ಭಾರತೀಯ ಕಂಪನಿಗಳ ಸಿಇಒಗಳ ವೇತನ 416 ಪಟ್ಟು ಹೆಚ್ಚು: ಸಮೀಕ್ಷೆ

Posted By:
Subscribe to Oneindia Kannada

ನವದೆಹಲಿ, ಜುಲೈ 18: ಭಾರತೀಯ ಕಂಪನಿಗಳಲ್ಲಿನ ಸಿಇಒಗಳ ಪಡೆಯುತ್ತಿರುವ ವೇತನದ ಸರಾಸರಿ ಮೊತ್ತವು ಆಯಾ ಕಂಪನಿಗಳಲ್ಲಿನ ಸಾಮಾನ್ಯ ದರ್ಜೆಯ ಅಥವಾ ಕೆಳಮಟ್ಟದ ನೌಕರರ ಸರಾಸರಿ ವೇತನಕ್ಕಿಂತ 416 ಪಟ್ಟು ಹೆಚ್ಚಿರುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಡೆವಲಪ್ ಮೆಂಟ್ ಫಿನಾನ್ಸ್ ಇಂಟರ್ ನ್ಯಾಷನಲ್ ಹಾಗೂ ಆಕ್ಸ್ ಫಾಮ್ ಎಂಬ ಸಂಸ್ಥೆಯು ನಡೆಸಿರುವ ಈ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

30 ನಿಮಿಷದಲ್ಲಿ 7 ಸಾವಿರ ಕೋಟಿ ಕಳೆದುಕೊಂಡ ಎಲ್ ಐಸಿǃ

ವಿಶ್ವದ ನಾನಾ ದೇಶಗಳಲ್ಲಿ, ಕಳೆದೊಂದು ವರ್ಷದಿಂದ ನಡೆಸಲಾದ ಸಮೀಕ್ಷೆಯ ಫಲವಾಗಿ ವಿಶ್ವದಲ್ಲಿ 'ವೇತನ ತಾರತಮ್ಯ ರಹಿತ' ರಾಷ್ಟ್ರಗಳ ಪಟ್ಟಿಯೊಂದನ್ನು ತಯಾರಿಸಲಾಗಿದೆ. 152 ರಾಷ್ಟ್ರಗಳಿರುವ ಈ ಪಟ್ಟಿಯಲ್ಲಿ ಭಾರತವು 132ನೇ ಸ್ಥಾನ ಹೊಂದಿದ್ದು, ವೇತನ ತಾರತಮ್ಯ ಭಾರತದಲ್ಲಿ ಅಗಾಧವಾಗಿದೆಯೆಂಬುದು ಇದರಲ್ಲಿ ಸಾಬೀತಾಗಿದೆ.

ಪಟ್ಟಿಯಲ್ಲಿ ಏನಿದೆ, ಯಾವ್ಯಾವ ದೇಶಗಳಿಗೆ ಈ ಪಟ್ಟಿಯಲ್ಲಿ ತಮ್ಮಲ್ಲಿನ ವೇತನ ತಾರತಮ್ಯ ನಿವಾರಿಸಿವೆ, ಭಾರತದಲ್ಲಿ ಪರಿಸ್ಥಿತಿ ಹೇಗಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಕಂಪನಿಗಳ ದೃಷ್ಟಿಕೋನ

ಕಂಪನಿಗಳ ದೃಷ್ಟಿಕೋನ

ಸಾಮಾನ್ಯವಾಗಿ ಕಂಪನಿಗಳು, ನೌಕರರು ಹಾಗೂ ಅಧಿಕಾರಗಳ ನಡುವೆ ದೊಡ್ಡ ಕಂದಕವನ್ನು ಕೃತಕವಾಗಿ ಕಟ್ಟಿಕೊಳ್ಳುವುದೇ ವೇತನ ತಾರತಮ್ಯದ ಹಿಂದಿನ ಪ್ರಮುಖ ಕಾರಣ. ಹೀಗಾಗಿ, ಭಾರತದಂತಹ ರಾಷ್ಟ್ರದಲ್ಲಿ ವೇತನ ತಾರತಮ್ಯ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಭಾರತ 132ನೇ ಸ್ಥಾನ ಪಡೆದಿದ್ದರೆ, ಅಮೆರಿಕದಲ್ಲಿ ಈ ವೇತನ ತಾರತಮ್ಯವು ಭಾರತಕ್ಕಿಂತ ಹೆಚ್ಚಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಯಾವುದೇ ಕ್ರಮಗಳಿಲ್ಲ

ಭಾರತದಲ್ಲಿ ಯಾವುದೇ ಕ್ರಮಗಳಿಲ್ಲ

ಇದರ ಜತೆಯಲ್ಲೇ ಸರ್ಕಾರದಿಂದಲೂ ಕೆಲವಾರು ಸುಧಾರಣೆಗಳು ಆಗಬೇಕಿವೆ. ಮಾರುಕಟ್ಟೆಯಲ್ಲಿ ದರ ಇಳಿಕೆ, ತೆರಿಗೆ ಇಳಿಕೆ, ನೌಕರರ ಸುರಕ್ಷೆ ಹಾಗೂ ಸುಲಭ ಜೀವನ ನಿರ್ವಹಣೆಯಂಥ ಹೊಸ ಸುಧಾರಣೆಗಳನ್ನು ತರಬೇಕಿದೆ. ಆದರೆ, ಭಾರತದಲ್ಲಿ ಇಂಥ ಗರಿಷ್ಠ ಮಟ್ಟದ ಕ್ರಮಗಳು ಜಾರಿಗೊಂಡಿಲ್ಲ ಎಂದು ಸಮೀಕ್ಷಾ ವರದಿಯಲ್ಲಿ ವಿಷಾದ ವ್ಯಕ್ತಪಡಿಸಲಾಗಿದೆ.

ಅಲ್ಲೆಲ್ಲಾ ವೇತನ ತಾರತಮ್ಯಗಳಿಲ್ಲ

ಅಲ್ಲೆಲ್ಲಾ ವೇತನ ತಾರತಮ್ಯಗಳಿಲ್ಲ

ಸ್ವೀಡನ್, ಚಿಲಿ, ನಮೀಬಿಯಾ ಹಾಗೂ ಉರುಗ್ವೆಯಂಥ ದೇಶಗಳು ಆಯಾ ದೇಶಗಳಲ್ಲಿನ ಖಾಸಗಿ ಕಂಪನಿಗಳ ಮೇಲೆ ಲಗಾಮು ಹಾಕಿ, ತೆರಿಗೆಗಳನ್ನು ಇಳಿಸಿ, ಅತಿ ಕಡಿಮೆ ಸಂಬಳ ಪಡೆಯುವ ನೌಕರರನೂ ನೀಡುವ ಸೋಷಿಯಲ್ ಸ್ಪೆಂಡಿಂಗ್ ಅನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿವೆ. ಇದರಿಂದಾಗಿ, ಅಲ್ಲಿ ಅಧಿಕಾರಿಗಳ ಹಾಗೂ ಕೆಳ ದರ್ಜೆಯ ನೌಕರರ ವೇತನಗಳಲ್ಲಿ ಅಂಥಾ ವ್ಯತ್ಯಾಸವೇನಿಲ್ಲ ಎನ್ನಲಾಗಿದೆ.

ನೌಕರರಿಗೆ ಸಾಮಾಜಿಕ ಭದ್ರತೆ ಕಡಿಮೆ

ನೌಕರರಿಗೆ ಸಾಮಾಜಿಕ ಭದ್ರತೆ ಕಡಿಮೆ

ವೇತನ ತಾರತಮ್ಯದಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ಕ್ರಮ ಕೈಗೊಳ್ಳುವಲ್ಲಿ ಭಾರತ, ನೈಜೀರಿಯಾದಂತಹ ರಾಷ್ಟ್ರಗಳು ವಿಫಲವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ದೇಶಗಳಲ್ಲಿ ಉದ್ದಿಮೆದಾರರ ಹಿತ ಕಾಪಾಡುವ ನಿಟ್ಟಿನಲ್ಲಿಯೇ ನಿಯಮಾವಳಿಗಳು ಜಾರಿಯಲ್ಲಿದ್ದು, ಖಾಸಗಿ ಕಂಪನಿಗಳ ಮೇಲೆ ಸರ್ಕಾರಗಳ ನಿಯಂತ್ರಣವಿಲ್ಲದಿರುವಿಕೆ, ಕಾರ್ಮಿಕ ಕಾನೂನುಗಳ ಅತಿ ಕಡಿಮೆ ಚಾಲ್ತಿ ಹಾಗೂ ನೌಕರಿ ವಿಚಾರದಲ್ಲಿ ಕಳಪೆ ಸಾಮಾಜಿಕ ಭದ್ರತೆ - ಈ ಕಾರಣಗಳಿಂದಲೇ ಈ ದೇಶಗಳಲ್ಲಿ ವೇತನ ತಾರತಮ್ಯ ಹೆಚ್ಚಿದೆ ಎಂದು ಹೇಳಲಾಗಿದೆ.

RBI Announces, 1 Rupee Note Will Be Printed Again With Special Features
ಭಾರತಕ್ಕೆ ಈ ಪಟ್ಟಿಯಲ್ಲಿ 149ನೇ ಸ್ಥಾನ

ಭಾರತಕ್ಕೆ ಈ ಪಟ್ಟಿಯಲ್ಲಿ 149ನೇ ಸ್ಥಾನ

ಇಷ್ಟೇ ಅಲ್ಲ, ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸಾಮಾಜಿಕ ಸುರಕ್ಷೆತೆಗಾಗಿ (ಶಿಕ್ಷಣ, ಆರೋಗ್ಯ) ವ್ಯಯಿಸುವ ಧನದ ಪ್ರಮಾಣ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ. ಇದರದ್ದೇ ಒಂದು ಪ್ರತ್ಯೇಕ ಪಟ್ಟಿಯನ್ನು ತಯಾರಿಸಲಾಗಿದ್ದು, ಭಾರತ 149ನೇ ಸ್ಥಾನ ಪಡೆದಿದೆ. ಅಚ್ಚರಿಯ ವಿಚಾರವೆಂದರೆ, ಭಾರತಕ್ಕಿಂತ ಬಡರಾಷ್ಟ್ರಗಳೆಂದು ಹೇಳಲಾಗಿರುವ ಯೆಮೆನ್, ಸೆನೆಗಲ್, ಕಾಂಗೋ ಹಾಗೂ ಸರ್ಬಿಯಾ ದೇಶಗಳಿಗಿಂತ ಈ ವಿಚಾರದಲ್ಲಿ ಭಾರತ ಹಿಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The seriousness of India's commitment to end income disparity has been ranked 132nd out of 152 nations owing to low spending on health and education, a crumbling tax system and wide gaps in gender pay.
Please Wait while comments are loading...