ಮಾರ್ಚ್‌ನಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ6.95ಕ್ಕೇರಿಕೆ!
ನವದೆಹಲಿ, ಏಪ್ರಿಲ್ 12: ರಷ್ಯಾ- ಉಕ್ರೇನ್ ಸಂಘರ್ಷದ ನಡುವೆ ಆಮದು-ರಫ್ತು ವ್ಯತ್ಯಯ, ಬೇಡಿಕೆ-ಪೂರೈಕೆ ಅಸಮತೋಲನ ಉಂಟಾಗಿದ್ದು, ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರವು ಶೇಕಡಾ 6.95 ಕ್ಕೆ ಜಿಗಿದಿದೆ. ಅದರಲ್ಲೂ ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ದಿಢೀರ್ ಏರಿಕೆ ಕಾರಣವಾಗಿದೆ ಎಂದು ಸರ್ಕಾರ ಮಂಗಳವಾರದಂದು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ತಿಳಿದು ಬಂದಿದೆ. ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇ 6.07 ರಷ್ಟಿತ್ತು.
ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡಾ 7.68 ರಷ್ಟಿತ್ತು, ಹಿಂದಿನ ತಿಂಗಳಲ್ಲಿ ಶೇಕಡಾ 5.85 ರಷ್ಟಿತ್ತು. ಇದು ಸತತ ಮೂರನೇ ತಿಂಗಳು ಚಿಲ್ಲರೆ(retail) ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ ಆರಾಮದಾಯಕ ವಲಯಕ್ಕಿಂತ ಹೆಚ್ಚಾಗಿರುತ್ತದೆ. ಮುಖ್ಯವಾಗಿ ಚಿಲ್ಲರೆ ಹಣದುಬ್ಬರವನ್ನು ತನ್ನ ದ್ವೈಮಾಸಿಕ ವಿತ್ತೀಯ ನೀತಿಗೆ ಬರುವಾಗ ಕಾರಣವಾಗುವ ಹಣದುಬ್ಬರವನ್ನು 2 ರಿಂದ 6 ಪರ್ಸೆಂಟ್‌ನ ನಡುವೆ ಇರಿಸಲು ಸರ್ಕಾರ ಯತ್ನಿಸುತ್ತದೆ.
ಇಂಧನ ಬೇಡಿಕೆ ಹೆಚ್ಚಳ
ಮಾರ್ಚ್‌ನಲ್ಲಿ ಭಾರತದ ಇಂಧನ ಬೇಡಿಕೆಯು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಪೆಟ್ರೋಲ್ ಮಾರಾಟವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಏಕೆಂದರೆ ಮಾರುಕಟ್ಟೆಯು ಕೋವಿಡ್-ಸಂಬಂಧಿತ ನಿರ್ಬಂಧಗಳ ಹಿಂತೆಗೆತದಿಂದ ಸರಾಗವಾಗಿ ದೈನಂದಿನ ವ್ಯಾಪಾರ ವಹಿವಾಟು ಕಾಣುತ್ತಿದೆ. ಇಂಧನದ ವಿಷಯಕ್ಕೆ ಬಂದರೆ ಬೆಲೆ ಏರಿಕೆಯನ್ನು ನಿರೀಕ್ಷಿಸಿ ಸರಬರಾಜುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ತೈಲ ಬೇಡಿಕೆ ಹಾಗೂ ಬಳಕೆ ಕಳೆದ ವರ್ಷದ ಇದೇ ತಿಂಗಳಿನಿಂದ 4.2% ರಷ್ಟು ಏರಿಕೆಯಾಗಿದ್ದು 19.41 ಮಿಲಿಯನ್ ಟನ್‌ಗಳಿಗೆ ತಲುಪಿದೆ, ಇದು ಮಾರ್ಚ್ 2019 ರ ದಾಖಲೆಯ ಗರಿಷ್ಠ ಮಟ್ಟವಾಗಿದೆ ಎಂದು ಭಾರತೀಯ ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಏಪ್ರಿಲ್ 9 ರ ಸೆಲ್ ಡೇಟಾ ಪ್ರಕಾರ ತಿಳಿದು ಬಂದಿದೆ.

"ಆದ್ದರಿಂದ ಇದು (ಹೆಚ್ಚಿನ ಬೆಲೆಗಳು) ಸಮೀಪದ ಅವಧಿಯಲ್ಲಿ ಬೇಡಿಕೆಯ ನಿರೀಕ್ಷೆಗಳ ಮೇಲೆ ತೂಗುತ್ತದೆ, ಆದರೆ ಆರ್ಥಿಕತೆಯು ಇನ್ನೂ ವಿಸ್ತರಿಸುತ್ತಿರುವುದರಿಂದ, ಮುಂಬರುವ ತಿಂಗಳುಗಳಲ್ಲಿ ತೈಲ ಬೇಡಿಕೆಯು ಚೇತರಿಸಿಕೊಳ್ಳುವುದನ್ನು ಮುಂದುವರೆಸುವ ಸಾಧ್ಯತೆಯಿದೆ" ಎಂದು ಯುಬಿಎಸ್ ವಿಶ್ಲೇಷಕ ಜಿಯೋವಾನಿ ಸ್ಟೌನೊವೊ ಹೇಳಿದ್ದಾರೆ. ಗ್ಯಾಸೋಲಿನ್ ಅಥವಾ ಪೆಟ್ರೋಲ್ ಮಾರಾಟವು ಹಿಂದಿನ ವರ್ಷಕ್ಕಿಂತ 6.2% ಹೆಚ್ಚಾಗಿದೆ 2.91 ಮಿಲಿಯನ್ ಟನ್‌ಗಳು, ಇದು 1998 ರ ಮಾಹಿತಿಯ ಪ್ರಕಾರ ಇದು ಅತ್ಯಧಿಕವಾಗಿದೆ. ತೈಲ ಆಮದುಗಳ ಹೆಚ್ಚುತ್ತಿರುವ ವೆಚ್ಚವನ್ನು ತಗ್ಗಿಸಲು, ಭಾರತವು ಲಭ್ಯವಿರುವ ರಷ್ಯಾದ ಬ್ಯಾರೆಲ್‌ಗಳತ್ತ ಮುಖಮಾಡಿದೆ.
"ರಾಷ್ಟ್ರೀಯ ಹಿತಾಸಕ್ತಿಗಳನ್ನು" ಉಲ್ಲೇಖಿಸಿ ಆಳವಾದ ರಿಯಾಯಿತಿಯಲ್ಲಿ ಇಂಧನ ಖರೀದಿಗೆ ಮುಂದಾಗಿದೆ. ಆದರೆ, ಇಂಡಿಯನ್ ಆಯಿಲ್ ತಮ್ಮ ಆಮದುದಾರರ ಪಟ್ಟಿಯಿಂದ ರಷ್ಯಾದ ಕಂಪನಿಗಳನ್ನು ಹೊರಗಿಟ್ಟಿದೆ. ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಮಾತ್ರ ರಿಯಾಯಿತಿ ದರದಲ್ಲಿ ಇಂಧನ ಖರೀದಿ ಮಾಡಿದರೆ, ಬೇಡಿಕೆಗೆ ತಕ್ಕ ಪೂರೈಕೆ ಮಾಡಲು ಸಾಧ್ಯವಾಗಲಿದೆ. ಈ ನಡುವೆ ಜಾಗತಿಕವಾಗಿ ಕಚ್ಚಾತೈಲ ಬೆಲೆ ಸತತವಾಗಿ ಪ್ರತಿ ಬ್ಯಾರೆಲ್ ಮೇಲೆ 100 ಯುಎಸ್ ಡಾಲರ್ ಗಿಂತಲೂ ಕಡಿಮೆ ಮೌಲ್ಯಕ್ಕೆ ಕುಸಿದಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications