ನಿರಾಶೆ! ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಇಲ್ಲ

ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2018-19ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 01) ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಜೇಟ್ಲಿ ಹೇಳಿದ ಆದಾಯ ತೆರಿಗೆ ಲೆಕ್ಕಾಚಾರದ ಸಂಫೂರ್ಣ ವಿವರ ಇಲ್ಲಿದೆ.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಇತ್ತು. ಆದರೆ, ಮೆಡಿಕಲ್ ಮರು ಪಾವತಿ ಭತ್ಯೆ ಮಿತಿ ಏರಿಕೆ ಮಾತ್ರ ಹೆಚ್ಚಳ ಮಾಡಲಾಗಿದೆ.

ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಜಾರಿಗೊಳಿಸಲಿದೆ. ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ತೆರಿಗೆ ಪಾವತಿಯಲ್ಲಿ ಮಾತ್ರ ಬದಲಾವಣೆಯಾಗಿದೆ.

ಮುಖ್ಯಾಂಶಗಳು:
* ಆದಾಯ ತೆರಿಗೆ ಕಟ್ಟುವವರ ಸಂಖ್ಯೆ ಶೇ 11ರಷ್ಟು ಏರಿಕೆಯಾಗಿದೆ.
* 81.85 ಲಕ್ಷ ಮಂದಿ ತೆರಿಗೆ ಪಾವತಿಸಿದ್ದಾರೆ.
* 1.44 ಲಕ್ಷ ಕೋಟಿ ರು ತೆರಿಗೆ ಸಂಗ್ರಹವಾಗಿದೆ.

* ಮೆಡಿಕಲ್ (Standard deduction)ಮರು ಪಾವತಿ ಭತ್ಯೆ 40 ಸಾವಿರ ರುಗೆ ಏರಿಕೆ
* 10,000 ರಿಂದ 15,000 ರು ಆದಾಯ- ಹಿರಿಯ ನಾಗರಿಕರಿಗೆ ಟಿಡಿಎಸ್ ಕಡಿತ ಇಲ್ಲ, ಆರ್ ಡಿ ಮೇಲೆ ಕಡಿತ ಇಲ್ಲ.

* 80 Dಅಡಿಯಲ್ಲಿ ಹಿರಿಯ ನಾಗರಿಕ ವಾರ್ಷಿಕ 50 ,000 ರು ತನಕ ಮೆಡಿಕಲ್ ವಿಮೆಯಲ್ಲಿ ವಿನಾಯಿತಿ ನೀಡಲಾಗಿದೆ.

* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.

* ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

* 1 ಕೋಟಿ ರು ಅಧಿಕ ಸೂಪರ್ ರಿಚ್ ಗ್ರಾಹಕರಿಗೆ ಶೇ 15ರಷ್ಟು ಸರ್ಚ್ ಚಾರ್ಜ್ ಏರಿಕೆ.

* 250 ಕೋಟಿ ಮೌಲ್ಯದ ಟರ್ನ್ ಓವರ್ ಯುಳ್ಳ ಕಂಪನಿಗಳಿಗೂ ಶೇ25ರ ಕಾರ್ಪೊರೇಟ್ ತೆರಿಗೆ ವಿನಾಯಿತಿ ವಿಸ್ತರಣೆ.

Income Tax Rates For Financial Year (FY) 2018-19 And Assessment Year (AY) 2017-18

ಆರ್ಥಿಕ ವರ್ಷ: ಏಪ್ರಿಲ್ 01ರಿಂದ ಮಾರ್ಚ್ 31ರ ಅವಧಿ.
ತೆರಿಗೆ ಪಾವತಿ ವರ್ಷ: ಒಂದು ಆರ್ಥಿಕ ವರ್ಷ ಅವಧಿಯಲ್ಲಿ ತೆರಿಗೆ ಪಾವತಿಗೆ ಒಳಪಡುವ ಕಾಲ (assessment year)

ಉದಾಹರಣೆ: 5 ಲಕ್ಷ ರು ಆದಾಯವಿದ್ದವರಿಗೆ ಏಪ್ರಿಲ್ 2018 ರಿಂದ ಮಾರ್ಚ್ 31, 2019ರ ತನಕ ತೆರಿಗೆ ಪಾವತಿ ವರ್ಷವಾಗಿದೆ. ಜುಲೈ 31, 2019 ರ ತನಕ ಆದಾಯ ತೆರಿಗೆ ಪಾವತಿಗೆ ಅವಕಾಶವಿರುತ್ತದೆ. 2018-19 ರ assessment year ಇದಾಗಿರುತ್ತದೆ. ತೆರಿಗೆ ದರವು ಸರ್ ಚಾರ್ಜ್, ಎಜುಕೇಷನ್ ಸೆಸ್, ಸೆಕಂಡರಿ ಹಾಗೂ ಉನ್ನತ ಶಿಕ್ಷಣ ಸೆಸ್ ನಿಂದ ಹೊರತುಪಡಿಸಲಾಗಿದೆ.

ತೆರಿಗೆದಾರರು ಹಾಗೂ ಮಹಿಳೆಯರು
Income Tax Slab (in Rs.) Tax Slab
0 to Rs 2,50,000 No tax
2,50,001 to 5,00,000 5%
5,00,001 to 10,00,000 20%
Above 10,00,000 30%

________________________________

ಹಿರಿಯ ನಾಗರಿಕರು (60 ವರ್ಷದಿಂದ 80 ವರ್ಷ ತನಕ)
Income Tax Slab (in Rs.) Tax Slab
0 to Rs 3,00,000 No tax
3,00,001 to 5,00,000 10%
5,00,001 to 10,00,000 20%
Above 10,00,000 30%

__________________________________________

ಹಿರಿಯ ನಾಗರಿಕರು (80 ವರ್ಷ ಅದಕ್ಕಿಂತ ಹೆಚ್ಚು)
Income Tax Slab (in Rs.) Tax Slab
0 to Rs 5,00,000 No tax
5,00,001 to 10,00,000 20%
Above 10,00,000 30%
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+