ಐಬಿಎಂ ನಲ್ಲಿ ಉದ್ಯೋಗ ಕಡಿತವಿಲ್ಲ: ಕಂಪನಿ ಸ್ಪಷ್ಟನೆ

Posted By:
Subscribe to Oneindia Kannada

ನವದೆಹಲಿ, ಮೇ 17: ಭಾರತೀಯ ಐಟಿ ವಲಯವನ್ನು ತಲ್ಲಣಗೊಳಿಸುತ್ತಿರುವ 'ಉದ್ಯೋಗ ಕಡಿತ'ದ ಸಮಸ್ಯೆ ಐಬಿಎಂ ಸಂಸ್ಥೆಯನ್ನೇನೂ ಬಾಧಿಸದು. ಹಾಗಾಗಿ, ಕಂಪನಿಯ ಉದ್ಯೋಗಿಗಳನ್ನು ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಆ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಬಿಎಂ ಕಂಪನಿಯು ತನ್ನಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳಲ್ಲಿ ಸುಮಾರು 5000 ಮಂದಿಯನ್ನು ಮನೆಗೆ ಕಳುಹಿಸುವ ನಿರ್ಧಾರ ಕೈಗೊಂಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯ ಅಧಿಕಾರಿ ಹೀಗೆ ಸ್ಪಂದಿಸಿದ್ದಾರೆ.

IBM India Denies Report Of 5,000 Possible Layoffs In Coming Months

ಖಾಸಗಿ ಟಿವಿ ವಾಹಿನಿಯೊಂದಕ್ಕೆ ಇ- ಮೇಲ್ ಮೂಲಕ ಸ್ಪಷ್ಟನೆ ನೀಡಿರುವ ಐಬಿಎಂ ಕಂಪನಿಯ ಭಾರತ ಮಾರುಕಟ್ಟೆಯ ವಕ್ತಾರ, ''ಕೆಲವು ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡಿದಂತೆ ಐಬಿಎಂನಲ್ಲೂ ಉದ್ಯೋಗ ಕಡಿತವಾಗುತ್ತದೆ ಎಂಬ ವದಂತಿಗಳು ಸತ್ಯಕ್ಕೆ ದೂರವಾದವು. ನಮ್ಮ ಆಡಳಿತ ಮಂಡಳಿಗೆ ಅಂಥ ಯಾವುದೇ ಆಲೋಚನೆಗಳಿಲ್ಲ'' ಎಂದಿದ್ದಾರೆ.

ಮಾಹಿತಿ ತಂತ್ರಜ್ಞಾನ ವಲಯದ ದೈತ್ಯ ಕಂಪನಿಗಳಾದ ಕಾಗ್ನಿಝೆಂಟ್, ವಿಪ್ರೋ, ಇನ್ಫೋಸಿಸ್ ಮುಂತಾದ ಕಂಪನಿಗಳು ತಮ್ಮಲ್ಲಿನ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯ ಮಟ್ಟದಲ್ಲಿ ಇಳಿಕೆ ಮಾಡಲು ಮುಂದಾಗಿವೆ.

ಗುಣಮಟ್ಟದ ಸೇವೆಯ ಆಧಾರದಲ್ಲಿ ಈ ಉದ್ಯೋಗ ಕಡಿತ ಯಜ್ಞಕ್ಕೆ ಆ ಕಂಪನಿಗಳು ಕೈಹಾಕಿರುವುದರಿಂದ ಸಾವಿರಾರು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ, ಕೆಲಸ ಕಳೆದುಕೊಳ್ಳುವವರಿದ್ದಾರೆ.

ಮುಂದಿನ 2-3 ವರ್ಷಗಳಲ್ಲಿ ಹೀಗೆ ಉದ್ಯೋಗ ಕಳೆದುಕೊಳ್ಳುವ ಟೆಕಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ ಎಂದು ವರದಿಯೊಂದು ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
IBM India has denied a report which says that the IT company may let go at least 5,000 employees in coming months. This has been cleared by an IBM India spokesperson said in an emailed statement to a private TV channel.
Please Wait while comments are loading...