ಹೂಡಿಕೆದಾರರಿಗೆ ಅಮೆರಿಕಕ್ಕಿಂತ ಭಾರತವೇ ಅಚ್ಚು ಮೆಚ್ಚು

ಬೆಂಗಳೂರು, ನ.24: ವಿದೇಶಿ ಬಂಡವಾಳ ಹೂಡಿಕೆ(ಎಫ್ ಡಿಐ) ನಿಯಮ ಸಡಿಲಿಕೆ ಮಾಡುವ ಮೂಲಕ ಯುಪಿಎ ಸರ್ಕಾರ ಮಾಡಿರುವ ಬದಲಾವಣೆ ಪರಿಣಾಮ ಕೊನೆಗೂ ಪ್ರಕಟಗೊಳ್ಳುತ್ತಿದೆ. ಜಾಗತಿಕವಾಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಬಲ್ಲ ರಾಷ್ಟ್ರಗಳ ಪೈಕಿ ಭಾರತ ಅಗ್ರಸ್ಥಾನಕ್ಕೇರಿದೆ. ಅಮೆರಿಕ, ಚೀನಾ ದೇಶಗಳನ್ನು ಹಿಂದಿಕ್ಕಿರುವ ಭಾರತದಲ್ಲಿ ಹೂಡಿಕೆದಾರರಿಗೆ ವಿಫುಲ ಅವಕಾಶಗಳಿವೆ ಎಂದು ಇತ್ತೀಚಿನ ಸಮೀಕ್ಷೆ ಹೇಳಿದೆ.

ಜಾಗತಿಕವಾಗಿ ಗುರುತಿಸಿಕೊಂಡಿರುವ ಕನ್ಸಲ್ಟೆನ್ಸಿ ಸಂಸ್ಥೆ ಎರ್ನ್ಸ್ಟ್ ಅಂಡ್ ಯಂಗ್(Ernst and Young) ಹೊರ ಹಾಕಿರುವ ಇತ್ತೀಚಿನ ಸಮೀಕ್ಷೆ ಪ್ರಕಾರ ಭಾರತ ಹೂಡಿಕೆದಾರರ ಸ್ವರ್ಗ ಎನ್ನಲಾಗಿದೆ. ಭಾರತದ ನಂತರದ ಸ್ಥಾನದಲ್ಲಿ ಬ್ರೆಜಿಲ್ ಹಾಗೂ ಚೀನಾ ದೇಶಗಳು ಗುರುತಿಸಿಕೊಂಡಿವೆ.

ಕೆನಡಾ ನಾಲ್ಕನೇ ಸ್ಥಾನದಲ್ಲಿದ್ದರೆ, ವಿಶ್ವದ ದೊಡ್ಡಣ್ಣ ಎಂದೆನಿಸಿರುವ ಅಮೆರಿಕ ಐದನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಟಾಪ್ 10ನಲ್ಲಿ ದಕ್ಷಿಣ ಆಫ್ರಿಕಾ (6), ವಿಯಟ್ನಾಂ (7), ಮ್ಯಾನ್ಮಾರ್ (8), ಮೆಕ್ಸಿಕೋ (9) ಹಾಗೂ ಇಂಡೋನೇಷಿಯಾ (10) ಸ್ಥಾನ ಪಡೆದಿವೆ.

India surpasses US as most attractive investment destination: Survey

ಭಾರತದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಗಿರುವ ರುಪಾಯಿ ಅಪಮೌಲ್ಯದಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಡೆತ ಬಿದ್ದಿದೆಯಾದರೂ ಪರೋಕ್ಷವಾಗಿ ಲಾಭ ತರುತ್ತಿದೆ. ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ನಿಯಮಗಳನ್ನು ಸಡಿಲಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಭಾರತ ಸಫಲವಾಗಿದೆ ಎಂದು EY ತನ್ನ ಸಮೀಕ್ಷೆಯಲ್ಲಿ ಹೇಳಿದೆ.

ಬಹು ಬ್ರ್ಯಾಂಡ್ ರೀಟೈಲ್ ಹಾಗೂ ಟೆಲಿಕಾಂ ಕ್ಷೇತ್ರ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಎಫ್ ಡಿಐ ನಿಯಮ ಸಡಿಲಿಕೆ ಮಾಡಿ ಕಳೆದ ಆಗಸ್ಟ್ ನಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಪರಿಣಾಮ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ.

ಅನೇಕ ಭಾರತೀಯ ಕಂಪನಿಗಳ ಸಾಲದ ಹೊರೆ ತಗ್ಗಲು ವಿದೇಶಿ ಹೂಡಿಕೆ ನೆರವಾಗುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿರುವ ವೈವಿಧ್ಯತೆ ಹಾಗೂ ಸರಳತೆ ಹೂಡಿಕೆದಾರರನ್ನು ಬಹುವಾಗಿ ಆಕರ್ಷಿಸಿದೆ ಎಂದು EY ವರದಿ ಹೇಳಿದೆ.

ಹೂಡಿಕೆದಾರರ ವಿಷಯಕ್ಕೆ ಬಂದರೆ ಅಮೆರಿಕ, ಫ್ರಾನ್ಸ್ ಹಾಗೂ ಜಪಾನ್ ದೇಶಗಳ ಉದ್ಯಮಿಗಳು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು EY ಹೇಳಿದೆ. ಸುಮಾರು 70 ದೇಶಗಳಲ್ಲಿನ 1,600ಕ್ಕೂ ಅಧಿಕ ಹಿರಿಯ ಅಧಿಕಾರಿಗಳ ಅಭಿಮತ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ.

ಆಟೋಮೋಟಿವ್, ತಂತ್ರಜ್ಞಾನ, ಜೀವ ವಿಜ್ಞಾನ ಹಾಗೂ ಗ್ರಾಹಕ ಉತ್ಪನ್ನ ಮಾರುಕಟ್ಟೆ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಿದ್ದಾರೆ. ಮುಂದಿನ 12 ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಜತೆ ಒಪ್ಪಂದ, ಕಂಪನಿ ವಿಲೀನ ಪ್ರಕ್ರಿಯೆಗಳು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.

ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಇತರೆ ದೇಶಗಳಿಗಿಂತ ಭಾರತದಲ್ಲಿ ಸಂಬಳ ಏರಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿರಬಹುದು ಆದರೆ, ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಬಗ್ಗೆ ಸಂತೃಪ್ತ ಭಾವ ಹೊಂದಿದ್ದಾರೆ ಎಂದು ಇತ್ತೀಚಿಗೆ ಮತ್ತೊಂದು ಸಮೀಕ್ಷೆ ಹೇಳಿತ್ತು. ಹೀಗಾಗಿ ಭಾರತದಲ್ಲಿ ಕಡಿಮೆ ಸಂಬಳಕ್ಕೆ ಉದ್ಯೋಗಿಗಳಿಂದ ಹೆಚ್ಚಿನ ಕೆಲಸ ಪಡೆಯುವ ಸಾಧ್ಯತೆಗಳು ಮುಂದುವರೆದಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+