• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಿಸ್ಡ್ ಕಾಲ್ ಕೊಟ್ಟು ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಿ

|

ನವದೆಹಲಿ, ಜನವರಿ 2: ಇಂಡೇನ್ ಗ್ಯಾಸ್ ಗ್ರಾಹಕರಿಗೆ ಇನ್ನು ಎಲ್‌ಪಿಜಿ ಅಡುಗೆ ಅನಿಲ ರೀಫಿಲ್ ಸಿಲಿಂಡರ್‌ಗಳ ಬುಕಿಂಗ್ ಬಹಳ ಸುಲಭ. ಕೇವಲ ಮಿಸ್ ಕಾಲ್ ಕೊಟ್ಟರೂ ಸಾಕು ನಿಮ್ಮ ಸಿಲಿಂಡರ್ ಬುಕ್ ಆಗಲಿದೆ. ದೇಶದ ಯಾವುದೇ ಮೂಲೆಯಲ್ಲಿರುವ ಇಂಡೇನ್ ಗ್ರಾಹಕರು 84549 55555 ಸಂಖ್ಯೆಗೆ ಒಂದೇ ಒಂದು ಮಿಸ್ಡ್ ಕಾಲ್ ಕೊಟ್ಟು ರೀಫಿಲ್ ಬುಕಿಂಗ್ ಮಾಡಬಹುದಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ಶುಕ್ರವಾರ ತಿಳಿಸಿದೆ.

ಮಿಸ್ಡ್ ಕಾಲ್‌ಗಳ ಮೂಲಕ ಬುಕ್ಕಿಂಗ್ ರೀಫಿಲ್ ಮಾಡುವುದು ಗ್ರಾಹಕ ಕೇಂದ್ರಗಳಿಗೆ ಕರೆ ಮಾಡಿ ಸುದೀರ್ಘ ಸಮಯ ಕಾಯುವುದಕ್ಕಿಂತ ವೇಗವಾಗಿ ಬುಕ್ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಐವಿಆರ್‌ಎಸ್ ಕರೆಗಳಿಗೆ ಸಾಮಾನ್ಯ ಕರೆಗಳ ದರಗಳು ಅನ್ವಯವಾಗುವುದರಿಂದ ಈ ಹೊಸ ವಿಧಾನದಲ್ಲಿ ಯಾವುದೇ ಕರೆ ದರ ಕಡಿತವಾಗುವುದಿಲ್ಲ. ಐವಿಆರ್ಎಸ್ ಕರೆ ಹೊಂದಿಲ್ಲದವರು, ಕರೆಮಾಡಲು ಕಷ್ಟಪಡುವ ವೃದ್ಧ ಗ್ರಾಹಕರು ಹಾಗೂ ಗ್ರಾಮೀಣ ಭಾಗದ ದೊಡ್ಡ ಸಂಖ್ಯೆಯ ಜನರಿಗೆ ಇದರಿಂದ ನೆರವಾಗಲಿದೆ.

2021ರಿಂದ ಎಲ್‌ಪಿಜಿ ಸಿಲಿಂಡರ್ ದರ ವಾರಕ್ಕೊಮ್ಮೆ ಪರಿಷ್ಕರಣೆ?

ಮಿಸ್ಡ್ ಕಾಲ್ ಮೂಲಕ ಹೊಸ ಎಲ್‌ಪಿಸಿ ಸಂಪರ್ಕ ಪಡೆದುಕೊಳ್ಳುವ ಸೇವೆಯನ್ನು ಕೂಡ ಭುವನೇಶ್ವರದಲ್ಲಿ ಶುಕ್ರವಾರ ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ ದೇಶದಾದ್ಯಂತ ವಿಸ್ತರಿಸಲಾಗುತ್ತದೆ.

ಒಡಿಶಾದ ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಎಲ್‌ಪಿಜಿ ಗ್ರಾಹಕರಿಗೆ ಮಿಸ್ಡ್ ಕಾಲ್ ಸೌಲಭ್ಯವನ್ನು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಇಂಡಿಯನ್ ಆಯಿಲ್‌ನ ಎಕ್ಸ್‌ಪಿ100 ಬ್ರ್ಯಾಂಡಿನ ವಿಶ್ವದರ್ಜೆ ಪ್ರೀಮಿಯಂ ಗುಣಮಟ್ಟದ ಪೆಟ್ರೋಲ್ (ಒಕ್ಟೇನ್ 100) ಎರಡನೆಯ ಹಂತಕ್ಕೆ ಚಾಲನೆ ನೀಡಿದರು.

ವಾಟ್ಸಪ್ ಮೂಲಕ ಹೊಸ ಸಿಲಿಂಡರ್ ಬುಕ್ ಮಾಡುವುದು ಹೇಗೆ?

ಕಳೆದ ತಿಂಗಳು ಆರಂಭವಾದ ಬ್ರ್ಯಾಂಡೆಡ್ ಎಕ್ಸ್‌ಪಿ100 ಪೆಟ್ರೋಲ್, ಈಗ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತಾ, ಕೊಚ್ಚಿ, ಇಂದೋರ್ ಮತ್ತು ಭುವನೇಶ್ವರದಲ್ಲಿ ಕೂಡ ಲಭ್ಯವಾಗುತ್ತಿದೆ.

English summary
Indane gas consumers now can book a cooking gas lpg refill cylinders by justi a missed call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X