ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.93ರಷ್ಟು ಏರಿಕೆ
ನವದೆಹಲಿ, ಆಗಸ್ಟ್ 13: ಜುಲೈ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರವು ಶೇ .6.93 ರಷ್ಟಿದ್ದು, ಹಿಂದಿನ ತಿಂಗಳ ಅವಧಿಯಲ್ಲಿ ಇದು 6.23 ರಷ್ಟಿತ್ತು ಎಂದು ಆಗಸ್ಟ್ 13 ರಂದು ಬಿಡುಗಡೆಯಾದ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್‌ಎಸ್‌ಒ) ಅಂಕಿ ಅಂಶಗಳು ತಿಳಿಸಿವೆ.
Recommended Video
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ದರವನ್ನು ಜೂನ್‌ನಲ್ಲಿ ಶೇ. 6.09 ರಿಂದ ಶೇ. 6.23 ಕ್ಕೆ ಪರಿಷ್ಕರಿಸಲಾಗಿದೆ.
ಜೂನ್‌ನ ಅಂಕಿ-ಅಂಶಗಳ ಬಿಡುಗಡೆ ಮೊದಲು, ಸರ್ಕಾರವು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದತ್ತಾಂಶವನ್ನು ಬಿಡುಗಡೆ ಮಾಡಿಲ್ಲ. ಆದರೆ, ಏಪ್ರಿಲ್‌ನಲ್ಲಿ ಅದು ಮಾರ್ಚ್ ತಿಂಗಳ ಸಿಪಿಐ ಡೇಟಾವನ್ನು ಶೇ. 5.91 ರಿಂದ ಶೇ. 5.84 ಕ್ಕೆ ಪರಿಷ್ಕರಿಸಿದೆ.

ಜುಲೈನಲ್ಲಿ ಒಟ್ಟು ಆಹಾರ ಬೆಲೆ ಹಣದುಬ್ಬರ (ಸಿಎಫ್‌ಪಿಐ) ಶೇಕಡಾ 9.62 ರಷ್ಟಿದ್ದು, ಒಂದು ತಿಂಗಳ ಹಿಂದೆ ಶೇ .8.72 ರಷ್ಟಿತ್ತು. ತರಕಾರಿಗಳ ಹಣದುಬ್ಬರವು ಜುಲೈನಲ್ಲಿ ಶೇಕಡಾ 11.29 ರಷ್ಟಿದ್ದರೆ, ಜೂನ್‌ನಲ್ಲಿ ಇದು 1.86 ರಷ್ಟಿತ್ತು. ಇಂಧನ ಮತ್ತು ಬೆಳಕಿನ ವಿಭಾಗದಲ್ಲಿ, ಅದೇ ತಿಂಗಳ ಹಣದುಬ್ಬರವು ಜೂನ್‌ನಲ್ಲಿ 2.69 ರಷ್ಟಿದ್ದರೆ ಶೇ. 2.80 ರಷ್ಟಿತ್ತು.












Click it and Unblock the Notifications