ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳವಣಿಗೆ ದರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ: ಐಎಂಎಫ್ ಭವಿಷ್ಯ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 9: ಪ್ರಸಕ್ತ ಸಾಲಿನಲ್ಲಿ ದೇಶದ ಆರ್ಥಿಕತೆಯು ಶೇ 7.3ರಷ್ಟಾಗಲಿದ್ದು, 2019ರಲ್ಲಿ ಶೇ 7.4ರ ಬೆಳವಣಿಗೆ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅಂದಾಜಿಸಿದೆ.

2017ರಲ್ಲಿ ಭಾರತವು ಶೇ 6.7ರ ಬೆಳವಣಿಗೆ ದರ ಕಂಡಿತ್ತು.

2018ರಲ್ಲಿ ಭಾರತದ ಬೆಳವಣಿಗೆಯು ಶೇ 7.3ಕ್ಕೆ ಹೆಚ್ಚಳವಾಗುವ ನಿರೀಕ್ಷೆಯಿದ್ದು, 2019ರಲ್ಲಿ ಶೇ 7.4 ರಷ್ಟು ಪ್ರಗತಿ ಕಾಣುವ ಸಾಧ್ಯತೆ ಇದೆ (ಇದು 2018ರ ಏಪ್ರಿಲ್‌ನಲ್ಲಿ ಮಾಡಿದ್ದ ಊಹೆಗಿಂತ ತುಸು ಕಡಿಮೆ).

ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?ಕುಸಿದ ಗ್ರಾಹಕರ ವಿಶ್ವಾಸ, ಆರ್ಥಿಕತೆ ಬಗ್ಗೆ ಏನೆಂದುಕೊಳ್ತಾರೆ ಗೊತ್ತಾ?

2017ರಲ್ಲಿ ಭಾರತ ಶೇ 6.7ರಷ್ಟು ಆರ್ಥಿಕ ಬೆಳವಣಿಗೆ ಕಂಡಿತ್ತು ಎಂದು ಐಎಂಎಫ್ ತನ್ನ ವರ್ಲ್ಡ್ ಎಕನಾಮಿಕ್ ಔಟ್‌ಲುಕ್ (ಡಬ್ಲ್ಯೂಇಒ) ವರದಿಯಲ್ಲಿ ತಿಳಿಸಿದೆ.

ಏಪ್ರಿಲ್‌ ಮೊದಲ ವರದಿ ನೀಡಿದ ಬಳಿಕ ಉಂಟಾದ ಕಚ್ಚಾ ತೈಲದ ಬೆಲೆಯಲ್ಲಿನ ಏರಿಕೆ ಹಾಗೂ ಜಾಗತಿಕ ಹಣಕಾಸು ಸ್ಥಿತಿಯಲ್ಲಿನ ಬಿಗಿತನಗಳ ಕಾರಣದಿಂದ ಈ ಬೆಳವಣಿಗೆ ಅಂದಾಜಿನಲ್ಲಿ ತುಸು ಕುಸಿತ ಕಾಣಲಿದೆ ಎಂದು ಅದು ವಿವರಿಸಿದೆ.

ಮಧ್ಯಮ ಅವಧಿ ಬೆಳವಣಿಗೆ ಏರಿಕೆ

ಮಧ್ಯಮ ಅವಧಿ ಬೆಳವಣಿಗೆ ಏರಿಕೆ

ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆಯ ಜಾರಿಯಂತಹ ಆರ್ಥಿಕ ಆಘಾತಗಳಿಂದ ಚೇತರಿಸಿಕೊಂಡು ಹೂಡಿಕೆಯಲ್ಲಿನ ಬಲವೃದ್ಧಿ ಹಾಗೂ ಖಾಸಗಿ ಅನುಭೋಗದ ಹೆಚ್ಚಳದಿಂದ ಈ ಪ್ರಗತಿ ಸಾಧ್ಯವಾಗುತ್ತಿದೆ ಎಂದು ಅದು ತಿಳಿಸಿದೆ.

ರಚನಾತ್ಮಕ ಸುಧಾರಣೆಗಳ ಲಾಭ ಪಡೆದ ಮಧ್ಯಮ ಅವಧಿ ಬೆಳವಣಿಗೆಯು ಶೇ 7.75ರ ಮಟ್ಟದಲ್ಲಿಯೇ ಪ್ರಬಲವಾಗಿ ಉಳಿದಿದೆ. ಆದರೆ, 2018ರ ಏಪ್ರಿಲ್‌ಗೆ ಹೋಲಿಸಿದರೆ ಶೇ .5ರಷ್ಟು ಅತ್ಯಲ್ಪ ಪ್ರಮಾಣದ ಕುಸಿತ ಕಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಾಮೂಲೆಂದ ಅರುಣ್ ಜೇಟ್ಲಿಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಾಮೂಲೆಂದ ಅರುಣ್ ಜೇಟ್ಲಿ

ಚೀನಾವನ್ನು ಹಿಂದಿಕ್ಕಲಿದೆ

ಚೀನಾವನ್ನು ಹಿಂದಿಕ್ಕಲಿದೆ

ಈ ಭವಿಷ್ಯಗಳು ನಿಜವಾದರೆ, ಜಗತ್ತಿನ ಅತ್ಯಂತ ವೇಗ ಬೆಳವಣಿಗೆಯ ಪ್ರಮುಖ ಆರ್ಥಿಕತೆಗಳಲ್ಲಿ ಒಂದು ಎಂಬ ಗುರುತನ್ನು ಮರಳಿ ಪಡೆದುಕೊಳ್ಳಲಿದೆ. 2018ರಲ್ಲಿ ಚೀನಾವನ್ನು ಶೇ 0.7ಕ್ಕಿಂತಲೂ ಅಧಿಕ ಅಂಕಗಳಿಂದ ಹಿಂದಿಕ್ಕಲಿದ್ದು, 2019ರಲ್ಲಿ ಶೇ 1.2ರಷ್ಟು ಅಧಿಕ ಅಂಕದೊಂದಿಗೆ ಪ್ರಗತಿ ಕಾಣಲಿದೆ.

2017ರಲ್ಲಿ ಚೀನಾ ಅತಿ ವೇಗದ ಆರ್ಥಿಕ ಪ್ರಗತಿಯ ದೇಶ ಎಂದೆನಿಸಿಕೊಂಡಿತ್ತು. ಅದು ಭಾರತಕ್ಕಿಂತ ಶೇ 0.2ರಷ್ಟು ಮುಂದಿತ್ತು. ಐಎಂಎಫ್ ತನ್ನ ವಾರ್ಷಿಕ ಜಾಗತಿಕ ಆರ್ಥಿಕ ಮುನ್ನೋಟದಲ್ಲಿ ಭಾರತ ಮತ್ತು ಚೀನಾಗಳ ಬೆಳವಣಿಗೆ ಅಂದಾಜನ್ನು ಶೇ 0.4 ಮತ್ತು ಶೇ 0.32ಕ್ಕೆ ತಗ್ಗಿಸಿದೆ.

ಮೊದಲ ತ್ರೈಮಾಸಿಕ ಜಿಡಿಪಿ ನೋಡಿ ಖುಷಿ ಪಡುವ ಮೊದಲು...ಮೊದಲ ತ್ರೈಮಾಸಿಕ ಜಿಡಿಪಿ ನೋಡಿ ಖುಷಿ ಪಡುವ ಮೊದಲು...

ಚೀನಾ ಪ್ರಗತಿ ಕುಂಠಿತ

ಚೀನಾ ಪ್ರಗತಿ ಕುಂಠಿತ

ಚೀನಾದ ಬೆಳವಣಿಗೆಯು ಏಪ್ರಿಲ್‌ಗಿಂತಲೂ 2019ರಲ್ಲಿ ಕಡಿಮೆ ಇರಲಿದೆ. ಚೀನಾದ ವಸ್ತುಗಳ ಆಮದಿನ ಮೇಲೆ ಅಮೆರಿಕದ ನಿರ್ಬಂಧಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

2017ರಲ್ಲಿ ಚೀನಾದ ಪ್ರಗತಿಯನ್ನು ಶೇ 6.9ರ ಸುತ್ತಮುತ್ತ ಅಂದಾಜಿಸಲಾಗಿತ್ತು. 2018ರಲ್ಲಿ ಶೇ 6.6ರಷ್ಟು ಮತ್ತು 2019ರಲ್ಲಿ ಶೇ 6.2ರ ಬೆಳವಣಿಗೆಯನ್ನು ಕಾಣುವ ನಿರೀಕ್ಷೆಯಿದೆ. ಕುಂಠಿತವಾಗಿರುವ ಆಂತರಿಕ ಬೆಳವಣಿಗೆ ಪ್ರಮಾಣ ಮತ್ತು ಅವಶ್ಯಕ ಹಣಕಾಸು ನಿಯಂತ್ರಣ ಕ್ರಮಗಳಿಂದಾಗಿ ಈ ಹಿನ್ನಡೆ ಉಂಟಾಗಲಿದೆ ಎಂದು ವರದಿ ತಿಳಿಸಿದೆ.

ಶೇ 3.7ರ ಬೆಳವಣಿಗೆ

ಶೇ 3.7ರ ಬೆಳವಣಿಗೆ

ಪ್ರಸಕ್ತ ವರ್ಷ ಮತ್ತು ಮುಂದಿನ ವರ್ಷದಲ್ಲಿನ ಅಂತಾರಾಷ್ಟ್ರೀಯ ಬೆಳವಣಿಗೆ ದರವು ಶೇ 3.7ರಷ್ಟು ಇರಲಿದೆ. ಕಳೆದ ವರ್ಷದ ಲೆಕ್ಕಾಚಾರಕ್ಕಿಂತ ಇದು ಶೇ 0.2ರಷ್ಟು ಕಡಿಮೆಯಾಗಲಿದೆ. 2017ರಲ್ಲಿ ಇಷ್ಟೇ ಪ್ರಮಾಣದ ಪ್ರಗತಿಯನ್ನು ಸಾಧಿಸಲಾಗಿತ್ತು.

ಅಮೆರಿಕದ ಬೆಳವಣಿಗೆ ದರವನ್ನು 2018ರಲ್ಲಿ ಶೇ 2.9 ಮತ್ತು 2019ರಲ್ಲಿ ಶೇ 2.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಹಣದುಬ್ಬರ ಏರಿಕೆ ಭೀತಿ

ಹಣದುಬ್ಬರ ಏರಿಕೆ ಭೀತಿ

ಜಿಎಸ್‌ಟಿ, ಹಣದುಬ್ಬರ ನಿಯಂತ್ರಣ ಚೌಕಟ್ಟು, ದಿವಾಳಿತನದ ಸಂಹಿತೆ ಮತ್ತು ವಿದೇಶಿ ಹೂಡಿಕೆ ನಿಯಮಾವಳಿಗಳ ಸಡಿಲಿಕೆ ಹಾಗೂ ವ್ಯವಹಾರ ಪ್ರಕ್ರಿಯೆ ಸರಳೀಕರಣಗಳಂತಹ ವಿವಿಧ ಪ್ರಮುಖ ಸುಧಾರಣೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಅಳವಡಿಸಲಾಗಿದೆ.

ಭಾರತದಲ್ಲಿನ ಹಣದುಬ್ಬರದ ಪ್ರಮಾಣ ಏರಿಕೆ ಮಟ್ಟದಲ್ಲಿದೆ. 2017/18ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣವನ್ನು ಶೇ 3.6ರಷ್ಟು ಅಂದಾಜಿಸಲಾಗಿತ್ತು. 2018-19ನೇ ಸಾಲಿನಲ್ಲಿ ಅದು ಶೇ 4.7ಕ್ಕೆ ತಲುಪುವ ನಿರೀಕ್ಷೆಯಿದೆ. 2016-17ರಲ್ಲಿ ಹಣದುಬ್ಬರದ ಪ್ರಮಾಣ ಶೇ 4.5ರಷ್ಟು ದಾಖಲಾಗಿತ್ತು.

English summary
International Monetary Fund (IMF) predicted India's growth rate for 2018 to 7.3% and 7.4% for 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X