ಅಂಚೆ ಇಲಾಖೆಯಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆ

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 12: ಭಾರತೀಯ ಅಂಚೆ ಇಲಾಖೆ ತನ್ನ ಗ್ರಾಹಕರಿಗೆ ಏಪ್ರಿಲ್ 1 ರಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ನೀಡಲಿದೆ.

ದೇಶದೆಲ್ಲೆಡೆ ಸುಮಾರು 1.55 ಲಕ್ಷ ಅಂಚೆ ಕಚೇರಿಗಳಲ್ಲಿ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಇದು ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್(ಐಪಿಪಿಬಿ) ವಿಸ್ತರಣಾ ಕಾರ್ಯಕ್ರಮದ ಭಾಗವಾಗಿದೆ ಎಂದು ಇಲಾಖೆ ಪ್ರಕಟಿಸಿದೆ.

ರಾಂಚಿ, ರಾಯ್ ಪುರದಲ್ಲಿ 2017 ರ ಜನವರಿಯಲ್ಲಿ ಈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಏಪ್ರಿಲ್ 1 ರಿಂದ ಪೋಸ್ಟ್ ಆಫೀಸ್ ನ 17 ಕೋಟಿ ಉಳಿತಾಯ ಖಾತೆದಾರರಿಗೆ NEFT, RTGS, UPI ಹಾಗೂ ಬಿಲ್ ಪಾವತಿಯ ಸೇವೆಗಳು ಸಿಗಲಿವೆ.

India Post Payments Bank to be launched across India from April

ಗ್ರಾಮೀಣ ಅಂಚೆ ಸೇವಕರು ಮತ್ತು ಪೋಸ್ಟ್ ಮನ್ ಗಳಿಗೆ ಪೇಮೆಂಟ್ಸ್ ಸೇವೆ ನೀಡುವ ಸಾಧನ ನೀಡಲಾಗುತ್ತದೆ. ಹೀಗಾಗಿ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ, ಡಿಜಿಟಲ್ ಪಾವತಿ ವ್ಯವಸ್ಥೆ ಲಭ್ಯವಾಗಲಿದೆ. ಪೇಮೆಂಟ್ಸ್ ಬ್ಯಾಂಕ್ ಮೂಲಕ 1 ಲಕ್ಷ ರು ಪ್ರತಿ ಖಾತೆಯಂತೆ ವೈಯಕ್ತಿಕ ಹಾಗೂ ಸಣ್ಣ ಉದ್ದಿಮೆದಾರರು ಠೇವಣಿ ಇಡಬಹುದಾಗಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India Post Payments Bank today said that it will start pan-India roll out of its network from April this year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ