ಮೋದಿ ಸರ್ಕಾರಕ್ಕೆ ಹಿನ್ನಡೆ, ಮತ್ತೊಮ್ಮೆ ನಿರುದ್ಯೋಗ ಪ್ರಮಾಣ ಅಧಿಕ

ನವದೆಹಲಿ, ಮಾರ್ಚ್ 02: ಭಾರತದಲ್ಲಿ ನಿರುದ್ಯೋಗ ಪ್ರಮಾಣ ಅಧಿಕವಾಗಿದೆ, ಆದರೆ, ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಮತ್ತೊಮ್ಮೆ ವರದಿ ಬಂದಿದೆ.

Recommended Video

      India's unemployment rate go up day by day | Unemployement | BJP | India | Modi

      ನಿರುದ್ಯೋಗ ಪ್ರಮಾಣ ಶೇಕಡಾ 7.78ಕ್ಕೆ ಏರಿಕೆಯಾಗಿದೆ ಎಂದು 'ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ)' ಸಂಸ್ಥೆಯ ಮುಖ್ಯಸ್ಥ ಮಹೇಶ್ ವ್ಯಾಸ್ ಹೇಳಿದ್ದಾರೆ. ನಿರುದ್ಯೋಗ ಪ್ರಮಾಣ ಕಳೆದ ನಾಲ್ಕು ತಿಂಗಳಲ್ಲೇ ಅಧಿಕ ಪ್ರಮಾಣವಾಗಿದ್ದು, ಅಕ್ಟೋಬರ್ 2019ರಲ್ಲಿ ಕೊನೆಯ ಬಾರಿ ಅಧಿಕ ಪ್ರಮಾಣ ಕಂಡು ಬಂದಿತ್ತು. ಜನವರಿ ತಿಂಗಳಿನಲ್ಲಿ ಶೇ 7.16ರಷ್ಟಿತ್ತು. ಆರ್ಥಿಕ ಹಿಂಜರಿಕೆಯ ಪರಿಣಾಮ ನಿರುದ್ಯೋಗದ ಮೇಲಾಗಿದೆ ಎಂದು ತಿಳಿದು ಬಂದಿದೆ.

      ಉದ್ಯೋಗದಲ್ಲಿರುವವರ ಪ್ರಮಾಣವೂ ಇಳಿಮುಖವಾಗಿದ್ದು ಕಳೆದ ವರ್ಷ ಫೆಬ್ರವರಿಯಲ್ಲಿ 40.6 ಕೋಟಿ ಜನರು ಉದ್ಯೋಗದಲ್ಲಿದ್ದರೆ, ಈ ಪ್ರಮಾಣ 2019ರ ಫೆಬ್ರವರಿ ಹೊತ್ತಿಗೆ 40 ಕೋಟಿಗೆ ಇಳಿಕೆಯಾಗಿದೆ. ಅಂದರೆ 60 ಲಕ್ಷ ಉದ್ಯೋಗಿಗಳೇ ನಿರುದ್ಯೋಗಿಗಳಾಗಿದ್ದಾರೆ. ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಿಂದ ಬಂದಿರುವ ವರದಿಯ ಪ್ರಕಾರ 2016 ರಿಂದ 2018ರ ಅವಧಿಯಲ್ಲಿ ಸುಮಾರು 50 ಲಕ್ಷ ಉದ್ಯೋಗಗಳು ಕಡಿತಗೊಳ್ಳಲಿದೆ ಎಂದು ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

       ನಿರುದ್ಯೋಗ ಪ್ರಮಾಣ ಏರಿಕೆಗೆ ಏನು ಕಾರಣ?

      ನಿರುದ್ಯೋಗ ಪ್ರಮಾಣ ಏರಿಕೆಗೆ ಏನು ಕಾರಣ?

      ನಿರುದ್ಯೋಗ ಪ್ರಮಾಣ ಏರಿಕೆಗೆ ಏನು ಕಾರಣ?: ಭಾರತದ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡಿಲ್ಲ. ಕಳೆದ ಮೂರು ತಿಂಗಳಲ್ಲಿ ಪ್ರಗತಿ ಇನ್ನಷ್ಟು ಕುಂಠಿತವಾಗಿದೆ. ಜಾಗತಿಕವಾಗಿ ಕೊರೊನಾವೈರಸ್ ಹಬ್ಬುತ್ತಿರುವುದು ಕೂಡಾ ಕಾರಣವಾಗಿದೆ.

      ಗ್ರಾಮೀಣಭಾಗದಲ್ಲಿ ನಿರುದ್ಯೋಗ ಪ್ರಮಾಣ ಫೆಬ್ರವರಿ ತಿಂಗಳಿನಲ್ಲಿ ಶೇ 7.37ರಷ್ಟಿತ್ತು. ಜನವರಿಯಲ್ಲಿ ಶೇ 5.97 ಮಾತ್ರ ಇತ್ತು. ನಗರ ಪ್ರದೇಶದಲ್ಲಿ ಶೇ 9.70 ರಿಂದ ಶೇ 8.65ಕ್ಕೆ ಕುಸಿದಿರುವುದು ಸ್ವಲ್ಪ ಸಮಾಧಾನಕರ ಸಂಗತಿಯಾಗಿದೆ ಎಂದು ಸಿಎಂಐಇ ವರದಿ ಮಾಡಿದೆ.

       5 ವರ್ಷಗಳಿಗೊಮ್ಮೆ ಅಧಿಕೃತ ನಿರುದ್ಯೋಗ ಪ್ರಮಾಣ ಪ್ರಕಟ

      5 ವರ್ಷಗಳಿಗೊಮ್ಮೆ ಅಧಿಕೃತ ನಿರುದ್ಯೋಗ ಪ್ರಮಾಣ ಪ್ರಕಟ

      ಪ್ರತಿ 5 ವರ್ಷಗಳಿಗೊಮ್ಮೆ ಮಾತ್ರ ಅಧಿಕೃತವಾಗಿ ನಿರುದ್ಯೋಗ ಪ್ರಮಾಣ ದಾಖಲೆಯನ್ನು ಸರ್ಕಾರ ಬಿಡುಗಡೆ ಮಾಡುವುದು ಪದ್ಧತಿ. ಆದರೆ, ಸಿಎಂಐಇ ಈಗಾಗಲೇ ಎರಡು ಬಾರಿ ವರದಿ ನೀಡಿತ್ತು. ವರದಿಯ ಸತ್ಯಾಸತ್ಯತೆ ಬಗ್ಗೆ ಕೂಡಾ ಪರಿಶೀಲನೆ ನಡೆಸಲಾಗಿತ್ತು. ಲೋಕಸಭೆ ಚುನಾವಣೆ 2019ರ ಸಂದರ್ಭದಲ್ಲಿ ಈ ವರದಿಗಳನ್ನು ಮುಂದಿಟ್ಟುಕೊಂಡು, ಮೋದಿ ವಿರುದ್ಧ ಪ್ರಚಾರಕ್ಕೆ ವಿಪಕ್ಷಗಳು ಮುಂದಾಗಿದ್ದವು, ಆದರೆ, ಇದರಿಂದ ಹೆಚ್ಚಿನ ಲಾಭವೇನು ಆಗಲಿಲ್ಲ, ಮೋದಿ ಮತ್ತೊಮ್ಮೆ ಗೆಲುವು ಸಾಧಿಸಿ ಸರ್ಕಾರ ಸ್ಥಾಪಿಸಿದರು.

       2018ರಲ್ಲಿ 11 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರು.

      2018ರಲ್ಲಿ 11 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರು.

      ಜನವರಿ 2019ರಲ್ಲಿ ಪ್ರಕಟವಾದ ವರದಿಯಂತೆ 2018ರಲ್ಲಿ 11 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದರು. 2018ರ ಫೆಬ್ರವರಿಯಲ್ಲಿ ಶೇಕಡಾ 5.9 ಇದ್ದ ನಿರುದ್ಯೋಗ ಪ್ರಮಾಣ ಒಂದು ವರ್ಷದ ಅವಧಿಯಲ್ಲಿ ಶೇಕಡಾ 22ರಷ್ಟು ಏರಿಕೆಯಾಗಿದ್ದು ಸದ್ಯ ಶೇಕಡಾ 7.2ಕ್ಕೇರಿದೆ. ಇದು 2016ರ ಸೆಪ್ಟೆಂಬರ್ ನಿಂದ ಇಲ್ಲಿ ತನಕ ದಾಖಲಾದ ಅತಿ ಹೆಚ್ಚಿನ ಪ್ರಮಾಣವಾಗಿದೆ. ಅಕ್ಟೋಬರ್ 2019ರಲ್ಲಿ ಕೊನೆಯ ಬಾರಿ ಅಧಿಕ ಪ್ರಮಾಣ ಕಂಡು ಬಂದಿತ್ತು. ಜನವರಿ ತಿಂಗಳಿನಲ್ಲಿ ಶೇ 7.16ರಷ್ಟಿತ್ತು.

       ಅಪನಗದೀಕರಣ ಜಾರಿಗೊಂಡ ಬಳಿಕ

      ಅಪನಗದೀಕರಣ ಜಾರಿಗೊಂಡ ಬಳಿಕ

      ಅಪನಗದೀಕರಣ ಜಾರಿಗೊಂಡ ಬಳಿಕ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 2018ರಿಂದ ಜಿಎಸ್‌ಟಿ ಅನುಷ್ಠಾನಗೊಂಡ ಬಳಿಕ ದೇಶದಲ್ಲಿ 1.1 ಕೋಟಿ ಉದ್ಯೋಗ ನಷ್ಟವಾಗಿದೆ. ಲಕ್ಷಾಂತರ ಸಣ್ಣ ಉದ್ಯಮಗಳಿಗೆ ಹೊಡೆತ ಬಿದ್ದಿದೆ ಎಂದು ಮುಂಬೈ ಮೂಲದ ಸಂಸ್ಥೆ ಸಿಎಂಐಇ ವರದಿ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+