ಆರ್ಥಿಕ ಸಮೀಕ್ಷೆ: ವ್ಯಾಪಾರ-ಜಿಡಿಪಿ ಪ್ರಮಾಣ, ಚೀನಾವನ್ನು ಹಿಂದಿಕ್ಕಿದ ಭಾರತ

Posted By:
Subscribe to Oneindia Kannada

ನವದೆಹಲಿ, ಜನವರಿ 31: ಕೇಂದ್ರ ಸರಕಾರವು 2017ನೇ ಸಾಲಿಗೆ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಗಳವಾರ ಸಂಸತ್ ಮುಂದೆ ಮಂಡಿಸಿದೆ. ಜಾಗತಿಕ ಮಟ್ಟದಲ್ಲಿ ಚರ್ಮೋದ್ಯಮ ಮತ್ತು ಜವಳಿ ವಲಯವು ಸ್ಪರ್ಧಾತ್ಮಕವಾಗಬೇಕು ಎಂದರೆ ಕಾರ್ಮಿಕ ಹಾಗೂ ತೆರಿಗೆ ನಿಯಮಗಳಲ್ಲಿ ಸುಧಾರಣೆ ಅಗಬೇಕು ಎಂದು ಶಿಫಾರಸು ಮಾಡಿದೆ.

2016-17ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರವು ಸ್ಥಿರವಾಗಿದ್ದು, 2016-17ನೇ ಸಾಲಿಗೆ ಶೇ 7.1ರಷ್ಟು ನಿಗದಿ ಮಾಡಲಾಗಿದೆ. 2015-16ನೇ ಸಾಲಿಗೆ ಹೋಲಿಸಿದರೆ (1.2) ಈ ವರ್ಷ ಕೃಷಿ ವಲಯವು ಶೇ 4.1ರಷ್ಟು ಬೆಳವಣಿಗೆ ದಾಖಲಿಸಬೇಕಿದೆ. ಇನ್ನು ಕೈಗಾರಿಕಾ ವಲಯದ ಬೆಳವಣಿಗೆ ದರ 5.2ರಷ್ಟು ಅಂದಾಜಿಸಲಾಗಿದೆ. 2015-16ರಲ್ಲಿ ಇದು 7.4ರಷ್ಟಿತ್ತು.[ಮಲ್ಯಗೆ ಸಹಾಯ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಸಿಂಗ್ ಹೇಳಿದ್ದೇನು?]

ಕರೆಂಟ್ ಅಕೌಂಟ್ ಡಿಫಿಸಿಟ್ (ಸಿಎಡಿ) 2016-17ನೇ ಸಾಲಿನ ಮೊದಲಾರ್ಧದಲ್ಲಿ ಜಿಡಿಪಿಯ ಶೇ 0.3ರಷ್ಟಿದೆ. ಹಣದುಬ್ಬರವು ಸತತ ಮೂರನೇ ಆರ್ಥಿಕ ವರ್ಷ ಕೂಡ ನಿಯಂತ್ರಣದಲ್ಲಿದೆ. ತಲಾದಾಯವು 1983-2014ರ ಮಧ್ಯೆ ಪ್ರಗತಿ ಕಂಡಿದೆ. ಆರ್ಥಿಕತೆ ಹಾಗೂ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಸುಧಾರಣೆ ತರುವಂತೆ ಶಿಫಾರಸು ಮಾಡಲಾಗಿದೆ.

Parliament

ಸೆಂಟ್ರಲೈಸ್ಡ್ ಪಬ್ಲಿಕ್ ಸೆಕ್ಟರ್ ಅಸೆಟ್ ರಿಹ್ಯಾಬಿಲಿಟೇಷನ್ ಏಜೆನ್ಸಿ ಸ್ಥಾಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ವಿದೇಶಿ ಬಂಡವಾಳ ಹೂಡಿಕೆ ವಿಚಾರವಾಗಿ ತೆಗೆದುಕೊಂಡ ಕ್ರಮದಿಂದಾಗಿ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ವಿದೇಶಿ ಬಂಡವಾಳ ಹರಿದುಬರುವ ದೇಶಗಳ ಪೈಕಿ ಒಂದಾಗಿದೆ.[ಕೇಂದ್ರ ಬಜೆಟ್ ನ 7 ಇಂಟರೆಸ್ಟಿಂಗ್ ಸಂಗತಿಗಳು]

ಭಾರತದ ವ್ಯಾಪಾರ ಹಾಗೂ ಜಿಡಿಪಿ ಪ್ರಮಾಣ ಚೀನಾಗಿಂತ ಹೆಚ್ಚಾಗಿದೆ. ಒಟ್ಟಾರೆ ಆರ್ಥಿಕ ಸಮೀಕ್ಷೆ ವಿವರಗಳನ್ನು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಮಾಧ್ಯಮಗಳಿಗೆ ನೀಡಿದ್ದು, 2017-18ನೇ ಸಾಲಿಗೆ ಜಿಡಿಪಿ ಬೆಳವಣಿಗೆಯನ್ನು 6 3/4ರಿಂದ 7 1/2ಯಷ್ಟು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Central Government tables Economic Survey 2017 before the Parliament on Tuesday.
Please Wait while comments are loading...