್ ಸಂಪರ್ಕ ಹೊಂದಿವೆ.
''ಮುಂದಿನ ದಿನಗಳಲ್ಲಿ ಮೀಸಲಿರುವ ಮತ್ತಷ್ಟು ಮೀಸಲು ತೈಲ ಬಿಡುಗಡೆ ಬಗ್ಗೆ ಚಿಂತಿಸಬಹುದು''ಎಂದು ಅಧಿಕಾರಿಯೊಬ್ಬರು ಹೇಳಿದ್ದು, ಈ ಕುರಿತಂತೆ ಮಾರ್ಗಸೂಚಿಯುಳ್ಳ ಪ್ರಕಟಣೆಯನ್ನು ಸರ್ಕಾರ ಪ್ರಕಟಿಸಲಿದೆ. ಕಳೆದ ವಾರದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ರಾಷ್ಟ್ರಗಳಿಗೆ ಯುಎಸ್ ಸರ್ಕಾರ ಮನವಿ ಮಾಡಿಕೊಂಡು, ಮೀಸಲು ಕಚ್ಚಾತೈಲ ರಿಲೀಸ್ ಮಾಡಿ ಎಂದಿತ್ತು. ಈ ಮೂಲಕ ಪೂರೈಕೆ, ಬೇಡಿಕೆ ನಡುವಿನ ಅಂತರ ತಗ್ಗಿಸಿ, ತೈಲ ಬೆಲೆ ಸಮರವನ್ನು ಅಂತ್ಯಗೊಳಿಸುವ ಉದ್ದೇಶ ಹೊಂದಲಾಗಿದೆ.
ಮುಖ್ಯವಾಗಿ ಅತಿ ಹೆಚ್ಚು ತೈಲ ಬಳಕೆ ರಾಷ್ಟ್ರಗಳಾದ ಚೀನಾ, ಭಾರತ ಹಾಗೂ ಜಪಾನ್ ಈ ಕ್ರಮ ಅನುಸರಿಸುವ ಬಗ್ಗೆ ಯುಎಸ್ ಆಶಾವಾದ ಹೊಂದಿತ್ತು. ಅದರಂತೆ ಜಪಾನ್ ಹಾಗೂ ಭಾರತ ಮೀಸಲು ಕಚ್ಚಾತೈಲ ರಿಲೀಸ್ ಮಾಡಲು ಮುಂದಾಗಿವೆ.

ಈ ಬೆಳವಣಿಗೆಗೂ ಮುನ್ನ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಹೆಚ್ಚಳದ ಬಗ್ಗೆ ನಿರಾಸಕ್ತಿ ತೋರಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ತಿಂಗಳ ಲೆಕ್ಕದಂತೆ ರಷ್ಯಾವನ್ನು ಸೇರಿಸಿ ಒಪೆಕ್ ಪ್ಲಸ್ ರಾಷ್ಟ್ರಗಳು ಪ್ರತಿ ದಿನ 4,00,000 ಬ್ಯಾರೆಲ್ ಪ್ರತಿ ದಿನ ಮಾರುಕಟ್ಟೆಗೆ ಬಿಡುತ್ತಿವೆ. ಆದರೆ, ಬೇಡಿಕೆ ಅಧಿಕವಾಗಿದ್ದು, ಅದಕ್ಕೆ ತಕ್ಕ ಪೂರೈಕೆಯಾಗುತ್ತಿಲ್ಲ. ಕಳೆದ ವಾರದಿಂದ ಬ್ರೆಂಟ್ ಕಚ್ಚಾತೈಲ 78 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ಗೆ ಕುಸಿದಿದೆ. ಅಕ್ಟೋಬರ್ 26ರಂದು ಗರಿಷ್ಠ 86.40 ಡಾಲರ್ ಗೆ ಏರಿತ್ತು.
ನವೆಂಬರ್ ತಿಂಗಳ ಆರಂಭದಲ್ಲಿ ಭಾರತ ಸರ್ಕಾರ ಇಂಧನದ ಮೇಲಿನ ಸುಂಕ ಇಳಿಕೆ ಮಾಡಿದೆ. ಆದರೆ, 60, 000 ಕೋಟಿ ರು ಆದಾಯದ ಹೊರೆ ಹೊತ್ತುಕೊಂಡಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.33 ಮಿಲಿಯನ್ ಟನ್, ಕರ್ನಾಟಕದ ಮಂಗಳೂರಿನಲ್ಲಿ 1.5 ಮಿಲಿಯನ್ ಟನ್ ಹಾಗೂ ಪಡೂರ್ ಎಂಬಲ್ಲಿ 2.5 ಮಿಲಿಯನ್ ಟನ್ ಮೀಸಲು ಕಚ್ಚಾತೈಲ ಶೇಖರಣೆ ಇದೆ. ಯುಎಸ್ 727 ಮಿಲಿಯನ್ ಬ್ಯಾರೆಲ್, ಜಪಾನ್ 175 ಮಿಲಿಯನ್ ಬ್ಯಾರೆಲ್ ನಷ್ಟು ಮೀಸಲು ಕಚ್ಚಾತೈಲ ಹೊಂದಿವೆ.
Recommended Video
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರೀ ಕಡಿತ; ಗ್ರಾಹಕರಿಗೆ ಇಳಿಯುತ್ತಾ ಕಚ್ಚಾ ತೈಲ ಬೆಲೆ? -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ












Click it and Unblock the Notifications