• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವೆಂಬರ್ ನಿಂದ ಇರಾನ್ ತೈಲ ಭಾರತ ಖರೀದಿಸಲ್ಲ, ದುಬಾರಿಗೆ ದಾರಿಯೇ?

|

ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನವೆಂಬರ್ ನಿಂದ ಭಾರತವು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಆಲೋಚನೆಯಲ್ಲಿದೆ. ಅಲ್ಲಿಗೆ ಅಮೆರಿಕವು ಆರ್ಥಿಕ ದಿಗ್ಬಂಧನ ಹಾಕಿದ ನಂತರ ಏಷ್ಯಾ ಖಂಡದ ಮತ್ತೊಂದು ಪ್ರಮುಖ ಗ್ರಾಹಕ ದೇಶವನ್ನು ಇರಾನ್ ಕಳೆದುಕೊಳ್ಳುವಂತಾಗುತ್ತದೆ. ಭಾರತದ ಹಾದಿಯನ್ನೇ ಚೀನಾ ಕೂಡ ಅನುಸರಿಸುತ್ತದೆಯೇ ಎಂಬ ಕುತೂಹಲ ಮಾತ್ರ ಹಾಗೇ ಉಳಿದಿದೆ.

ನವೆಂಬರ್ ಮೊದಲನೇ ವಾರದ ತನಕ ಅಮೆರಿಕವು ಗಡುವು ನೀಡಿದರೂ ದಕ್ಷಿಣ ಕೊರಿಯಾ, ಜಪಾನ್ ಈಗಾಗಲೇ ಇರಾನ್ ನಿಂದ ತೈಲ ಆಮದು ನಿಲ್ಲಿಸಿ ಆಗಿದೆ. ಅವುಗಳ ಸಾಲಿಗೆ ಇನ್ನೇನು ಭಾರತ ಕೂಡ ಸೇರ್ಪಡೆ ಆಗಲಿದೆ. ಇರಾನ್ ನ ಪ್ರಮುಖ ಗ್ರಾಹಕ ದೇಶ- ಜಗತ್ತಿನಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ಚೀನಾವು ಖರೀದಿಯನ್ನು ಮುಂದುವರಿಸಬಹುದೇ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.

ಪೆಟ್ರೋಲ್ ಬೆಲೆ ಹೆಚ್ಚಳದ ನಿಜವಾದ ಕಾರಣ, ಭಾರತ ಬಂದ್ ಯಾಕೆ ಹೇಳ್ರಣ್ಣ

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸರಕಾರಿ ಒಡೆತನದಲ್ಲಿ ಇರುವ ಭಾರತದ ಎರಡು ಅತಿ ದೊಡ್ಡ ರೀಫೈನರ್ ಗಳು. ನವೆಂಬರ್ ನಲ್ಲಿ ಇರಾನ್ ನಿಂದ ಯಾವುದೇ ತೈಲಕ್ಕಾಗಿ ಕೇಳಿಲ್ಲ ಎಂದು ಕಂಪನಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಯರ ಎನರ್ಜಿಯಿಂದಲೂ ಖರೀದಿಯ ಯಾವ ಆಲೋಚನೆ ಇಲ್ಲ ಎಂದು ಕಾರ್ಖಾನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಪ್ರಮುಖ ನಾಲ್ಕು ಕಂಪನಿಗಳು ಖರೀದಿ ನಿಲ್ಲಿಸುತ್ತವೆ

ಭಾರತದ ಪ್ರಮುಖ ನಾಲ್ಕು ಕಂಪನಿಗಳು ಖರೀದಿ ನಿಲ್ಲಿಸುತ್ತವೆ

ಮಂಗಳೂರು ರಿಫೈನರಿ ಮತ್ತು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಕೂಡ ಯಾವುದೇ ತೈಲ ಖರೀದಿ ಬಗ್ಗೆ ಮಾತನಾಡಿಲ್ಲ. ಆದರೆ ಉಳಿದವು ಸಾಗಿದ ಹಾದಿಯಲ್ಲೇ ಅದು ಕೂಡ ಚಿಂತಿಸುತ್ತದೆ ಎಂದು ಕಂಪನಿ ಅಧಿಕಾರಿಗಳು ಹೇಳಿದ್ದಾರೆ. ಇವು ಇರಾನ್ ನಿಂದ ತೈಲ ಖರೀದಿಸುವ ಭಾರತದ ಪ್ರಮುಖ ನಾಲ್ಕು ಕಂಪನಿಗಳು. ಅಕ್ಟೋಬರ್ ತಿಂಗಳ ಕೊನೆಯ ತನಕ ಅವಕಾಶ ಇರುವುದರಿಂದ ಈ ಕಂಪನಿಗಳು ಮನಸ್ಸು ಬದಲಿಸುವ ಸಾಧ್ಯತೆಯೂ ಇದೆ. ಇರಾನ್ ನ ರಫ್ತು ಪ್ರಮಾಣವು ನವೆಂಬರ್ ನಲ್ಲಿ ಒಂದು ಮಿಲಿಯನ್ ಬ್ಯಾರೆಲ್ಸ್ ಗಿಂತಲೂ ಕಡಿಮೆ ಆಗಬಹುದು. ಭಾರತದ ರಿಫೈನರ್ ಗಳು ಇರಾನ್ ನಿಂದ ಖರೀದಿಯನ್ನು ಸಂಪೂರ್ಣ ನಿಲ್ಲಿಸಿಬಿಟ್ಟಿವೆ. ಇನ್ನು ಚೀನಾ ದೇಶ ಕೂಡ ಕ್ರಮೇಣವಾಗಿ ಖರೀದಿಯನ್ನು ಕಡಿತಗೊಳಿಸುತ್ತಿದೆ ಎಂದು ವಿಶ್ಲೇಷಕರೊಬ್ಬರು ಲಂಡನ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಬ್ಯಾರೆಲ್ ಗೆ ಎಂಬತ್ತು ಡಾಲರ್ ಗೂ ಹೆಚ್ಚು ದರ

ಬ್ಯಾರೆಲ್ ಗೆ ಎಂಬತ್ತು ಡಾಲರ್ ಗೂ ಹೆಚ್ಚು ದರ

ಯಾವಾಗ ಇರಾನ್ ನಿಂದ ರಫ್ತು ಪ್ರಮಾಣ ಕುಸಿತವಾಯಿತೋ ಕಚ್ಚಾ ತೈಲ ಬೆಲೆಯು ಜಾಗತಿಕ ಮಟ್ಟದಲ್ಲಿ ಭಾರೀ ಏರಿಕೆ ಕಂಡು, ನಾಲ್ಕು ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ. ಬ್ಯಾರೆಲ್ ಗೆ ಎಂಬತ್ತು ಡಾಲರ್ ಗೂ ಹೆಚ್ಚು ದರಕ್ಕೆ ವಹಿವಾಟು ಆಗುತ್ತಿದೆ. ಈ ದರ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ಜಗತ್ತಿನಾದ್ಯಂತ ಎಲ್ಲ ದೇಶಗಳನ್ನು ಗಮನದಲ್ಲಿಟ್ಟುಕೊಂಡು ಹೇಳಬೇಕು ಅಂದರೆ, ಸೌದಿ ಅರೇಬಿಯಾ, ಸ್ವಲ್ಪ ಮಟ್ಟಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ರಷ್ಯಾಗೆ ಪೆಟ್ರೋಲ್ ತೆಗೆಯುವ ಸಾಮರ್ಥ್ಯ ಇದೆ.

ಅಮೆರಿಕ 1 ಡಾಲರ್ ಗೆ 1 ಲಕ್ಷ ರಿಯಾಲ್ ದಾಟಿದ ಇರಾನ್ ಕರೆನ್ಸಿ

ಇರಾನ್ ಗೆ ಹೊಡೆತ ಬಿದ್ದಂತಾಗುತ್ತದೆ

ಇರಾನ್ ಗೆ ಹೊಡೆತ ಬಿದ್ದಂತಾಗುತ್ತದೆ

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಇರಾನ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇ ವೇಲೆ ಭಾರತದಲ್ಲಿ ಬಡವರ ಉದ್ಧಾರಕ್ಕಾಗಿ ಉತ್ತಮ ಕೆಲಸಗಳು ಆಗುತ್ತಿವೆ ಎಂದು ಹೊಗಳಿದ್ದಾರೆ. ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳುವ ಎರಡನೇ ಅತಿ ದೊಡ್ಡ ದೇಶ ಭಾರತ. ದಿನವೊಂದಕ್ಕೆ ಸರಾಸರಿ 5,77,000 ಬ್ಯಾರೆಲ್ಸ್ ನಷ್ಟು ಈ ವರ್ಷ ಆಮದು ಮಾಡಿಕೊಂಡಿದೆ. ಇಷ್ಟು ಪ್ರಮಾಣದ ವ್ಯಾಪಾರಕ್ಕೆ ಇರಾನ್ ಗೆ ಹೊಡೆತ ಬಿದ್ದಂತಾಗುತ್ತದೆ. ಈಗಾಗಲೇ ಏಷ್ಯಾ ಹಾಗೂ ಯುರೋಪ್ ಖಂಡದ ಹಲವು ದೇಶಗಳು ಆಮದು ನಿಲ್ಲಿಸಿವೆ. ಇವೆಲ್ಲ ತಾತ್ಕಾಲಿಕ ಅಂತಾದರೂ ಹಾನಿ ಪ್ರಮಾಣ ಕಡಿಮೆಯಲ್ಲ.

'ನಮ್ ತಂಟೆಗೆ ಬಂದ್ರೆ ಅಷ್ಟೇ!' ಇರಾನ್ ಅಧ್ಯಕ್ಷರಿಗೆ ಟ್ರಂಪ್ ಖಡಕ್ ವಾರ್ನಿಂಗ್!

ನವೆಂಬರ್ ನಲ್ಲಿ ಖರೀದಿ ನಿಲ್ಲಿಸಬೇಕು ಎಂಬ ಗಡುವು

ನವೆಂಬರ್ ನಲ್ಲಿ ಖರೀದಿ ನಿಲ್ಲಿಸಬೇಕು ಎಂಬ ಗಡುವು

ಇರಾನ್ ಪಾಲಿಗೆ ಭರವಸೆ ಅಂತ ಇದ್ದದ್ದು ಭಾರತ ಮತ್ತು ಚೀನಾ. ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಭಾರತದ ವಿದೇಶಾಂಗ ಸಚಿವರು, ಏಕಪಕ್ಷೀಯವಾದ ಆರ್ಥಿಕ ದಿಗ್ಬಂಧನಗಳಿಗೆ ದೇಶವೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇರಾನ್ ನಿಂದ ತೈಲ ಖರೀದಿ ಮುಂದುವರಿಸುತ್ತೇವೆ ಎಂದಿದ್ದರು. ಚೀನಾ ಕೂಡ ಅಂಥದ್ದೇ ಮಾತನಾಡಿತ್ತು. ತೈಲ ಆಮದು ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಅಮೆರಿಕ ಹೇರುತ್ತಿರುವ ದಿಗ್ಬಂಧನದ ಪರಿಣಾಮವಾಗಿ ಮಾರುಕಟ್ಟೆಯಿಂದ ಇರಾನ್ ನ ತೈಲ ಬ್ಯಾರೆಲ್ ಗಳೇ ಕಾಣದಂತಾಗಿವೆ. ಅಮೆರಿಕವು ಇರಾನ್ ಮೇಲೆ ದಿಗ್ಬಂಧನ ಹಾಕಿದ ನಂತರ ಆಗಸ್ಟ್ ನಲ್ಲಿ ಸಂಪೂರ್ಣವಾಗಿ ತೈಲ ಆಮದು ನಿಲ್ಲಿಸಿದ ಮೊದಲ ದೇಶ ದಕ್ಷಿಣ ಕೊರಿಯಾ. ಆ ನಂತರ ಜಪಾನ್ ಕೂಡ ತಾತ್ಕಾಲಿಕವಾಗಿ ಖರೀದಿ ನಿಲ್ಲಿಸಿದೆ. ಇರಾನ್ ನಿಂದ ಯಾವುದೆಲ್ಲ ದೇಶಗಳು ತೈಲ ಖರೀದಿ ಮಾಡುತ್ತಿವೆಯೋ ಅವುಗಳಿಗೆ ಟ್ರಂಪ್ ಆಡಳಿತ ನವೆಂಬರ್ ನಲ್ಲಿ ನಿಲ್ಲಿಸಬೇಕು ಎಂದು ಗಡುವು ನೀಡಿಯಾಗಿದೆ. ಒಂದು ವೇಳೆ ಖರೀದಿ ಪ್ರಮಾಣದ ಮೇಲೆ ಮಿತಿ ಹಾಕಿ, ಒಂದಿಷ್ಟು ಅವಕಾಶ ನೀಡಬಹುದಾ ಎಂಬ ನಿರೀಕ್ಷೆ ಇದೆ. ಈ ಹಿಂದೆ ಬರಾಕ್ ಒಬಾಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೀಗೇ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India isn’t planning to buy any Iranian oil in November, raising the prospect that Tehran will lose another major customer as US sanctions hit and spurring speculation over whether China will follow suit.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more