ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೋಡಾಫೋನ್- ಐಡಿಯಾ ವೀಲಿನ, 2ನೇ ಸ್ಥಾನಕ್ಕೆ ಕುಸಿದ ಏರ್ಟೆಲ್

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 31 : ಸರಿ ಸುಮಾರು 15 ವರ್ಷಗಳ ಬಳಿಕ ಭಾರ್ತಿ ಏರ್ಟೆಲ್ ಸಂಸ್ಥೆ, ಟೆಲಿಕಾಂ ಮಾರುಕಟ್ಟೆಯ ಅಗ್ರಸ್ಥಾನದಿಂದ ಕೆಳಗಿಳಿದಿದೆ. ವೋಡಾಫೋನ್ -ಐಡಿಯಾ ನಡುವಿನ ವಿಲೀನಕ್ಕೆ ನ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ ಸಿಎಲ್ ಟಿ) ಒಪ್ಪಿಗೆ ಸೂಚಿಸಿದೆ.

ಭಾರತದ ಸುಮಾರು 37 ಬಿಲಿಯನ್ ಡಾಲರ್ ಟೆಲಿಕಾಂ ಸೇವಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ಮಹತ್ವ ಹೆಜ್ಜೆ ಇಟ್ಟಿದೆ. ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

Idea Cellular merge with Vodafone India become largest telecom operator

ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ 19ರಷ್ಟು ಪಾಲು ಹೊಂದಿರುವ ಐಡಿಯಾ ಒಂದಾಗಿದ್ದು, ಇನ್ಮುಂದೆ ವೋಡಾಫೋನ್ ಐಡಿಯಾ ಎಂದು ಕರೆಯಲ್ಪಡುತ್ತದೆ. ಮಾರ್ಚ್ 2017ರಿಂದ ಆರಂಭವಾದ ವಿಲೀನ ಪ್ರಕ್ರಿಯೆಗೆ ಈಗ ಅಂತಿಮ ರೂಪ ಸಿಕ್ಕಿದೆ.

ವೊಡಾಫೋನ್ ಫ್ರೀ ಆಫರ್ ಏನು ಕೊಡುತ್ತೆ: ಟ್ವಿಟ್ಟರಲ್ಲಿ ಪ್ರಶ್ನೆವೊಡಾಫೋನ್ ಫ್ರೀ ಆಫರ್ ಏನು ಕೊಡುತ್ತೆ: ಟ್ವಿಟ್ಟರಲ್ಲಿ ಪ್ರಶ್ನೆ

ಸಂಪೂರ್ಣ ವಿಲೀನದ ನಂತರ ವೋಡಾಫೋನ್ ಸಂಸ್ಥೆ ಶೇ 45.2 ರಷ್ಟು ಪಾಲು ಹಾಗೂ ಐಡೀಯಾ ಶೇ 26ರಷ್ಟು ಪಾಲು ಹೊಂದಲಿವೆ. ಬಲೇಶ್ ಶರ್ಮ ಅವರು ವಿಲೀನದ ಬಳಿಕ ಹೊಸ ಕಂಪನಿ ವೋಡಾಫೋನ್ ಐಡಿಯಾದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.


ವೋಡಾಫೋನ್ 15,000ಕ್ಕೂ ಅಧಿಕ ಬ್ರಾಂಡೆಡ್ ಸ್ಟೋರ್ ಗಳು ಹಾಗೂ 1.7 ಮಿಲಿಯನ್ ಗೂ ಅಧಿಕ ಟಚ್ ಪಾಯಿಂಟ್ ಗಳನ್ನು ಹೊಂದಿದೆ.

ಹೀಗಾಗಿ, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ. ಸದ್ಯ ಶೇ 33ರಷ್ಟು ಪಾಲುಹೊಂದಿರುವ ಭಾರ್ತಿ ಏರ್ ಟೆಲ್ ಲಿಮಿಟೆಡ್ ಸಂಸ್ಥೆ ಅಗ್ರಸ್ಥಾನದಲ್ಲಿತ್ತು.

English summary
The mega-merger of Vodafone India and Idea Cellular has been cleared by the National Company Law Tribunal (NCLT), paving the way for the creation of India's largest telecom operator worth over $23 billion with a 35 percent market share.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X